Realme X7 Series Launch | ಭಾರತದಲ್ಲಿ ಲಾಂಚ್ ಆದ ರಿಯಲ್ಮಿ ಎಕ್ಸ್7: ಕೇವಲ 35 ನಿಮಿಷಗಳಲ್ಲಿ ಫುಲ್ ಚಾರ್ಜ್
Realme X7 Proನಲ್ಲಿ ಮತ್ತೊಂದು ವಿಶೇಷತೆ ಇದೆ. ನಿಮ್ಮ ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಖಾಲಿ ಆದರೂ, ಕೇವಲ 35 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ.
Realme X7 Pro ಹಾಗೂ Realme X7 ಭಾರತದಲ್ಲಿ ಇಂದು ಲಾಂಚ್ ಆಗಿವೆ. ಈ ಮೊಬೈಲ್ ಲಾಂಚಿಗ್ ಕಾರ್ಯಕ್ರಮ ಕಂಪೆನಿಯ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರವಾಗಿತ್ತು. Realme X7 ಮೊಬೈಲ್ಗಳು ಫ್ಲಿಪ್ಕಾರ್ಟ್ ಹಾಗೂ ರಿಯಲ್ಮಿ ಅಧಿಕೃತ ಸೈಟ್ನಲ್ಲಿ ಲಭ್ಯವಾಗಲಿದೆ. ಈಗಾಗಲೇ ಭಾರತಕ್ಕೆ 5ಜಿ ನೆಟ್ವರ್ಕ್ ಪರಿಚಯಗೊಳ್ಳುವುದರಲ್ಲಿದೆ. ಹೀಗಾಗಿ, ಈ ಮೊಬೈಲ್ನಲ್ಲಿ 5ಜಿ ಆಯ್ಕೆಯನ್ನೂ ನೀಡಲಾಗಿದೆ.
Realme X7 ಬೆಲೆ ಭಾರತದಲ್ಲಿ 19,999 ರೂಪಾಯಿ ಇದೆ. Realme X7 Pro ಬೆಲೆ 29,999 ರೂಪಾಯಿ ಇದೆ. ಪ್ರೋ ಮೊಬೈಲ್ನ ಕ್ಯಾಮೆರಾ ಅದ್ಭುತವಾಗಿದೆ. ಈ ಮೊಬೈಲ್ 64ಎಂಪಿ ಕ್ವಾಡ್ ಕ್ಯಾಮೆರಾ ಹೊಂದಿದೆ. 4,500mAh ಬ್ಯಾಟರಿಯನ್ನು ಇಂದು ಹೊಂದಿದೆ.
Realme X7 Proನಲ್ಲಿ ಮತ್ತೊಂದು ವಿಶೇಷತೆ ಇದೆ. ನಿಮ್ಮ ಮೊಬೈಲ್ ಚಾರ್ಜ್ ಖಾಲಿ ಆದರೂ, ಕೇವಲ 35 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಹೀಗಾಗಿ, ನೀವೆಲ್ಲಾದರೂ ಹೊರ ಹೋಗುವ ಆತುರದಲ್ಲಿದ್ದಾಗ ಮೊಬೈಲ್ ಚಾರ್ಜ್ ಸಂಪೂರ್ಣ ಖಾಲಿ ಆಗಿದ್ದರೂ ಚಿಂತಿಸುವ ಅವಶ್ಯಕತೆ ಇಲ್ಲ. 15 ನಿಮಿಷ ಚಾರ್ಜ್ಗೆ ಹಾಕಿದರೂ ಶೇ 50 ಚಾರ್ಜ್ ಆಗಲಿದೆ.
ಇನ್ನು, Realme X7 ಹಾಗೂ Realme X7 Pro ಮೊಬೈಲ್ಗೆ ಡಾಲ್ಬಿ ಸೌಂಡ್ ವ್ಯವಸ್ಥೆ ಇದೆ. ಹೀಗಾಗಿ, ಮೊಬೈಲ್ನಲ್ಲಿ ಸಿನಿಮಾ ನೋಡವಾಗ ಅತ್ಯುತ್ತಮ ಸೌಂಡ್ ವ್ಯವಸ್ಥೆಯನ್ನು ನೀವು ನಿರೀಕ್ಷೆ ಮಾಡಬಹುದು.
ಈ ಮೊಬೈಲ್ನಲ್ಲಿ 5ಜಿ ಆಯ್ಕೆಯನ್ನು ಈಗಾಗಲೇ ನೀಡಲಾಗಿದೆ. ಹೀಗಾಗಿ, ದೂರವಾಣಿ ಸಂಸ್ಥೆಗಳು 5ಜಿ ಸೇವೆ ಆರಂಭಿಸಿದ ನಂತರ ಮೊಬೈಲ್ನಲ್ಲಿ ನೀವು 5ಜಿ ಬಳಸಬಹುದು. ಇನ್ನು, ಇಂದು ಲಾಂಚ್ ಆಗಿರುವ ಈ ಹೊಸ ಮೊಬೈಲ್ಗಳು ಫೆಬ್ರವರಿ 12ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ.
10 ಸಾವಿರ ರೂಪಾಯಿ ಒಳಗೆ ಸಿಗೋ ಅತ್ಯುತ್ತಮ ಮೊಬೈಲ್ಗಳು ಯಾವುವು? ಇಲ್ಲಿದೆ ಮಾಹಿತಿ