ಯಶ್-ರಾಧಿಕಾ ಪಂಡಿತ್​ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್​​; ವಿಡಿಯೋ ವೈರಲ್​

ಇಂದು ಗಣೇಶ ಚತುರ್ಥಿ. ಎಲ್ಲೆಡೆ ಇಂದು ಗಣಪನಿಗೆ ಪೂಜೆ ಸಲ್ಲಿಸಲಾಗಿದೆ. ವಿಶೇಷ ಬಗೆಯ ಅಡುಗೆಗಳನ್ನು ಮಾಡಿ ಗಣಪನಿಗೆ ನೈವೇದ್ಯ ಮಾಡಲಾಗಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ಹಬ್ಬದ ವಾತಾವರಣ ಜೋರಾಗಿಯೇ ಇತ್ತು.

ಯಶ್-ರಾಧಿಕಾ ಪಂಡಿತ್​ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್​​; ವಿಡಿಯೋ ವೈರಲ್​
ಯಶ್-ರಾಧಿಕಾ ಪಂಡಿತ್​ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್​​; ವಿಡಿಯೋ ವೈರಲ್​
TV9kannada Web Team

| Edited By: Rajesh Duggumane

Sep 10, 2021 | 9:50 PM

ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮಕ್ಕಳಾದ  ಯಥರ್ವ್​ ಹಾಗೂ ಆಯ್ರಾ ಈಗತಾನೆ ಬೆಳೆಯುತ್ತಿದ್ದಾರೆ. ಅವರಿಗೆ ಸೋಶಿಯಲ್​ ಮೀಡಿಯಾ ಬಗ್ಗೆ ಜ್ಞಾನ ಇಲ್ಲ. ಆದರೆ, ರಾಧಿಕಾ ಪಂಡಿತ್​ ಅವರು ತಮ್ಮ ಮಕ್ಕಳ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಬರೆದುಕೊಳ್ಳುತ್ತಲೇ ಇರುತ್ತಾರೆ. ಮಕ್ಕಳು ಮಾಡುವ ತುಂಟಾಟದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗ ರಾಧಿಕಾ ಪಂಡಿತ್​ ಕುಟುಂಬದ ಜತೆ ಗಣೇಶ ಚತುರ್ಥಿ ಆಚರಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ .

ಇಂದು ಗಣೇಶ ಚತುರ್ಥಿ. ಎಲ್ಲೆಡೆ ಇಂದು ಗಣಪನಿಗೆ ಪೂಜೆ ಸಲ್ಲಿಸಲಾಗಿದೆ. ವಿಶೇಷ ಬಗೆಯ ಅಡುಗೆಗಳನ್ನು ಮಾಡಿ ಗಣಪನಿಗೆ ನೈವೇದ್ಯ ಮಾಡಲಾಗಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ಹಬ್ಬದ ವಾತಾವರಣ ಜೋರಾಗಿಯೇ ಇತ್ತು. ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಹೇಗೆ ಹಬ್ಬ ಆಚರಿಸಲಾಯಿತು ಎನ್ನುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್​ ಕೂಡ ಮನೆಯಲ್ಲಿ ಸಿಂಪಲ್​ ಆಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳಿಗೋಸ್ಕರ ಅವರು ಹಂಚಿಕೊಂಡಿದ್ದಾರೆ.

ಯಶ್​ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ರಾಧಿಕಾ ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೈಲೈಟ್​ ಆಗಿದ್ದು ಯಥರ್ವ್​. ತಂದೆ ಪೂಜೆ ಮಾಡುತ್ತಿದ್ದರೆ ಈ ಪುಟ್ಟ ಹುಡುಗ ಗಂಟೆ ಬಾರಿಸಿದ್ದಾನೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ಆಯ್ರಾ ಪೂಜೆಗೂ ಮೊದಲೇ ಪ್ರಸಾದ ತಿಂದಿದ್ದಾಳೆ. ಈ ಫೋಟೋಗಳನ್ನು ಕೂಡ ರಾಧಿಕಾ ಪಂಡಿತ್​ ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಬೇಡಿಕೆ. ಈ ಬೇಡಿಕೆಯನ್ನು ಅವರು ಯಾವಾಗ ಈಡೇರಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇನ್ನೂ ಹಾಗೇಯೆ ಇದೆ.

ಇನ್ನು, ಪ್ರಿಯಾಂಕಾ ಉಪೇಂದ್ರ, ನಟ ನಿಖಿಲ್​ ಕುಮಾರಸ್ವಾಮಿ, ಅದಿತಿ ಪ್ರಭುದೇವ ಸೇರಿ ಸಾಕಷ್ಟು ಮಂದಿ ತಮ್ಮ ಮನೆಯಲ್ಲಿ ಹಬ್ಬ ಆಚರಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada