AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Story: 10 ವರ್ಷದಲ್ಲಿ 25 ಯುವಕರ ಜೊತೆ ಸಂಸಾರ ಮಾಡಿದ ವಿವಾಹಿತೆ; ಆಕೆಗಾಗಿ ಇನ್ನೂ ಕಾಯುತ್ತಿದ್ದಾನೆ ಪತಿರಾಯ

ಅಸ್ಸಾಂನಲ್ಲಿ ವಿವಾಹಿತ ಮಹಿಳೆಯೊಬ್ಬಳು 10 ವರ್ಷದಲ್ಲಿ ಬರೋಬ್ಬರಿ 25 ಪುರುಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಆದರೂ ಆಕೆ ವಾಪಾಸ್ ತನ್ನ ಬಳಿ ಬಂದೇ ಬರುತ್ತಾಳೆ ಎಂದು ಆಕೆಯ ಗಂಡ ಇನ್ನೂ ಕಾಯುತ್ತಲೇ ಇದ್ದಾನೆ!

Love Story: 10 ವರ್ಷದಲ್ಲಿ 25 ಯುವಕರ ಜೊತೆ ಸಂಸಾರ ಮಾಡಿದ ವಿವಾಹಿತೆ; ಆಕೆಗಾಗಿ ಇನ್ನೂ ಕಾಯುತ್ತಿದ್ದಾನೆ ಪತಿರಾಯ
ಸಂಗ್ರಹ ಚಿತ್ರ
TV9 Web
| Edited By: |

Updated on: Sep 09, 2021 | 8:01 PM

Share

ಗುವಾಹಟಿ: ಕೆಲವು ಸಂಬಂಧಗಳು ಹೀಗೇ ಇರುತ್ತದೆ ಎಂದು ಹೇಳುವುದು ಕಷ್ಟ. ಅದರಲ್ಲೂ ಪ್ರೀತಿಯ ವಿಷಯಕ್ಕೆ ಬಂದಾಗ ಸಂಬಂಧಗಳ ರೂಪುರೇಷೆಗಳೇ ಬದಲಾಗುತ್ತದೆ. ಮದುವೆಗಿಂತ ಮೊದಲು ಪ್ರೀತಿ ಮಾಡಿದರೆ ಆ ಸಂಬಂಧಕ್ಕೊಂದು ಗೌರವ, ಮಾನ್ಯತೆ ಇರುತ್ತದೆ. ಮದುವೆಯಾದ ಮೇಲೆ ಬೇರೊಬ್ಬರನ್ನು ಪ್ರೀತಿ ಮಾಡಿದರೆ ಆ ಸಂಬಂಧ ಅಕ್ರಮ ಎಂಬ ಹಣೆಪಟ್ಟಿ ತೊಡುತ್ತದೆ. ಈ ರೀತಿಯ ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುವುದರಲ್ಲಿ ಪುರುಷರಷ್ಟೇ ಮಹಿಳೆಯರು ಕೂಡ ಈಗೀಗ ಭಾರೀ ಸುದ್ದಿಯಾಗುತ್ತಿದ್ದಾರೆ. ಅಸ್ಸಾಂನಲ್ಲಿ ವಿವಾಹಿತ ಮಹಿಳೆಯೊಬ್ಬಳು 10 ವರ್ಷದಲ್ಲಿ ಬರೋಬ್ಬರಿ 25 ಪುರುಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಆದರೂ ಆಕೆ ವಾಪಾಸ್ ತನ್ನ ಬಳಿ ಬಂದೇ ಬರುತ್ತಾಳೆ ಎಂದು ಆಕೆಯ ಗಂಡ ಇನ್ನೂ ಕಾಯುತ್ತಲೇ ಇದ್ದಾನೆ!

ಅಸ್ಸಾಂನ ಮುಸ್ಲಿಂ ಮಹಿಳೆಯೊಬ್ಬಳು ಕಳೆದ 10 ವರ್ಷಗಳಲ್ಲಿ 25 ಪುರುಷರ ಜೊತೆ ಓಡಿ ಹೋಗಿದ್ದಾಳೆ. 40 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನನ್ನು ಬಿಟ್ಟು 25 ಗಂಡಸರ ಜೊತೆ ಸಂಸಾರ ನಡೆಸಿದ್ದಾಳೆ. ಮಫೀಜುದ್ದೀನ್ ಎಂಬ ಡ್ರೈವರ್ ಜೊತೆ ಮದುವೆಯಾಗಿದ್ದ ಆಕೆ ಪ್ರತಿ ಬಾರಿ ತಾನು ಓಡಿಹೋದವನನ್ನು ಬಿಟ್ಟು ವಾಪಾಸ್ ಬಂದಾಗಲೂ ಆಕೆಯ ಗಂಡ ಹಾಗೂ ಆಕೆಯ ಅತ್ತೆ-ಮಾವ ಆಕೆಯನ್ನು ವಾಪಾಸ್ ಮನೆಗೆ ಸೇರಿಸಿಕೊಂಡಿದ್ದಾರೆ.

ಈ ಮಹಿಳೆಗೆ 3 ವರ್ಷದ ಹಾಗೂ 3 ತಿಂಗಳ ಗಂಡು ಮಕ್ಕಳೂ ಇದ್ದಾರೆ. ಜೊತೆಗೆ 6 ವರ್ಷದ ಮಗಳೂ ಇದ್ದಾಳೆ. ತನಗಿಂತಲೂ ಚಿಕ್ಕ ವಯಸ್ಸಿನ ಯುವಕರ ಜೊತೆ ಪದೇ ಪದೆ ಓಡಿ ಹೋಗುತ್ತಿದ್ದ ಆ ಮಹಿಳೆ ಇದುವರೆಗೂ 25 ಗಂಡಸರ ಜೊತೆ ಸಂಸಾರ ನಡೆಸಿದ್ದಾಳೆ. ಅವರು ಕೈ ಕೊಟ್ಟ ನಂತರ ಗಂಡನ ಮನೆಗೆ ವಾಪಾಸ್ ಬರುತ್ತಿದ್ದ ಆಕೆ ಮತ್ತೆ ಬೇರೊಬ್ಬ ಪ್ರೇಮಿಯ ಜೊತೆ ಓಡಿ ಹೋಗುತ್ತಿದ್ದಳು.

ಹೀಗೆ ಪ್ರತಿ ಬಾರಿ ಆಕೆ ವಾಪಾಸ್ ಬಂದಾಗಲೂ ಆಕೆ ತನ್ನ ಗಂಡನಿಗೆ ಇನ್ನು ಮನೆ ಬಿಟ್ಟು ಹೋಗುವುದಿಲ್ಲ ಎಂದು ಆಕೆ ಪ್ರಾಮಿಸ್ ಮಾಡುತ್ತಿದ್ದಳು. ಆದರೆ, ಮತ್ತೆ ಒಂದೆರಡು ತಿಂಗಳೊಳಗೆ ಬೇರೊಬ್ಬನೊಂದಿಗೆ ಮನೆ ಬಿಟ್ಟು ಹೋಗುತ್ತಿದ್ದಳು ಎಂದು ಆಕೆಯ ಗಂಡ ಮಫೀಜುದ್ದೀನ್ ಹೇಳಿದ್ದಾರೆ.

ಕೆಲವೊಮ್ಮೆ ನನ್ನ ಹೆಂಡತಿ ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಹೇಳುತ್ತಿದ್ದಳು. ಇನ್ನು ಕೆಲವೊಮ್ಮೆ ಅಪ್ಪ-ಅಮ್ಮನಿಗೆ ಹುಷಾರಿರಲಿಲ್ಲ ಅದಕ್ಕೆ ಹೋಗಿದ್ದೆ ಎನ್ನುತ್ತಿದ್ದಳು. ನಮಗೆ ಮೂವರು ಮಕ್ಕಳಿದ್ದಾರೆ. ಅವರಿಗೋಸ್ಕರ ಆಕೆ ವಾಪಾಸ್ ಬಂದಾಗಲೆಲ್ಲ ಆಕೆ ಎಲ್ಲಿಗೆ ಹೋಗಿದ್ದಳು ಎಂಬುದು ಗೊತ್ತಿದ್ದರೂ ನಾನು ಸ್ವೀಕಾರ ಮಾಡುತ್ತಿದ್ದೆ ಎಂದು ಮಫೀಜುದ್ದೀನ್ ಹೇಳಿದ್ದಾರೆ.

ಕಳೆದ ವಾರ ನನ್ನ ಹೆಂಡತಿ 3 ತಿಂಗಳ ಮಗುವನ್ನು ಬಿಟ್ಟು ಮತ್ತೊಮ್ಮೆ ಓಡಿ ಹೋಗಿದ್ದಾಳೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಅಪ್ಪನಿಂದ ಈ ವಿಷಯ ಗೊತ್ತಾಯಿತು. ಆಕೆ ಮನೆ ಬಿಟ್ಟು ಹೋಗುವ ಮುನ್ನ 22 ಸಾವಿರ ರೂ. ಹಣ, ಚಿನ್ನಾಭರಣ ಕದ್ದುಕೊಂಡು ಹೋಗಿದ್ದಾಳೆ. ಈ ಬಾರಿ ಆಕೆ ಯಾರ ಜೊತೆ ಹೋಗಿದ್ದಾಳೆ, ಆಕೆಯನ್ನು ಎಲ್ಲಿ ಹುಡುಕಬೇಕು ಎಂಬುದು ಕೂಡ ಗೊತ್ತಿಲ್ಲ. ಮಗುವಿಗೆ ಹಾಲು ಕೊಡುವವರಿಲ್ಲದೆ ಅಮ್ಮನಿಗಾಗಿ ದಿನವೂ ಹಠ ಮಾಡುತ್ತಿದೆ. ಇದು 25ನೇ ಬಾರಿ ಆಕೆ ಪರ ಪುರುಷರ ಜೊತೆ ಮನೆ ಬಿಟ್ಟು ಹೋಗಿರುವುದು ಎಂದು ಆಕೆಯ ಗಂಡ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ

Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!

(Crime News: Assam Woman Elopes 25 Times With Different Men In 10 Years Husband Still Willing To Accept Her)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ