ರಿಯಲ್​ಮಿ 8 5G ಫೋನ್ ಭಾರತದಲ್ಲಿ ಬಿಡುಗಡೆ, ಬೆಲೆ ರೂ. 14,999ರಿಂದ ಆರಂಭ

Realme 8 5G phone: ರಿಯಲ್​ಮಿ 8 5G ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಏಪ್ರಿಲ್ 28ನೇ ತಾರೀಕಿನಿಂದ ಮಾರಾಟ ಆರಂಭವಾಗಲಿದೆ. ಈ ಫೋನ್​ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಯಲ್​ಮಿ 8 5G ಫೋನ್ ಭಾರತದಲ್ಲಿ ಬಿಡುಗಡೆ, ಬೆಲೆ ರೂ. 14,999ರಿಂದ ಆರಂಭ
ರಿಯಲ್​ಮಿ 8 5G ಮೊಬೈಲ್ ಫೋನ್
Follow us
Srinivas Mata
|

Updated on: Apr 22, 2021 | 8:17 PM

ರಿಯಲ್​ಮಿ ಕಂಪೆನಿಯು ಹೊಸ 5G ವರ್ಷನ್ ರಿಯಲ್​ಮಿ 8 ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್​ಫೋನ್​ನಿಂದ ಸಂಖ್ಯೆಯ ಸರಣಿಯಲ್ಲಿ (ನಂಬರ್ ಸೀರೀಸ್) ಇದು ಮೊದಲ 5G ಸಾಧನವಾಗಿದೆ. ರಿಯಲ್​ಮಿ 8 5G ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್​ನೊಂದಿಗೆ ಬರುತ್ತದೆ. ಜತೆಗೆ ಹೊಸ ಚಿಪ್​ಸೆಟ್​ನೊಂದಿಗೆ ಬಂದಿರುವ ಮೊದಲ ಸ್ಮಾರ್ಟ್​ಫೋನ್ ಇದಾಗಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ಹೊಸ ಸ್ಮಾರ್ಟ್​ಫೋನ್ 5G ಕನೆಕ್ಟಿವಿಟಿ ಒದಗಿಸಲಿದ್ದು, ಮಧ್ಯಮ- ರೇಂಜ್​ನ ಸ್ಮಾರ್ಟ್​ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಅಂದ ಹಾಗೆ ಹೊಸ ರಿಯಲ್​ಮಿ 8 5G ಮೊಬೈಲ್ ಫೋನ್ ಎರಡು ಬಗೆಯ ಸಂಗ್ರಹ ಸಾಮರ್ಥ್ಯದೊಂದಿಗೆ ಬರುತ್ತದೆ. 4GB RAM ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯ ಇರುವ ಫೋನ್​ ಬೆಲೆ 14,999 ರೂಪಾಯಿ ಇದೆ. ಇನ್ನು 8GB RAM ಮತ್ತು 128 GB ಆಂತರಿಕ ಸಂಗ್ರಹ ಸಾಮರ್ಥ್ಯದ ಫೋನ್​ನ ಬೆಲೆ ರೂ. 16,999 ಇದೆ.

ರಿಯಲ್​ಮಿ 8 5G ಫೋನ್​ನ ಮೊದಲ ಮಾರಾಟವು ಏಪ್ರಿಲ್ 28ನೇ ತಾರೀಕಿನ ಮಧ್ಯಾಹ್ನ 12 ಗಂಟೆಯ ಮೇಲೆ realme.com, flipkart.com ಮತ್ತು ಇತರ ಮುಖ್ಯ ಚಾನೆಲ್​ನಲ್ಲಿಆರಂಭವಾಗುತ್ತದೆ. ಇನ್ನು ಈ ಫೋನ್ ಸೂಪರ್​ಸಾನಿಕ್ ಬ್ಲ್ಯೂ ಮತ್ತು ಸೂಪರ್​ಸಾನಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯ ಇದೆ.

ವೈಶಿಷ್ಟ್ಯಗಳು: ಪ್ರೊಸೆಸರ್ ರಿಯಲ್​ಮಿ 8 5G ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ ಇದ್ದು, ಅದು ಆರ್ಮ್ ಕಾರ್ಟೆಕ್ಸ್- A76 ಕೋರ್​ಗಳೊಂದಿಗೆ ಸೇರಿ ಆಕ್ಟಾಕೋರ್​ ಸಿಪಿಯು ಆಪರೇಟಿಂಗ್ 2.2 GHzವರೆಗೆ ಬರುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 700ಯಿಂದ 7nm ಪ್ರೊಡಕ್ಷನ್ ಪ್ರೊಸೆಸರ್​ನೊಂದಿಗೆ ಬರುತ್ತದೆ. ಇದು 8nm ಪ್ರೊಸೆಸ್​ಗಿಂತ ಶೇಕಡಾ 28ರ ತನಕ ಪವರ್ ಎಫಿಷಿಯೆಂಟ್ ಆಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700ನಲ್ಲಿ ಆರ್ಮ್ Mali- G57 MC2 GPU ಜತೆಗೆ 950MHz ಕ್ಲಾಕ್ ವೇಗ ಇದೆ ಮತ್ತು 90Hz ಹೈ ರಿಫ್ರೆಷ್ ರೇಟ್ ಸ್ಕ್ರೀನ್ ಟೆಕ್ನಾಲಜಿ ಇದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ 5G ಡ್ಯುಯಲ್ ಸಿಮ್​ನೊಂದಿಗೆ ಬರುತ್ತದೆ.

ಬ್ಯಾಟರಿ ರಿಯಲ್​ಮಿ 8 5G ಫೋನ್ 5000 mAh ಬ್ಯಾಟರಿ ಜತೆ, 18W ಟೈಪ್-ಸಿ ಶೀಘ್ರ ಚಾರ್ಜ್​ನೊಂದಿಗೆ, ಸ್ಮಾರ್ಟ್ 5G ಪವರ್ ಸೇವಿಂಗ್ ಆಯ್ಕೆ ಜತೆಗೆ ಬರುತ್ತದೆ. ಇದರಿಂದ ಸಿಗ್ನಲ್ ಅನ್ನು 4G ಅಥವಾ 5G ಎಂದು ಬದಲಾಯಿಸಿಕೊಳ್ಳಲು ಅನುಕೂಲ ಆಗುತ್ತದೆ. ಕಂಪೆನಿ ಹೇಳುವ ಪ್ರಕಾರ, ಈ ಫೀಚರ್ ಇಲ್ಲದ ಫೋನ್​ಗಳಿಗಿಂತ ಶೇಕಡಾ 30ರಷ್ಟು ಕಡಿಮೆ ಪವರ್ ಇದರಲ್ಲಿ ಬಳಕೆ ಆಗುತ್ತದೆ.

ಡಿಸ್​ಪ್ಲೇ ರಿಯಲ್​ಮಿ 8 5G ಫೋನ್ 6.5 ಇಂಚು ಡಿಸ್​ಪ್ಲೇ ಜತೆಗೆಗೆ 90Hz ರಿಫ್ರೆಷ್ ಮತ್ತು ಗರಿಷ್ಠ 180Hz ದರದಲ್ಲಿ ಬಂದಿದೆ. ಈ ಫೋನ್ FHD+ ರೆಸಲ್ಯೂಷನ್ ಜತೆಗೆ ಗರಿಷ್ಠ ಬ್ರೈಟ್​ನೆಸ್ 600 nitsನೊಂದಿಗೆ ಬರುತ್ತದೆ.

ಕ್ಯಾಮೆರಾ ರಿಯಲ್​ಮಿ 8 5G ಫೋನ್ 48MP ಕ್ಯಾಮೆರಾ, B&W ಪೋರ್ಟ್ರೈಟ್ ಲೆನ್ಸ್, ಮತ್ತು ಮ್ಯಾಕ್ರೋ ಲೆನ್ಸ್ ಇದೆ. ಪ್ರಾಥಮಿಕ ಲೆನ್ಸ್ 48MP ಕ್ಯಾಮೆರಾ ಮತ್ತು F 1.8 ಅಪರ್ಚರ್, 80 ಡಿಗ್ರಿ FOV, ಮತ್ತು 6P ಲೆನ್ಸ್ ಇದೆ. B&W ಪೋರ್ಟ್ರೈಟ್ ಲೆನ್ಸ್ ಹೊಸ ಕಲರ್ ಫಿಲ್ಟರ್ ವ್ಯವಸ್ಥೆಯೊಂದಿಗೆ ಬರಲಿದ್ದು, ಫೋನ್​ನಲ್ಲಿ 4 ಸೆಂ.ಮೀ. ಮ್ಯಾಕ್ರೋ ಲೆನ್ಸ್ ಇದೆ. ರಿಯಲ್​ಮಿ 8 5G ಫೋನ್ 16MP ಸೆಲ್ಫಿ ಕ್ಯಾಮೆರಾ ಜತೆಗೆ F2.0 ಅಪರ್ಚರ್​ನೊಂದಿಗೆ ಬರುತ್ತದೆ.

ಇನ್ನು ಫೋನ್​ನ ಪಕ್ಕದಲ್ಲಿ ಫಿಂಗರ್​ಪ್ರಿಂಟ್ ಸ್ಕ್ಯಾನರ್ ಇದ್ದು, ಇದರಿಂದ ಪವರ್ ಬಟನ್ ಮತ್ತು ರೆಕಗ್ನಿಷನ್ ಮಾಡ್ಯುಲ್​ಗಳು ಕಾರ್ಯ ನಿರ್ವಹಿಸುತ್ತವೆ.

ಇದನ್ನೂ ಓದಿ: Realme X7 Series Launch | ಭಾರತದಲ್ಲಿ ಲಾಂಚ್​ ಆದ ರಿಯಲ್​ಮಿ ಎಕ್ಸ್​​7: ಕೇವಲ 35 ನಿಮಿಷಗಳಲ್ಲಿ ಫುಲ್​ ಚಾರ್ಜ್

(Realme 8 5G smartphone launched in India. Price, specification, colour and other details related to this phone is here)

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು