Viral Video: ಶಾಲೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿಯ ಪ್ಲಾನ್​ ನೋಡಿದ್ರೆ ನೀವೂ ಬೆರಗಾಗ್ತೀರಾ!

TV9 Digital Desk

| Edited By: shruti hegde

Updated on: Sep 09, 2021 | 4:31 PM

ಶಾಲೆಯಿಂದ ತಪ್ಪಿಸಿಕೊಳ್ಳಲು ಹಲವರು ಅನಾರೋಗ್ಯದ ನಾಟಕವಾಡಿದರೆ, ಇನ್ನು ಕೆಲವರು ತರಗತಿಗಳನ್ನು ಬಂಕ್ ಮಾಡಲು ಛಾವಣಿ ಏರಲು ಪ್ರಯತ್ನಿಸುತ್ತಾರೆ.

Viral Video: ಶಾಲೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿಯ ಪ್ಲಾನ್​ ನೋಡಿದ್ರೆ ನೀವೂ ಬೆರಗಾಗ್ತೀರಾ!


ನಾವು ಚಿಕ್ಕವರಿದ್ದಾಗ ಶಾಲೆ ಬಂಕ್ ಮಾಡಲು ಎಷ್ಟೆಲ್ಲಾ ಪ್ಲಾನ್ ಮಾಡಿದ್ದೇವೆ? ನೆನಪಿದೆಯಾ? ತಮಾಷೆ ಅನಿಸುವ ಕೆಲವು ಘಟನೆಗಳು ಯಾವಾಗಲೂ ನೆನಪಿನಲ್ಲಿರುತ್ತದೆ. ಇದೀಗ ವೈರಲ್ ಆದ ವಿಡಿಯೋ ಸಹ ಅಂಥದ್ದೇ. ಸಕತ್​ ಪ್ಲ್ಯಾನ್​ ಮಾಡಿ ವಿದ್ಯಾರ್ಥಿನಿ ಸಾಲೆಯಿಂದ ಹೊರ ಬಂದಿದ್ದಾಳೆ. ಇವಳ ಸಾಹಸ ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ. ವಿಡಿಯೋದಲ್ಲಿ ಗಮನಿಸುವಂತೆ ವಿದ್ಯಾರ್ಥಿನಿ ಶಾಲೆಯಿಂದ ಹೊರಗೆ ಓಡಿ ಬರಲು ಸಾಹಸ ಪಟ್ಟಿದ್ದಾಳೆ. ಗೇಟಿನೊಳಗೆಲ್ಲಾ ನುಸುಳಿ, ಪರದಾಡಿ ಅಂತೂ ಇಂತೂ ಹೊರ ಬಂದಿದ್ದಾಳೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಶಾಲೆಯಿಂದ ತಪ್ಪಿಸಿಕೊಳ್ಳಲು ಹಲವರು ಅನಾರೋಗ್ಯದ ನಾಟಕವಾಡಿದರೆ, ಇನ್ನು ಕೆಲವರು ತರಗತಿಗಳನ್ನು ಬಂಕ್ ಮಾಡಲು ಛಾವಣಿ ಏರಲು ಪ್ರಯತ್ನಿಸುತ್ತಾರೆ. ಅನೇಕ ಬಾರಿ ನಾಟಕವಾಡಲು ಹೋಗಿ ಶಿಕ್ಷಕರಲ್ಲಿ ಸಿಕ್ಕಿ ಬಿದ್ದಿದ್ದೂ ಇದೆ. ಅವೆಲ್ಲಾ ನೆನೆಸಿಕೊಂಡರೆ ನಗು ಬರುವುದಂತೂ ನಿಜ. ಈ ದೃಶ್ಯದಲ್ಲಿ, ಹುಡುಗಿ ಶಾಲೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಳೆ. ಶಾಲೆಯ ಕಬ್ಬಿಣ ಗೇಟ್​ನ ಸರಳಿನ ಗ್ಯಾಪ್​ ನಡುವೆಯೇ ವಿದ್ಯಾರ್ಥಿನಿ ನುಸುಳಿದ್ದಾಳೆ.

ವಿದ್ಯಾರ್ಥಿನಿ ಸಮವಸ್ತ್ರದಲ್ಲಿರುವುದನ್ನು ನೋಡಬಹುದು. ತುಂಬಾ ತೆಳ್ಳಗಿರುವ ಕಾರಣ ಗೇಟಿನ ಸರಳಿನ ಮಧ್ಯೆ ಹೊರ ಬಂದಿದ್ದಾಳೆ. ಕೆಲವೇ ಸೆಕೆಂಡುಗಳಲ್ಲಿ ಆಕೆ ಹೊರಬಂದಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಸುಮಾರು 20 ಲಕ್ಷ ವೀಕ್ಷಣೆಗಳನ್ನು ಪಡೆದಿದುಕೊಂಡಿದೆ. ಹುಡುಗಿಯು ಗೇಟಿನಿಂದ ನುಸುಳುತ್ತಿರುವುದನ್ನು ನೋಡಿದ ನೆಟ್ಟಿಗರನ್ನು ಬೆರಗಾಗುವಂತೆ ಮಾಡಿದೆ. ವಿಡಿಯೋಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿವೆ.

ಇದನ್ನೂ ಓದಿ:

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

Viral Video: ಹಾವಿನ ಬಾಲ ಹಿಡಿದು ಕಚ್ಚಿಸಿಕೊಳ್ಳುತ್ತಿದ್ದ ಉರಗ ತಜ್ಞ; ಸೆಕೆಂಡುಗಳಲ್ಲಿ ಅಪಾಯದಿಂದ ಪಾರು

(Girl used to trick for run away from school video goes viral)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada