Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

Apple new products launch: ಆಪಲ್ ಕಂಪೆನಿಯಿಂದ ಏಪ್ರಿಲ್ 20ರಂದು ವಿವಿಧ ಪ್ರಾಡಕ್ಟ್​ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳ ಬೆಲೆ ಭಾರತದಲ್ಲಿ ಎಷ್ಟಿವೆ ಎಂಬ ಮಾಹಿತಿ ಇಲ್ಲಿದೆ.

Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?
ಹೊಸ ಐಮ್ಯಾಕ್
Follow us
Srinivas Mata
|

Updated on:Apr 21, 2021 | 7:08 PM

ಆಪಲ್ ಕಂಪೆನಿಯ Spring Loaded 2021 ಕಾರ್ಯಕ್ರಮ ಏಪ್ರಿಲ್ 20ರಂದು ಮುಗಿದಿದೆ. ಎಲ್ಲ ಬಗೆಯಲ್ಲೂ ಹೊಸದಾದ 2021 ಐಪ್ಯಾಡ್ ಪ್ರೋ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ M1 SoC ಇದೆ. ಆಪಲ್ ಆಪರೇಟಿಂಗ್ ಸಿಸ್ಟಮ್ ಜತೆ ಇದು ಇನ್ನಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ. 12.9- ಇಂಚಿನ ಐಪ್ಯಾಡ್ ಪ್ರೋನಲ್ಲಿ ಆಕರ್ಷಕವಾದ ಲಿಕ್ವಿಡ್ ರೆಟಿನಾ XDR ಡಿಸ್​ಪ್ಲೇ ಇದ್ದು, ಆಪಲ್ ಕಂಪೆನಿ ಹೇಳುವ ಪ್ರಕಾರ, ಪ್ರೋ ಡಿಸ್​ಪ್ಲೇ XDRನಲ್ಲಿ ಅದ್ಯಾವ ಪ್ರಮಾಣದ ವೃತ್ತಿಪರ ಡಿಸ್​ಪ್ಲೇ ನಿಖರತೆ ಇದೆಯೋ ಅದೇ ಪ್ರಮಾಣದಲ್ಲಿ ಇದೂ ಇದೆಯಂತೆ. ಅಂದಹಾಗೆ ಟ್ಯಾಬ್ಲೆಟ್ 11- ಇಂಚಿನದೂ ಸಿಗುತ್ತದೆ. ಇದರ ಜತೆಗೆ 24-ಇಂಚಿನ M1 ಮ್ಯಾಕ್, ಏರ್​ಟ್ಯಾಗ್ ಟ್ರ್ಯಾಕರ್ ಮತ್ತು ಹೆಚ್ಚಿನ ಫ್ರೇಮ್ ರೇಟ್ ಎಚ್​ಡಿಆರ್ ಪ್ಲೇಬ್ಯಾಕ್ ಜತೆಗೆ ಆಪಲ್ ಟಿವಿ 4K ಬಿಡುಗಡೆ ಮಾಡಲಾಗಿದೆ.

ಇನ್ನು 24 ಇಂಚಿನ ಐಮ್ಯಾಕ್ ಡಿಸ್​ಪ್ಲೇ ಮತ್ತು ಅದರ ಮೈ 11.5 ಮಿಲಿಮೀಟರ್​ನಷ್ಟು ತೆಳುವಾಗಿದೆ. ಏಳು ವಿವಿಧ ಬಣ್ಣಗಳಲ್ಲಿ ಐಮ್ಯಾಕ್ ಬರುತ್ತದೆ. ಮತ್ತು ಅದರ ಪವರ್ ಕೇಬಲ್​ಗಳು, ಕೀಬೋರ್ಡ್ ಮತ್ತು ಮೌಸ್ ಇವೆಲ್ಲವೂ ಅವುಗಳಿಗೆ ಹೊಂದುವಂತೆ ಒಂದೇ ಬಣ್ಣದ್ದು ದೊರೆಯುತ್ತವೆ. ಇದು ಕೂಡ M1 SoC ವೈಶಿಷ್ಟ್ಯ ಹೊಂದಿದೆ. ಇದು ಎರಡು ಬಗೆಯ ಪರ್ಫಾರ್ಮೆನ್ಸ್​ನಲ್ಲಿ ಲಭ್ಯ ಇದೆ.

ಇದಕ್ಕೆ ಮ್ಯಾಕ್OS Big Sur (ಆಪರೇಟಿಂಗ್ ಸಿಸ್ಟಮ್) ಜತೆಗೆ ಯೂನಿವರ್ಸಲ್ ಆಪ್​ಗಳ ಅನುಕೂಲ ದೊರೆಯುತ್ತದೆ. ಫುಲ್ ಎಚ್​ಡಿ ಫೇಸ್​ಟೈಮ್ ಕ್ಯಾಮೆರಾ, ಆರು-ಸ್ಪೀಕರ್ ಆಡಿಯೋ ಔಟ್​ಪುಟ್ ಮತ್ತಿತರ ವೈಶಿಷ್ಟ್ಯಗಳಿವೆ. ಇನ್ನು ಹೊಸ ಐಮ್ಯಾಕ್​ನಲ್ಲಿ ಥರ್ಮಲ್ ಪ್ಲೇಟ್ ಬದಲಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಶಬ್ದ ಮಾಡದಂತೆ ಕಾರ್ಯ ನಿರ್ವಹಿಸುತ್ತದೆ. ಐಮ್ಯಾಕ್​ನಲ್ಲಿ ಯುಎಸ್​ಬಿ-ಸಿ 4 ಪೋರ್ಟ್​ಗಳು, ಜತೆಗೆ ಎರಡು ಥಂಡರ್​ಬೋಲ್ಟ್ 4, 6K ತನಕ ಹೊರಗಿನ ಡಿಸ್​ಪ್ಲೇ ಸಪೋರ್ಟ್, ಪವರ್ ಬ್ರಿಕ್​ನಲ್ಲಿ ಎಥರ್ನೆಟ್ ಪೋರ್ಟ್ ಇದೆ. 8K ವಿಡಿಯೋದ ಕೆಲಸ ಕೂಡ ಇದರಲ್ಲಿ ಮಾಡಬಹುದು. ಜತೆಗೆ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬಹುದಾಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೋ ಅದೇ ಬಗೆಯಲ್ಲಿ ಐಪ್ಯಾಡ್ ಪ್ರೋ ಕೂಡ ಕಾರ್ಯ ನಿರ್ವಹಿಸುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಹೊಸ ಕ್ಯಾಮೆರಾ ಪರಿಣಾಮಕಾರಿ ಆಗಿದ್ದು, ರಿಯಲ್- ಟೈಮ್ ಎಆರ್ ಮತ್ತು ವಿಆರ್ ವಿಶ್ಯುಯಲ್​ಗಳನ್ನು ಹೊರತರಬಲ್ಲ ಸಾಮರ್ಥ್ಯ ಇದಕ್ಕಿದೆ.

ಐಒಎಸ್​ನಲ್ಲಿ ಇರುವ ಫೈಂಡ್ ಮೈ ಆ್ಯಪ್ ಜತೆಗೆ ಏರ್​ಟ್ಯಾಗ್ ಸಿಂಕ್ ಆಗುತ್ತದೆ. ಈ ಬಗ್ಗೆ ಒಂದು ವರ್ಷದಿಂದ ವದಂತಿಗಳು ಹರಿದಾಡುತ್ತಲೇ ಇದ್ದವು. ಬಳಕೆದಾರರು ತಮ್ಮ ಕೀಗಳು, ವ್ಯಾಲೆಟ್​ಗಳನ್ನು ಹುಡುಕುವುದಕ್ಕೆ ಟ್ರ್ಯಾಕರ್ಸ್​ನಲ್ಲಿ ಫೀಚರ್ ಇದೆ. ಆಪಲ್ ಟಿವಿ 4Kಗೆ ಸಿರಿ ರಿಮೋಟ್ ಇದೆ. ಇದರ ಜತೆಗೆ ಮುಖ್ಯವಾಗಿ ಹೈ ಫ್ರೇಮ್ ರೇಟ್ ಎಚ್​ಡಿಆರ್ ಪ್ಲೇಬ್ಯಾಕ್ ಇದೆ. ಇದರಲ್ಲಿ ಟೀವಿ ಕ್ಯಾಲಿಬ್ರೇಷನ್ ಮೋಡ್ ಇದ್ದು, ಇದು ಐಫೋನ್ ಅನ್ನು ಬಳಸಿ, ಟೀವಿಯನ್ನು ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಮಟ್ಟಕ್ಕೆ ಹೊಂದಿಸುತ್ತದೆ. ಅತಿ ಮುಖ್ಯವಾದ ಮತ್ತೊಂದು ಅಪ್​ಡೇಟ್ ಅಂದರೆ, ಅದು ಐಫೋನ್ ಮತ್ತು ಐಫೋನ್ 12 ಮಿನಿ ಇವೆರಡು ನೇರಳೆ ಬಣ್ಣದಲ್ಲಿ ದೊರೆಯುತ್ತವೆ. ಅದರ ಜತೆಗೆ ಆಪಲ್ ಕಾರ್ಡ್ ಬಗ್ಗೆಯೂ ಹೇಳಲಾಯಿತು.

ಭಾರತದಲ್ಲಿ ಯಾವುದರ ಬೆಲೆ ಎಷ್ಟು? * ಹೊಸ ಆಪಲ್ ಟೀವಿ 4K ಜತೆಗೆ ಹೊಸ ಸಿರಿ ರಿಮೋಟ್: ರೂ. 18,990 * ಈ ಹಿಂದಿನ ಆಪಲ್ ಟೀವಿಗೂ ಬಳಸಬಹುದಾದ ರಿಮೋಟ್: ರೂ. 8,500 (ಏಪ್ರಿಲ್ 30ರಿಂದ ಪ್ರೀಆರ್ಡರ್, ಮೇ ಮಧ್ಯದಿಂದ ಮಾರಾಟ) * ಏರ್​ಟ್ಯಾಗ್: ಒಂದಕ್ಕೆ ರೂ. 3,190 ಹಾಗೂ 4ಕ್ಕೆ 10,900 (ಏಪ್ರಿಲ್ 30ರಿಂದ ಮಾರಾಟ) * ನೇರಳೆ ಐಫೋನ್ (ಮತ್ತು 12 ಮಿನಿ): ಆರಂಭಿಕ ಬೆಲೆ ಮಿನಿ ರೂ. 69,900 ಹಾಗೂ ಐಫೋನ್ 12ಕ್ಕೆ ರೂ. 79,900 * ಐಮ್ಯಾಕ್ ಎರಡು ಪರ್ಫಾರ್ಮೆನ್ಸ್ ವೇರಿಯೆಂಟ್​ನಲ್ಲಿ ಬರುತ್ತದೆ: ಬೇಸ್ ವೇರಿಯೆಂಟ್ ರೂ. 1,19,900ರಿಂದ ಶುರು, ನಾಲ್ಕು ಬಣ್ಣದಲ್ಲಿ ಲಭ್ಯ. ಮೇಲ್​ಸ್ತರದ ಎರಡು ಸಂಗ್ರಹ ಸಾಮರ್ಥ್ಯದ್ದು 256GB ಮತ್ತು 512GB ಬರುತ್ತದೆ. ಇದರ ಬೆಲೆ ಕ್ರಮವಾಗಿ ರೂ. 1,39,900 ಮತ್ತು 1,59,900 ಇದೆ. *ಹೊಸ ಐಪ್ಯಾಡ್ ಪ್ರೋ 11- ಇಂಚಿನ ಮಾಡೆಲ್ 128GB ಸಂಗ್ರಹ ಸಾಮರ್ಥ್ಯದ್ದು ರೂ. 71,900 ಹಾಗೂ ಅಷ್ಟೇ ಸಾಮರ್ಥ್ಯದ 12.9 ಇಂಚಿನ ಮಾಡೆಲ್​ಗೆ 99,900 ರೂಪಾಯಿ ಇದೆ. 12.9 ಇಂಚಿನ 2021ರ ಆಪಲ್ ಐಪ್ಯಾಡ್ ಪ್ರೋ 2TB ಸಾಮರ್ಥ್ಯದ್ದು ರೂ. 1,98,900. ಟ್ಯಾಬ್ಲೆಟ್​ಗಳ ಪ್ರೀಆರ್ಡರ್ ಏಪ್ರಿಲ್ 30ರಿಂದ ಶುರು ಆಗುತ್ತದೆ. ಮೇ ದ್ವಿತೀಯಾರ್ಧದಿಂದ ಮಾರಾಟ ಶುರು ಆಗುತ್ತದೆ.

ಇದನ್ನೂ ಓದಿ: Apple iPhone 12: ಆಪಲ್ ಐಫೋನ್ 12ರ ಜೋಡಣೆ ಭಾರತದಲ್ಲೇ ಆರಂಭ

(Apple company launched new products on April 20th. Here is the apple products price list in India)

Published On - 7:07 pm, Wed, 21 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್