Viral Video: ಹಾವು ರಕ್ಷಕನ ಕೌಶಲ್ಯ ನೋಡಿ ಆಶ್ಚರ್ಯಗೊಂಡ ನೆಟ್ಟಿಗರು; ವಿಡಿಯೋ ವೈರಲ್
ಪ್ರಾರಂಭದಲ್ಲಿ ಸ್ಕೂಟರಿನ ಹ್ಯಾಂಡಲ್ಅನ್ನು ರಾಡ್ನಿಂದ ತೆಗೆಯುತ್ತಿದ್ದಂತೆಯೇ ದೈತ್ಯಾಕಾರದ ನಾಗರ ಹಾವು ತಲೆಯೆತ್ತಿ ನಿಂತಿದೆ. ಸ್ವಲ್ಪ ಸಮಯದ ಬಳಿಕ ಹಾವು ರಕ್ಷಕ, ನೀರು ತುಂಬಿಸುವ ಕ್ಯಾನ್ನಲ್ಲಿ ಹಾವು ಸರಾಗವಾಗಿ ಹೋಗುವಂತೆ ಮಾಡಿದ್ದಾನೆ.
ಹಾವು ಹಿಡಿಯುವ ಕಲೆ ಅಷ್ಟು ಸುಲಭವಲ್ಲ. ಅಪಾಯಕಾರಿಯೂ ಹೌದು. ವಿಷಕಾರಿ ಹಾವು ಹಿಡಿಯುವಲ್ಲಿ ಸಾಮಾನ್ಯ ಜನರು ಎಂದೂ ಮುಂದಾಗಬಾರದು. ಪರಿಣಿತರು ಹಾಗೂ ತರಬೇತಿ ದಾರರು ಮಾತ್ರ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗುತ್ತಾರೆ. ಇದೀಗ ಫುಲ್ ಸುದ್ದಿಯಲ್ಲಿವ ವಿಡಿಯೋದಲ್ಲಿ ಹಾವು ರಕ್ಷನ ಕೌಶಲ್ಯ ನೋಡಿದ ನೆಟ್ಟಿಗರು ಆಶ್ವರ್ಯಗೊಂಡಿದ್ದಾರೆ. ನಾಗರಹಾವು ಸ್ಕೂಟರ್ನ ಹ್ಯಾಂಡಲ್ ಒಳಗೆ ಸಿಲುಕಿಕೊಂಡಿದೆ. ಹಾವು ರಕ್ಷಕ ನೀರು ತುಂಬಿಸುವ ಪ್ಲಾಸ್ಟಿಕ್ ಕ್ಯಾನ್ನಲ್ಲಿ ಹಾವನ್ನು ತುಂಬಿದ್ದಾನೆ. ಚಮತ್ಕಾರಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ವಿಡಿಯೋ ಒಂದು ವರ್ಷಕ್ಕಿಂತ ಹಳೆಯದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಎರಡು ನಿಮಿಷಗಳಿರುವ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಸ್ಕೂಟರ್ ಹ್ಯಾಂಡಲ್ನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವನ್ನು ಬುದ್ದಿವಂತಿಕೆಯಿಂದ ಬಾಟಲಿಯ ಒಳಗೆ ಹೋಗುವಂತೆ ಮಾಡಿದ ಹಾವು ರಕ್ಷಕನ ಚಮತ್ಕಾರದ ವಿಡಿಯೋವಿದು.
Such guests during rains are common… But uncommon is the method used to rescue it. Never ever try this? pic.twitter.com/zS4h5tDBe8
— Susanta Nanda IFS (@susantananda3) September 7, 2021
ಪ್ರಾರಂಭದಲ್ಲಿ ಸ್ಕೂಟರಿನ ಹ್ಯಾಂಡಲ್ಅನ್ನು ರಾಡ್ನಿಂದ ತೆಗೆಯುತ್ತಿದ್ದಂತೆಯೇ ದೈತ್ಯಾಕಾರದ ನಾಗರ ಹಾವು ತಲೆಯೆತ್ತಿ ನಿಂತಿದೆ. ಸ್ವಲ್ಪ ಸಮಯದ ಬಳಿಕ ಆತ ನೀರು ತುಂಬಿಸುವ ಕ್ಯಾನ್ನಲ್ಲಿ ಹಾವು ಸರಾಗವಾಗಿ ಹೋಗುವಂತೆ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಹಾವು ರಕ್ಷಕನ ಬುದ್ಧಿವಂತಿಕೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಫುಲ್ ವೈರಲ್ ಆಗಿದ್ದು 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾವು ರಕ್ಷಕನ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಆದರೆ ನೀವೂ ಹೀಗೆಲ್ಲಾ ಮಾಡದಿರಿ.
ಇದನ್ನೂ ಓದಿ:
Shocking News: ಹಾವು ಕಡಿತಕ್ಕೆ ಸೇಡು ತೀರಿಸಿಕೊಳ್ಳಲು ಹಾವನ್ನೇ ಜಗಿದ ಕುಡಿದು ಅಮಲಿನಲ್ಲಿದ್ದ ಯುವಕರು!‘
Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ