Miನಿಂದ QLED TV 75 ದುಬಾರಿ ಟೀವಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 1,19,999 ನಿಗದಿ

Mi QLED TV 75: ಶಿಯೋಮಿಯಿಂದ ಭಾರತದಲ್ಲಿ Mi QLED TV 75 ಬಿಡುಗಡೆ ಆಗಿದೆ. ಇದು ಈ ಬ್ರ್ಯಾಂಡ್​ನ ಅತ್ಯಂತ ದುಬಾರಿ ಟೀವಿ ಆಗಿದೆ. ಈ ಟೀವಿ ಬೆಲೆ, ವೈಶಿಷ್ಟ್ಯ ಮತ್ತಿತರ ಮಾಹಿತಿ ಇಲ್ಲಿದೆ.

Miನಿಂದ QLED TV 75 ದುಬಾರಿ ಟೀವಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 1,19,999 ನಿಗದಿ
Mi QLED 75 TV
Follow us
Srinivas Mata
|

Updated on: Apr 23, 2021 | 7:09 PM

ಶಿಯೋಮಿಯಿಂದ Mi 11ರ ಸರಣಿ ಹೆಸರಲ್ಲಿ ಹಲವು ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ತನ್ನ ಬ್ರ್ಯಾಂಡ್​ನ ಅತ್ಯಂತ ದುಬಾರಿ ಸ್ಮಾರ್ಟ್​ ಟೀವಿ Mi QLED TV 75 ಬಿಡುಗಡೆ ಮಾಡಿದೆ. ಈ ಹೊಸ ಟೀವಿಯಲ್ಲಿ ಕ್ವಾಂಟಂ ಡಾಟ್ ಬೇಸ್ಡ್ ಎಲ್​ಇಡಿ (QLED) ಬಳಕೆ ಮಾಡಲಾಗಿದೆ. 75 ಇಂಚಿನ ಅಳತೆಯಲ್ಲಿ ಬರುತ್ತದೆ. ಇನ್ನು ಬೆಲೆಯ ವಿಚಾರಕ್ಕೆ ಬಂದರೆ ಹೊಸ ಶಿಯೋಮಿ ಟಿವಿಗೆ ರೂ. 1,19,999 ಎಂದು ದರವನ್ನು ನಿಗದಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ತನ್ನ ಬ್ರ್ಯಾಂಡ್​ನ ಟೀವಿ ಬೆಲೆ 1 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ನಿಗದಿ ಮಾಡಿದೆ.

ಈ ಹೊಸ ಟೀವಿ ಫ್ಲಿಪ್​ಕಾರ್ಟ್, Mi ಹೋಮ್ ಸ್ಟೋರ್ಸ್, ಆಯ್ದ ಆಫ್​ಲೈನ್ ರೀಟೇಲ್​ ಸೋರ್ಸ್​ಗಳಲ್ಲಿ ದೊರೆಯುತ್ತವೆ. ಮೊದಲ ಬಾರಿಗೆ ಏಪ್ರಿಲ್ 27ಕ್ಕೆ ಮಾರಾಟ ಶುರುವಾಗುತ್ತದೆ. ಹೊಸ ಶಿಯೋಮಿ ಟೀವಿಯಲ್ಲಿ ರಿಫ್ರೆಷ್ ದರ 120Hz, ಜತೆಗೆ MEMC ಇದೆ. ಹೈ ರಿಫ್ರೆಷ್ ದರದ ಸ್ಕ್ರೀನ್​ ಜತೆಗೆ ಎಚ್​ಡಿಎಂಐ 2.1 ಪೋರ್ಟ್ಸ್ ಬರುತ್ತದೆ. ಇದರಿಂದ 4K ರೆಸಲ್ಯೂಷನ್ 120Hzನಲ್ಲಿ ದೊರೆಯುತ್ತದೆ. ಹೆಚ್ಚುವರಿ HDMI 2.1 ಪೋರ್ಟ್ಸ್ ಹೊಸ ತಲೆಮಾರಿನ ಗೇಮಿಂಗ್ ಅನುಭವದ ಜತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಶಿಯೋಮಿ ಹೇಳಿಕೊಳ್ಳುವಂತೆ, ಹೊಸ Mi ಟೀವಿಯಲ್ಲಿ ಗರಿಷ್ಠ ಪ್ರಮಾಣದ ಬ್ರೈಟ್​ನೆಸ್ 1000 nits ಬರುತ್ತದೆ. ಟೀವಿಯು ತೆಳುವಾದ ಬೆಜೆಲ್ಸ್​ನೊಂದಿಗೆ ಬರಲಿದ್ದು, ಇದು ಸ್ಕ್ರೀನ್ ಟು ಬಾಡಿ ರೇಷಿಯೋ ಶೇ 97ರಷ್ಟು ನೀಡುತ್ತದೆ. ತೀಕ್ಷ್ಣವಾದ ಕಪ್ಪು ಮತ್ತು ಕಾಂಟ್ರಾಸ್ಟ್ ಮಟ್ಟವನ್ನು ಒದಗಿಸುವ ಸಲುವಾಗಿ ಹೊಸ ಶಿಯೋಮಿ ಟೀವಿಯಲ್ಲಿ 192- ಝೋನ್ ಫುಲ್ ಅರೆ ಲೋಕಲ್ ಡಿಮ್ಮಿಂಗ್ ಬಳಸಲಾಗಿದೆ. ಒಟಿಟಿ ಕಂಟೆಂಟ್​ಗಳಿಗಾಗಿ ಈ ಟೀವಿಯು ಡಾಲ್ಬಿ ವಿಷನ್, HDR10+, HDR10, HLG ಸಪೋರ್ಟ್ ಮಾಡುತ್ತದೆ.

ಇನ್ನು ಟೀವಿಯು 30W ಸ್ಟಿರಿಯೋ ಸ್ಪೀಕರ್ಸ್, 6 ಡ್ರೈವರ್ಸ್, ಜತೆಗೆ ಎರಡು ಟ್ವಿಟರ್ಸ್, 2 ಫುಲ್ ರೇಂಜ್ ಡ್ರೈವರ್ಸ್ ಮತ್ತು ಎರಡು ವೂಫರ್ ಡ್ರೈವರ್ಸ್​ ಜತೆ ಬರುತ್ತದೆ. ಟೀವಿಯಲ್ಲಿ ಮೀಡಿಯಾಟೆಕ್ MT9611 ಪ್ರೊಸೆಸರ್, 4 ARM Cortex A55 ಕೋರ್ 1.5GHz ಮತ್ತು ಮಾಲಿ G52 MP2 GPU ಇರುತ್ತದೆ.

ಇದನ್ನೂ ಓದಿ: Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

(Mi launched QLED 75 TV in India. This is the most expensive tv released by Mi under its brand. Price, features and other details of tv are here)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್