ಆನ್ಲೈನ್ನಲ್ಲಿ ಲ್ಯಾಪ್ಟಾಪ್ಗಳ ಮೇಲೆ ಆಫರ್ಗಳು; ಯಾವುದಕ್ಕೆ ಎಷ್ಟಿದೆ ರಿಯಾಯಿತಿ?
ಕೊರೊನಾ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ನೀಡಲಾಗಿದ್ದು, ಇದಕ್ಕಾಗಿ ಬಹುತೇಕರು ಬಜೆಟ್ನೊಳಗೆ ಉತ್ತಮ ಲ್ಯಾಪ್‌ಟಾಪ್ ಖರೀದಿಸುವ ಆಲೋಚನೆಯಲ್ಲಿದ್ದರೆ ಈ ಲೇಖನದಲ್ಲಿರುವ ಆಯ್ಕೆಗಳನ್ನು ಪರಿಗಣಿಸಬಹುದು.
ನವದೆಹಲಿ: ಕೊರೊನಾ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಾದ್ಯಂತದ ಬಹುಪಾಲು ಕಂಪೆನಿಗಳು ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡಲು ಸೂಚನೆ ನೀಡಿವೆ. ಮನೆಗಳಿಂದ ಕೆಲಸ ಮಾಡುವಾಗ ಎರಡು ವಿಷಯಗಳು ಬಹಳ ಮುಖ್ಯ. ಮೊದಲನೆಯದು ಅತ್ಯುತ್ತಮ ಲ್ಯಾಪ್‌ಟಾಪ್ ಇರಬೇಕು ಹಾಗೂ ಎರಡನೆಯದು ವೇಗದ ಇಂಟರ್ನೆಟ್ ಸಂಪರ್ಕ ಇವೆರಡೂ ಬಹಳ ಮುಖ್ಯವಾದದ್ದು. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ಬಳಿ ಉತ್ತಮ ಲ್ಯಾಪ್‌ಟಾಪ್ ಇಲ್ಲ ಎಂಬ ಆತಂಕದಲ್ಲಿದ್ದಾರೆ, ಮತ್ತೂ ಕೆಲವರು ಲ್ಯಾಪ್‌ಟಾಪ್ ಹೊಂದಿಲ್ಲ ಎಂಬ ಚಿಂತೆಯಲ್ಲಿ ಇದ್ದಾರೆ.
ಅಂದಹಾಗೆ ಜನರು ಹಳೆಯ ಅಥವಾ ಕೆಟ್ಟ ಲ್ಯಾಪ್‌ಟಾಪ್‌ಗಳನ್ನು ಇಟ್ಟುಕೊಂಡೇ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಹೊಸ ಲ್ಯಾಪ್‌ಟಾಪ್ ಖರೀದಿಸಲು ಅವರಿಗೆ ಬಜೆಟ್ ಇಲ್ಲ. ಒಂದು ವೇಳೆ ನಿಮಗೂ ಬಜೆಟ್ನದೇ ಸಮಸ್ಯೆಯಾಗಿದ್ದಲ್ಲಿ ಈ ಸುದ್ದಿ ವಿಶೇಷವಾಗಿ ನಿಮಗಾಗಿಯೇ. ಏಕೆಂದರೆ ಅನೇಕ ಆನ್‌ಲೈನ್ ಡೀಲ್‌ಗಳು ಲಭ್ಯವಿದ್ದು, ಗ್ರಾಹಕರು ಲ್ಯಾಪ್‌ಟಾಪ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಡೆಲ್, ಎಚ್‌ಪಿ, ಲೆನೊವೊ, ಏಸರ್ ಮುಂತಾದ ಕಂಪೆನಿಗಳ ವೃತ್ತಿಪರ ಲ್ಯಾಪ್‌ಟಾಪ್‌ಗಳು ಇದರಲ್ಲಿ ಸೇರಿವೆ. ಆದ್ದರಿಂದ ಉತ್ತಮ ಮತ್ತು ಅಗ್ಗದ ಲ್ಯಾಪ್‌ಟಾಪ್‌ಗಳನ್ನು ಎಲ್ಲಿ ಹುಡುಕಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
HP Chromebook 14a-na0003TU ಈ ಲ್ಯಾಪ್‌ಟಾಪ್‌ನ ಬೆಲೆ 24,990 ರೂ. ನೀವು ಈ ಲ್ಯಾಪ್‌ಟಾಪ್ ಅನ್ನು 5,011 ರೂ.ಗಳ ಫ್ಲಾಟ್ ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದರ ಮೇಲೆ 6 ತಿಂಗಳ ಖಾತರಿ ಸಹ ಪಡೆಯುತ್ತೀರಿ. ಇದರಲ್ಲಿ 14 ಇಂಚಿನ ಪರದೆ ಇದ್ದು, ಹಗುರವಾದ ಪ್ಲಸ್ ಟಚ್‌ಸ್ಕ್ರೀನ್ ಲ್ಯಾಪ್‌ಟಾಪ್ ಆಗಿದೆ.
ಈ ಲ್ಯಾಪ್‌ಟಾಪ್ ಇಂಟೆಲ್ ಎನ್ 4020 ಪ್ರೊಸೆಸರ್ ಹೊಂದಿದೆ. 4 ಜಿಬಿ ರಾಮ್ ಮತ್ತು 64 ಜಿಬಿ ಎಸ್‌ಎಸ್‌ಡಿ ಸಂಗ್ರಹವನ್ನೂ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಸಂಗ್ರಹ ಸಾಮರ್ಥ್ಯವನ್ನು 256 ಜಿಬಿವರೆಗೆ ವಿಸ್ತರಿಸಬಹುದು. ಈ ಲ್ಯಾಪ್‌ಟಾಪ್ Chrome OSನಲ್ಲಿ (ಆಪರೇಟಿಂಗ್ ಸಿಸ್ಟಮ್) ಕಾರ್ಯನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್ ಅನ್ನು 940 ರೂ.ಗಳ ಇಎಂಐನೊಂದಿಗೆ ಖರೀದಿಸಬಹುದು. ಈ ಡೀಲ್ ಅಮೆಜಾನ್‌ನಲ್ಲಿ ಲಭ್ಯವಿದೆ.
Avita EssentialNE14A2INC433-CR ಈ ಲ್ಯಾಪ್‌ಟಾಪ್‌ನ ಬೆಲೆ 17,990 ರೂ. 1,990 ರೂ.ಗಳ ಫ್ಲಾಟ್ ರಿಯಾಯಿತಿಯೊಂದಿಗೆ 16,000 ರೂಗಳಿಗೆ ಖರೀದಿಸಬಹುದು. ಇದು 6 ತಿಂಗಳ ಖಾತರಿಯೊಂದಿಗೆ ಬರುತ್ತದೆ. 14 ಇಂಚಿನ ಸ್ಕ್ರೀನ್ ಇದ್ದು, ಇದು ಸಂಯೋಜಿತ ಗ್ರಾಫಿಕ್ಸ್ ಹೊಂದಿದೆ.
ಇದು ಸೆಲೆರಾನ್ ಎನ್ 4020 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 4 GB RAM ಮತ್ತು 128 GB SSD ಸಂಗ್ರಹವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. 753 ರೂಪಾಯಿಗಳ ಇದನ್ನು ಇಎಂಐನೊಂದಿಗೆ ಖರೀದಿಸಬಹುದು. ಅಮೆಜಾನ್‌ನಲ್ಲಿ ಈ ಆಫರ್ ಲಭ್ಯವಿದೆ.
Dell Latittude E6420-i5-16 GB-500 GB ಈ ಲ್ಯಾಪ್‌ಟಾಪ್‌ನ ಮೂಲ ಬೆಲೆ 89,000 ರೂ. 60,310 ರೂಪಾಯಿಗಳ ಫ್ಲಾಟ್ ರಿಯಾಯಿತಿಯೊಂದಿಗೆ ಲಭ್ಯವಿದೆ. ಆದ್ದರಿಂದ ನೀವು ಈ ಲ್ಯಾಪ್‌ಟಾಪ್ ಅನ್ನು ಕೇವಲ 28,699 ರೂಪಾಯಿಗಳಿಗೆ ಖರೀದಿಸಬಹುದು. ಇದು 6 ತಿಂಗಳ ಖಾತರಿಯೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ 14 ಇಂಚಿನ ಸ್ಕ್ರೀನ್ ಮತ್ತು ಇಂಟಿಗ್ರೇಟೆಡ್ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ.
ಇದು 2 ನೇ ತಲೆಮಾರಿನ ಕೋರ್ ಐ 5 ಪ್ರೊಸೆಸರ್ ಹೊಂದಿದೆ. 16 GB RAM ಮತ್ತು 500 GB ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 7 ರಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್ ಅನ್ನು 1,351 ರೂಪಾಯಿಗಳ ಇಎಂಐನಲ್ಲಿ ಖರೀದಿಸಬಹುದು. ಈ ಡೀಲ್ ಅಮೆಜಾನ್‌ನಲ್ಲಿ ಲಭ್ಯವಿದೆ.
Iball Compbook- OHD Atom ಈ ಲ್ಯಾಪ್‌ಟಾಪ್‌ನ ಬೆಲೆ 12,999 ರೂ. 2,009 ರೂ. ಫ್ಲಾಟ್ ರಿಯಾಯಿತಿಯೊಂದಿಗೆ 10,990 ರೂ.ಗಳಿಗೆ ಖರೀದಿಸಬಹುದು. ಇದು 6 ತಿಂಗಳ ಖಾತರಿಯೊಂದಿಗೆ ಬರುತ್ತದೆ. ಲ್ಯಾಪ್‌ಟಾಪ್ 11.6-ಇಂಚಿನ ಸ್ಕ್ರೀನ್ ಮತ್ತು ಇಂಟೆಲ್ ಇಂಟಿಗ್ರೇಟೆಡ್ ಗ್ರಾಫಿಕ್ನೊಂದಿಗೆ ಬರುತ್ತದೆ.
ಈ ಲ್ಯಾಪ್‌ಟಾಪ್ ಇಂಟೆಲ್ ಆ್ಯಟಮ್ ಪ್ರೊಸೆಸರ್ ಹೊಂದಿದೆ. ಇದು 2 GB RAM ಮತ್ತು 32 GB EMMC ಸಂಗ್ರಹ ಸಾಮರ್ಥ್ಯದೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ ವಿಂಡೋಸ್ 7ರಲ್ಲಿ ಕಾರ್ಯ ನಿರ್ವಹಿಸುತ್ತದೆ. ನೀವು ಈ ಲ್ಯಾಪ್‌ಟಾಪ್ ಅನ್ನು ಕೇವಲ 376 ರೂಪಾಯಿಗಳ ಇಎಂಐನಲ್ಲಿ ಖರೀದಿಸಬಹುದು. ಈ ಡೀಲ್ ಫ್ಲಿಪ್‌ಕಾರ್ಟ್‌ನ 2 ಗುಡ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ.
ಅಂದಹಾಗೆ ಇಲ್ಲಿ ನೀಡಲಾಗಿರುವ ಲ್ಯಾಪ್ಟಾಪ್ಗಳ ಪರ್ಫಾರ್ಮೆನ್ಸ್, ದರ ಮತ್ತು ಇತರ ಮಾಹಿತಿಗಳ ಬಗ್ಗೆ ಇನ್ನೊಮ್ಮೆ ಕೂಲಂಕಷವಾಗಿ ವಿಚಾರಿಸಿ ಮುಂದುವರಿಯಿರಿ.
ಇದನ್ನೂ ಓದಿ: ವರ್ಕ್ ಫ್ರಮ್ ಹೋಂ ಮಾಡುವಾಗ ಎದುರಾಗಬಹುದಾದ ಈ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ
(Here is the budgetd laptops buying options along with online offers and discounts)