Mi11 Ultra smartphone launch: ಆ್ಯಪಲ್, ಸ್ಯಾಮ್ಸಂಗ್​ಗೂ ಸಡ್ಡು ಹೊಡೆಯಲು ಬಂತು Mi11 ಅಲ್ಟ್ರಾ

ಶಿಯೋಮಿಯಿಂದ Mi11 Ultra ಸ್ಮಾರ್ಟ್​ಫೋನ್ ಭಾರತದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಈ ದುಬಾರಿ ಫೋನ್​ ಅನ್ನು ಆಪಲ್ ಹಾಗೂ ಸ್ಯಾಮ್ಸಂಗ್ ಫೋನ್​ಗಳಿಗೆ ಸಡ್ಡು ಹೊಡೆಯುವಂತೆ ರೂಪಿಸಲಾಗಿದೆ.

Mi11 Ultra smartphone launch: ಆ್ಯಪಲ್, ಸ್ಯಾಮ್ಸಂಗ್​ಗೂ ಸಡ್ಡು ಹೊಡೆಯಲು ಬಂತು Mi11 ಅಲ್ಟ್ರಾ
Mi 11 ಅಲ್ಟ್ರಾ ಸಿರೀಸ್
Follow us
Srinivas Mata
|

Updated on: Apr 24, 2021 | 5:40 PM

ಶಿಯೋಮಿ ಕಂಪೆನಿಯಿಂದ ಮೂರು ಹೊಸ ಸ್ಮಾರ್ಟ್​ಫೋನ್​ಗಳನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಈ ಹೊಸ ಫೋನ್​ಗಳ ಸರಣಿಯಲ್ಲಿ ಚೈನೀಸ್ ಬ್ರ್ಯಾಂಡ್​ ಆದ ಶಿಯೋಮಿಯಿಂದ Mi ಅಲ್ಟ್ರಾ ಎಂಬ ದುಬಾರಿ ಫೋನ್ ಅನ್ನು ಸಹ ಪರಿಚಯಿಸಲಾಗಿದೆ. ಈ ತನಕ ಭಾರತದಲ್ಲಿ ಬಿಡುಗಡೆ ಆಗಿರುವ Mi ಕಂಪೆನಿಯ ಫೋನ್​ಗಳಲ್ಲೇ ಇದು ದುಬಾರಿಯಾಗಿದೆ. ಈ ದರವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ Mi ಅಲ್ಟ್ರಾ ಸ್ಮಾರ್ಟ್​ಫೋನ್​ನಲ್ಲಿ ಹಲವು ಫ್ಲ್ಯಾಗ್​ಷಿಪ್ ವೈಶಿಷ್ಟ್ಯಗಳಿವೆ. ಶಿಯೋಮಿ Mi11 ಅಲ್ಟ್ರಾಕ್ಕೆ ಭಾರತದಲ್ಲಿ ರೂ. 69,999 ಬೆಲೆ ನಿಗದಿ ಮಾಡಲಾಗಿದೆ. ಈ ಹಿಂದಿನ ವರ್ಷದಲ್ಲಿ ಬಂದಿದ್ದ ಫ್ಲ್ಯಾಗ್​ಷಿಪ್ ಫೋನ್​ನ ಬೆಲೆ ರೂ. 49,999 ಎಂದು ನಿಗದಿ ಮಾಡಲಾಗಿತ್ತು. ಬಿಡುಗಡೆಯಾದ ಮೂರು ವಾರಕ್ಕೆ 400 ಕೋಟಿ ರೂಪಾಯಿಯಷ್ಟು ವ್ಯವಹಾರವನ್ನು ಆ ಫೋನ್ ಮಾಡಿತ್ತು ಎಂದು ಶಿಯೋಮಿ ಹೇಳಿಕೊಂಡಿತ್ತು.

Mi11 ಅಲ್ಟ್ರಾದ ಹಿಂಬದಿಯ ಪ್ಯಾನೆಲ್​ನಲ್ಲಿ “ಪ್ರೋ ಗುಣಮಟ್ಟದ” ಕ್ಯಾಮೆರಾದೊಂದಿಗೆ ಬರುತ್ತದೆ. ಇದರಲ್ಲಿ 48MP ಅಲ್ಟ್ರಾ-ವೈಡ್ ಕ್ಯಾಮೆರಾ, 50MP ಟ್ರೂಪಿಕ್ಸೆಲ್ GN2 ಕ್ಯಾಮೆರಾ ಮತ್ತು 48MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಬರುತ್ತದೆ. ಇನ್ನು ಈ ಫೋನ್​ನಲ್ಲಿ ಕ್ವಾಲ್​ಕಾಮ್​ನ 5G ಚಿಪ್​ಸೆಟ್ ಇದೆ. ಸ್ನ್ಯಾಪ್​ಡ್ರ್ಯಾಗನ್ 888 ಪ್ರೊಸೆಸರ್​ನೊಂದಿಗೆ ಬರಲಿದ್ದು, ಈ ಹಿಂದಿನ ವರ್ಷನ್​ಗಿಂತ ಶೇಕಡಾ 35ರಷ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತದೆ.

Mi11 ಅಲ್ಟ್ರಾದ ಲಭ್ಯತೆಯ ಬಗ್ಗೆ ಇನ್ನೂ ಘೋಷಣೆ ಮಾಡಬೇಕಿದೆ. Mi11X ಪ್ರೋ ಮತ್ತು Mi11X ಫೋನ್​ಗಳಿಗೆ ಕ್ರಮವಾಗಿ ರೂ. 29,999ರಿಂದ ರೂ. 41,999ರ ಮಧ್ಯೆ ಬೆಲೆ ನಿಗದಿ ಮಾಡಿದೆ. Mi11X ಪ್ರೋಗೆ ಭಾರತದಲ್ಲಿ ಮೇ 3ರಿಂದ ಹಾಗೂ Mi11Xಗೆ ಏಪ್ರಿಲ್ 27 ಮೇಲ್ಪಟ್ಟು ಪ್ರೀ ಆರ್ಡರ್ ಮಾಡಬಹುದು. ಈಗಿನ ಫ್ಲ್ಯಾಗ್​ಷಿಪ್ ಫೋನ್​ನ ಬಿಡುಗಡೆ ಮೂಲಕವಾಗಿ ತನ್ನದೇ ಸ್ಮಾರ್ಟ್​ಫೊನ್ ಲೈನ್​ಅಪ್ ಆದ ರೆಡ್​ಮಿಯಿಂದ ಬಹಳ ದೂರಕ್ಕೆ ಸಾಗಿದಂತಾಗಿದೆ. 2020ರ ಆರಂಭದಲ್ಲಿ ಶಿಯೋಮಿ ಘೋಷಣೆ ಮಾಡಿದ ಪ್ರಕಾರ, Mi ಹಾಗೂ ರೆಡ್​ಮಿ ಎರಡೂ ಪ್ರತ್ಯೇಕ ಬ್ರ್ಯಾಂಡ್​ಗಳು, ಪ್ರತ್ಯೇಕ ಉತ್ಪನ್ನಗಳು, ಉದ್ಯಮ ಮತ್ತು ಮಾರ್ಕೆಟಿಂಗ್​ ತಂಡಗಳಾಗಿ ಕಾರ್ಯ ನಿರ್ವಹಣೆ ಮಾಡುತ್ತವೆ.

“Mi11 ಸರಣಿ ಬಿಡುಗಡೆಯೊಂದಿಗೆ ಬರೀ ಭವಿಷ್ಯದ ಸಾಕ್ಷಿಯ ತಂತ್ರಜ್ಞಾನ ಮಾತ್ರ ಪರಿಚಯಿಸಿಲ್ಲ. ಇದರ ಜತೆಗೆ ಬೇರೆ ಯಾವುದರಲ್ಲೂ ಇಲ್ಲದಂತೆ ಬಳಕೆದಾರರ ಅನುಭವನ್ನು ಮೇಲಕ್ಕೆ ಏರಿಸಿದ್ದೇವೆ. ಆವಿಷ್ಕಾರದ ವಿಚಾರದಲ್ಲಿ ಗಡಿಯನ್ನು ಮೀರಿದ್ದೇವೆ. ಕ್ಯಾಮೆರಾ, ಪರ್ಫಾರ್ಮೆನ್ಸ್, ಧ್ವನಿ ಮತ್ತು ಡಿಸ್​ಪ್ಲೇಯಲ್ಲಿ ತುಂಬ ದೊಡ್ಡ ಹೆಜ್ಜೆಯನ್ನು ಇರಿಸಿದ್ದೇವೆ,” ಎಂದು ಶಿಯೋಮಿ ಇಂಡಿಯಾ ಮಾರ್ಕೆಟಿಂಗ್ ಮುಖ್ಯಸ್ಥ ಸುಮಿತ್ ಸೋನಲ್ ಹೇಳಿದ್ದಾರೆ. Mi ಜತೆಗೆ ಮಾರ್ಕೆಟ್​ನಲ್ಲಿ ಪ್ರೀಮಿಯಂ ಬ್ರ್ಯಾಂಡ್​ ಸೃಷ್ಟಿಸಲು ಗಮನ ನೆಟ್ಟಿದ್ದೇವೆ. ನಮ್ಮ Mi ಅಭಿಮಾನಿಗಳಿಗೆ ಹೊಸ ಮತ್ತು ಆಧುನಿಕ ತಂತ್ರಜ್ಞಾನ ಒದಗಿಸಬೇಕು ಎಂಬುದು ನಮ್ಮ ಗುರಿ. ರೆಡ್​ಮಿ ಮತ್ತು Mi ಮಧ್ಯೆ ವ್ಯತ್ಯಾಸ ಕಾಣುವಂತೆ ಮಾಡುವ ದೃಷ್ಟಿಯಿಂದ Mi ಪೋರ್ಟ್​ಫೋಲಿಯೋ ಅಡಿಯಲ್ಲಿ ಪ್ರೀಮಿಯಂ ಪ್ರಾಡಕ್ಟ್​ಗಳನ್ನು ಬಿಡುಗಡೆ ಮಾಡುವುದು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Miನಿಂದ QLED TV 75 ದುಬಾರಿ ಟೀವಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 1,19,999 ನಿಗದಿ

(Xiaomi’s Mi11 Ultra flagship smart phone launched in India along with 2 other models with same series)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ