ಗ್ರಾಹಕರೇ ಎಚ್ಚರ ಎಂದ SBI: ಬ್ಯಾಂಕ್ ಲೋನ್ ಕೊಡುವುದಾಗಿ ವಂಚಿಸುವ ಗುಂಪಿನ ಬಗ್ಗೆ ಜಾಗ್ರತೆ
SBI Customers Alert: ಎಸ್‌ಬಿಐ ಫೈನಾನ್ಸ್ ಲಿಮಿಟೆಡ್ ಸೇರಿದಂತೆ ಇತರ ಸಂಸ್ಥೆಗಳ ಹೆಸರಲ್ಲಿ ಎಸ್‌ಬಿಐ ಗ್ರಾಹಕರಿಗೆ ವಂಚನೆ ಪ್ರಯತ್ನ ನಡೆಯುತ್ತಿದೆ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.
ಎಸ್‌ಬಿಐ ಲೋನ್ ಫೈನಾನ್ಸ್ ಲಿಮಿಟೆಡ್ ಅಥವಾ ಅಂಥ ಯಾವುದೇ ಸಂಸ್ಥೆಗಳಿಂದ ನಿಮ್ಮನ್ನು ಸಂಪರ್ಕಿಸಿ, ಸಾಲ ನೀಡುವುದಾಗಿ ಹೇಳಿದರೆ ಎಸ್‌ಬಿಐ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಈ ಸಂಸ್ಥೆಗಳ ಜತೆ ಬ್ಯಾಂಕ್ಗೆ ಯಾವುದೇ ಸಂಬಂಧ ಇಲ್ಲ. ಆದರೆ ನಮ್ಮ ಗ್ರಾಹಕರನ್ನು ವಂಚಿಸುವ ಉದ್ದೇಶದಿಂದ ನಕಲಿ ಸಾಲದ ಆಫರ್ಗಳನ್ನು ನೀಡುತ್ತಿವೆ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಎಚ್ಚರಿಕೆ ನೀಡಿದೆ. ಎಸ್‌ಬಿಐ ಗ್ರಾಹಕರೇ ಎಚ್ಚರಿಕೆಯಿಂದ ಇರಿ! ಒಂದು ವೇಳೆ ಎಸ್‌ಬಿಐ ಲೋನ್ ಫೈನಾನ್ಸ್ ಲಿಮಿಟೆಡ್ ಅಥವಾ ಅಂಥ ಯಾವುದೇ ಸಂಸ್ಥೆಗಳು ನಿಮ್ಮನ್ನು ಸಂಪರ್ಕಿಸಿದಲ್ಲಿ, ನಿಮಗೆ ಗೊತ್ತಿರಲಿ, ಇವುಗಳು ಯಾವುವೂ ಎಸ್‌ಬಿಐ ಜತೆಗೆ ಸಂಬಂಧ ಪಟ್ಟಿಲ್ಲ ಎಂದು ಟ್ವೀಟ್ನಲ್ಲಿ ಹೇಳಿದೆ.
ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಅತಿ ಮುಖ್ಯವಾದ ಘೋಷಣೆ ಹಾಕಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ ಲೋನ್ ಫೈನಾನ್ಸ್ ಲಿಮಿಟೆಡ್ ಅಥವಾ ಯಾವುದೇ ಅಂಥ ಸಂಸ್ಥೆಗಳ ಶೈಲಿಯಲ್ಲಿ, ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗಳ ಹೆಸರಲ್ಲಿ ಸಾರ್ವಜನಿಕರಿಗೆ ಸಾಲ ನೀಡುವುದಾಗಿ ಕೆಲವು ಅಪರಿಚಿತ ವ್ಯಕ್ತಿಗಳು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಈ ರೀತಿಯ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳ ಜತೆಗೆ ಬ್ಯಾಂಕ್ಗೆ ಸಂಬಂಧ ಇಲ್ಲ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಯಾರಿಗೆ ಸಾಲದ ಅಗತ್ಯ ಇದೆಯೋ ಅಂಥವರು ಹತ್ತಿರದ ಬ್ಯಾಂಕ್ನ ಶಾಖೆಯಲ್ಲಿ ವಿಚಾರಿಸಿ. ಮಧ್ಯವರ್ತಿಗಳ ಬಳಿ ತೆರಳಬೇಡಿ ಎಂದು ತಿಳಿಸಿದೆ. ಈ ವರ್ಷದ ಜನವರಿಯಲ್ಲೂ ಎಸ್‌ಬಿಐ ಇಂಥದ್ದೊಂದು ಎಚ್ಚರಿಕೆ ನೀಡಿತ್ತು. ಅನಧಿಕೃತ ಡಿಜಿಟಲ್ ಪ್ಲಾಟ್ಫಾರ್ಮ್ಗಳು, ಮೊಬೈಲ್ ಅಪ್ಲಿಕೇಷನ್ಗಳು ಶೀಘ್ರವಾಗಿ- ಸರಾಗವಾಗಿ ಸಾಲ ನೀಡುವುದಾಗಿ ಭರವಸೆ ನೀಡುತ್ತಿವೆ. ವಂಚಕ ಇನ್ಸ್ಟಂಟ್ ಲೋನ್ ಆಪ್ಸ್ಗಳಿಂದ ಎಚ್ಚರಿಕೆ ವಹಿಸಿ! ಅನಧಿಕೃತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಎಸ್‌ಬಿಐ ಹಾಗೂ ಬೇರೆ ಯಾವುದೇ ಬ್ಯಾಂಕ್ ಹೆಸರಿನಿಂದ ಕರೆ ಮಾಡುವವರಿಗೆ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ ಎಂದು ಟ್ವೀಟ್ ಮಾಡಿತ್ತು.
BEWARE SBI CUSTOMERS!
If you are contacted by SBI Loan Finance Ltd. or any such entities then be informed that these are not associated with SBI. They are giving fake loan offers in order to scam our customers pic.twitter.com/tb0rbDPs1G
— State Bank of India (@TheOfficialSBI) April 20, 2021
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಭಾರತದ ಅತಿ ದೊಡ್ಡ ವಾಣಿಜ್ಯ ಬ್ಯಾಂಕ್. ಅದರ ಆಸ್ತಿ, ಠೇವಣಿ, ಶಾಖೆಗಳು, ಗ್ರಾಹಕರು ಹಾಗೂ ಸಿಬ್ಬಂದಿ ಹೀಗೆ ಎಲ್ಲದರಲ್ಲೂ ಅತಿ ದೊಡ್ಡ ಬ್ಯಾಂಕ್. ಇದರ ಜತೆಗೆ ಆಸ್ತಿ ಅಡಮಾನ ಮಾಡಿಕೊಂಡು, ಸಾಲ ನೀಡುವ ಅತಿ ದೊಡ್ಡ ಬ್ಯಾಂಕ್ ಕೂಡ ಹೌದು. ಬ್ಯಾಂಕ್ನ ಹೋಮ್ ಲೋನ್ (ಗೃಹ ಸಾಲ) ಪೋರ್ಟ್ಫೋಲಿಯೋ 5 ಲಕ್ಷ ಕೋಟಿ ರೂಪಾಯಿಯ ಮೈಲುಗಲ್ಲು ದಾಟಿದೆ. ಗೃಹಸಾಲ ಮಾರ್ಕೆಟ್ನಲ್ಲಿ ಶೇ 34ರಷ್ಟು ಪಾಲನ್ನು ಹೊಂದಿದೆ.
ಇದನ್ನೂ ಓದಿ: SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ
(SBI tweeted about fraudsters fake calls about loans and ask customers to beware of such calls)