Shocking Video: ಇಡೀ ಜಿಂಕೆಯನ್ನು ನುಂಗುತ್ತಿದೆ ದೈತ್ಯ ಹೆಬ್ಬಾವು! ಭಯಾನಕ ವಿಡಿಯೋ ನೋಡಿ ಕಂಗಾಲಾಗ್ಬೇಡಿ
Viral Video: ಹೆಬ್ಬಾವು ಜಿಂಕೆಯನ್ನು ಸಂಪೂರ್ಣವಾಗಿ ನುಂಗಿತು. ಘಟನೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು. ಮೊಬೈಲ್ನಲ್ಲಿ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಲ್ಲೊಂದು ದೈತ್ಯಾಕಾರದ ಹೆಬ್ಬಾವು ಇಡೀ ಜಿಂಕೆಯನ್ನೇ ನುಂಗುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಘಟನೆ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ. ಲಾಲಾಪುರ ಪ್ಲಾಂಟೇಶನ್ನಲ್ಲಿ ನಡೆದ ಘಟನೆಯನ್ನು ಕ್ಯಾಮಾರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 8 ಅಡಿ ಉದ್ದದ ದೈತ್ಯಾಕಾರದ ಹೆಬ್ಬಾವು ಇಡೀ ಜಿಂಕೆಯನ್ನೇ ನುಂಗುತ್ತಿರುವ ವಿಡಿಯೋವನ್ನು ನೋಡಬಹುದು.
ಹೆಬ್ಬಾವು ಜಿಂಕೆಯನ್ನು ಸಂಪೂರ್ಣವಾಗಿ ನುಂಗಿತು. ಘಟನೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು. ಮೊಬೈಲ್ನಲ್ಲಿ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ಲಭ್ಯವಾಗಿದೆ.
विशालकाय अजगर ने हिरण को दबोचा, फिर हुआ ये हाल…#ViralVideo pic.twitter.com/6WMeXw4nVZ
— alkesh kushwaha (@alkesh_kushwaha) September 15, 2021
ರಾಜಸ್ಥಾನದಲ್ಲಿ ಕಂಡು ಬರುವ ದಟ್ಟವಾದ ಅರಣ್ಯದಲ್ಲಿ ಜಿಂಕೆ, ಹೆಬ್ಬಾವು, ಕರಡಿ ಸೇರಿದಂತೆ ಕಾಡು ಪ್ರಾಣಿಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ಹಾವುಗಳು ಇಲಿ, ಮೊಲದಂತಹ ಸಣ್ಣ ಪ್ರಾಣಿಗಳನ್ನು ನುಂಗುವ ವಿಡಿಯೋಗಳು ಸಾಕಷ್ಟು ಹರಿದಾಡುತ್ತವೆ. ಆದರೆ ಹೆಬ್ಬಾವು ಇಡೀ ಜಿಂಕೆಯನ್ನೇ ನುಂಗುತ್ತಿರುವ ಅಪರೂಪದ ದೃಶ್ಯವಿದು, ಕೆಲವರು ಹಾವಿನ ಜೀರ್ಣ ಸಾಮರ್ಥ್ಯದ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ:
ವೈರಲ್ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್
ಯಶ್-ರಾಧಿಕಾ ಪಂಡಿತ್ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್; ವಿಡಿಯೋ ವೈರಲ್
(Giant python eating deer shocking video goes viral)