Shocking Video: ಕುದಿಯುತ್ತಿರುವ ನೀರಿನಲ್ಲಿ ಕುಳಿತು ಧ್ಯಾನಸ್ಥನಾದ ಬಾಲಕ; ಶುರುವಾಯ್ತು ಚರ್ಚೆ

Viral Video: ವಿಡಿಯೋದಲ್ಲಿ ಗಮನಿಸುವಂತೆ, ಬಾಲಕ ಸುಮಾರು 7 ರಿಂದ 9 ವರ್ಷದ ಒಳಗಿನವನಾಗಿರಬಹುದು. ಕೇಸರಿ ಬಣ್ಣದ ಶಾಲು ಹೊದ್ದು ಬಾಣಲೆಯಲ್ಲಿರುವ ನೀರಿನ ಒಳಗೆ ಕುಳಿತಿದ್ದಾನೆ.

Shocking Video: ಕುದಿಯುತ್ತಿರುವ ನೀರಿನಲ್ಲಿ ಕುಳಿತು ಧ್ಯಾನಸ್ಥನಾದ ಬಾಲಕ; ಶುರುವಾಯ್ತು ಚರ್ಚೆ
ಕುದಿಯುತ್ತಿರುವ ನೀರಿನಲ್ಲಿ ಕುಳಿತು ಧ್ಯಾನಸ್ಥನಾದ ಬಾಲಕ

ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆದ ಸುದ್ದಿಯೆಂದರೆ ಬಾಲಕನೋರ್ವ ಕುದಿಯುತ್ತಿರುವ ನೀರಿನಲ್ಲಿ ಕುಳಿತಿದ್ದಾನೆ. ಕೇಸರಿ ಶಾಲು ಹೊದ್ದ ಬಾಲಕ ಧ್ಯಾನಸ್ಥನಾಗಿ ನೀರಿನ ದೊಡ್ಡ ಪಾತ್ರೆಯಲ್ಲಿ ಕುಳಿತಿರುವುದನ್ನು ನೋಡಬಹುದು. ಪಾತ್ರೆಯ ಕೆಳಗೆ ಬೆಂಕಿ ಹಚ್ಚಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆಯೇ ಈ ದೃಶ್ಯದ ಕುರಿತಾಗಿ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.

ವಿಡಿಯೋದಲ್ಲಿ ಗಮನಿಸುವಂತೆ, ಬಾಲಕ ಸುಮಾರು 7 ರಿಂದ 9 ವರ್ಷದ ಒಳಗಿನವನಾಗಿರಬಹುದು. ಕೇಸರಿ ಬಣ್ಣದ ಶಾಲು ಹೊದ್ದು ಬಾಣಲೆಯಲ್ಲಿರುವ ನೀರಿನ ಒಳಗೆ ಕುಳಿತಿದ್ದಾನೆ. ನೀರಿನ ಪಾತ್ರೆಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಕೆಳಗೆ ಬೆಂಕಿ ಹಚ್ಚಲಾಗಿದೆ. ಸುತ್ತಲೂ ಜನರು ಸೇರಿರುವುದು ವಿಡಿಯೋದಲ್ಲಿ ನೋಡಬಹುದು.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಂದೀಪ್ ಬಿಶ್ವತ್ ಎಂಬುವವರು ವಿಡಿಯೋ ಹರಿಬಿಟ್ಟಿದ್ದಾರೆ. ಇದೇ 2021ರ ಭಾರತ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. 1.3 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ವಿಡಿಯೋ ಪಡೆದುಕೊಂಡಿದೆ.

ನೀರು ಕುದಿಯುತ್ತಿದೆ ಎಂದಾರೆ ಪಾತ್ರೆಯಲ್ಲಿರುವ ಹೂವುಗಳು ಏಕೆ ಹೊರಚೆಲ್ಲುತ್ತಿಲ್ಲ? ಇದು ಫೇಕ್ ವಿಡಿಯೋ ಎಂದು ಓರ್ವರು ಹೇಳಿದ್ದಾರೆ. ಇದೇ ರೀತಿಯ ಅನೇಕ ಪ್ರಶ್ನೆಗಳು ನೆಟ್ಟಿಗರಿಂದ ಕೇಳಿ ಬಂದಿದೆ. ಕೆಲವರು ಬಾಲಕನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

ಇದನ್ನೂ ಓದಿ:

Viral Video: ಪ್ರವಾಹದಲ್ಲಿ ಕೊಚ್ಚಿ ಹೋಗದಂತೆ ತಡೆಯಲು ಕಾರನ್ನು ಮನೆ​ಗೆ ಕಟ್ಟಿ ಹಾಕಿದ ಮಾಲೀಕ; ವಿಡಿಯೋ ವೈರಲ್

Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್

(Boy Sitting in boiling water shocking video goes viral)

Click on your DTH Provider to Add TV9 Kannada