AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಧೆ ಶ್ಯಾಮ್’ ಸೆಟ್​ನಲ್ಲಿ ಪೂಜಾ ಹೆಗ್ಡೆ ನಡವಳಿಕೆಯಿಂದ ಪ್ರಭಾಸ್​ ಕಿರಿಕಿರಿಗೊಂಡಿದ್ದರೇ?; ಸುದ್ದಿಯ ಅಸಲಿಯತ್ತು ಇಲ್ಲಿದೆ

Prabhas and Pooja Hegde: ಟಾಲಿವುಡ್​ನ ಖ್ಯಾತ ನಟಿ ಪೂಜಾ ಹೆಗ್ಡೆ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗೆ ‘ರಾಧೆ ಶ್ಯಾಮ್’ ಚಿತ್ರ ತಂಡ ಪ್ರತ್ಯುತ್ತರ ನೀಡಿದೆ.

‘ರಾಧೆ ಶ್ಯಾಮ್’ ಸೆಟ್​ನಲ್ಲಿ ಪೂಜಾ ಹೆಗ್ಡೆ ನಡವಳಿಕೆಯಿಂದ ಪ್ರಭಾಸ್​ ಕಿರಿಕಿರಿಗೊಂಡಿದ್ದರೇ?; ಸುದ್ದಿಯ ಅಸಲಿಯತ್ತು ಇಲ್ಲಿದೆ
‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ
TV9 Web
| Edited By: |

Updated on: Sep 22, 2021 | 11:16 AM

Share

ಚಿತ್ರರಂಗದಲ್ಲಿ ನಟ ನಟಿಯರು ಚಿತ್ರೀಕರಣದ ಸಂದರ್ಭದಲ್ಲಿ ಹೇಗೆ ವರ್ತಿಸಿದ್ದರು ಎಂಬುದು ಬಹಳಷ್ಟು ಚರ್ಚೆಗೊಳಪಡುತ್ತವೆ. ಕೆಲವೊಮ್ಮೆ ಈ ಕುರಿತು ಗಾಸಿಪ್ ಗಳೂ ಹರಿದಾಡುತ್ತವೆ. ಬಹುನಿರೀಕ್ಷಿತ, ಬಿಗ್ ಬಜೆಟ್ ಚಿತ್ರವಾದ ‘ರಾಧೆ ಶ್ಯಾಮ್'(Radhe Shyam) ಚಿತ್ರವೂ ಸದ್ಯ ಇದೇ ಕಾರಣಕ್ಕೆ ಸುದ್ದಿಯಲ್ಲಿತ್ತು. ಚಿತ್ರದ ನಾಯಕ ನಟಿ ಪೂಜಾ‌ ಹೆಗ್ಡೆ(Pooja Hegde) ನಡವಳಿಕೆಯಿಂದಾಗಿ ನಟ ಪ್ರಭಾಸ್(Prabhas) ಕಿರಿಕಿರಿಗೊಂಡಿದ್ದರು ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಆರೋಪಕ್ಕೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

ನಿರ್ಮಾಣ ಸಂಸ್ಥೆಯಾದ ಯುವಿ ಕ್ರಿಯೇಷನ್ಸ್(UV Creations) ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಪೂಜಾ‌ ಹೆಗ್ಡೆ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ. ಜೊತೆಗೆ ಅಂತಹ ಸುದ್ದಿಗಳಲ್ಲಿ ಹುರುಳಿಲ್ಲ ಎಂದಿದೆ. ಈ ಹಿಂದೆ ಸುದ್ದಿಯಾಗಿದ್ದ ಪ್ರಕಾರ, ಪೂಜಾ ಸೆಟ್​ಗೆ ತಡವಾಗಿ ಬರುತ್ತಾರೆ. ಇದರಿಂದ ಪ್ರಭಾಸ್ ಕುಪಿತಗೊಂಡಿದ್ದರು. ಹಾಗಾಗಿಯೇ ಈರ್ವರೂ ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನ್ನೂ ಆಡುತ್ತಿರಲಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ನಿರ್ಮಾಣ ಸಂಸ್ಥೆ ತಕ್ಕ ಉತ್ತರ ನೀಡಿದೆ.

ಪೂಜಾ ಹೆಗ್ಡೆ ಮೇಲಿರುವ ಎಲ್ಲಾ ಅಪವಾದಗಳನ್ನು ತಿರಸ್ಕರಿಸಿರುವ ನಿರ್ಮಾಣ ಸಂಸ್ಥೆ, ‘ಅವರು ಸಮಯಕ್ಕೆ ಸರಿಯಾಗಿ ಬರುತ್ತಿದ್ದರು. ಬಹಳ ಪ್ರೊಫೆಶನಲ್ ಆಗಿ ಚಿತ್ರೀಕರಣದ ಸಂದರ್ಭದಲ್ಲಿ‌ ನಡೆದುಕೊಂಡಿದ್ದಾರೆ’ ಎಂದು ಹೇಳಿದೆ. ಅಲ್ಲದೇ, ‘ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಪರಸ್ಪರರ ಮೇಲೆ ಬಹಳ ಗೌರವ ಹೊಂದಿದ್ದರು. ಭಿನ್ನಾಭಿಪ್ರಾಯದ ವರದಿಗಳು ಸಂಪೂರ್ಣ ಆಧಾರ ರಹಿತವಾದದ್ದು’ ಎಂದು ಯುವಿ ಕ್ರಿಯೇಷನ್ಸ್ ತಿಳಿಸಿದೆ. ಈ ಮೂಲಕ ಎದ್ದಿದ್ದ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ಮಾಡಿದೆ.

‘ರಾಧೆ ಶ್ಯಾಮ್’ ಚಿತ್ರದ ಮೂಲಕ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ರೊಮ್ಯಾಂಟಿಕ್ ಡ್ರಾಮಾ ಮಾದರಿಯ ಈ ಚಿತ್ರ ಈ ವರ್ಷ ಜುಲೈನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದು, ಮುಂದಿನ ವರ್ಷ ಜನವರಿ 14 ರಂದು ಬಿಡುಗಡೆಯಾಗಲಿದೆ. ಒಟ್ಟು ನಾಲ್ಕು ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.

ನಟ ಪ್ರಭಾಸ್ ಬತ್ತಳಿಕೆಯಲ್ಲಿ ‘ಸಲಾರ್’, ‘ಆದಿಪುರುಷ್’ ಹಾಗೂ ‘ಪ್ರಾಜೆಕ್ಟ್- ಕೆ’ ಚಿತ್ರಗಳಿವೆ. ಇತ್ತ ಪೂಜಾ ಹೆಗ್ಡೆ ಟಾಲಿವುಡ್ ಜೊತೆಜೊತೆಗೆ ಬಾಲಿವುಡ್​ನಲ್ಲೂ ಸಕ್ರಿಯರಾಗಿದ್ದಾರೆ. ಅವರು ‘ಸರ್ಕಸ್’, ‘ಆಚಾರ್ಯ’, ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಹಾಗೂ ‘ಕಭಿ ಈದ್ ಕಭಿ ದಿವಾಲಿ’ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Deepika Padukone: ದೀಪಿಕಾ- ಸಿಂಧು ಬ್ಯಾಡ್ಮಿಂಟನ್ ಆಟ ಬಲು ಜೋರು; ಬಯೋಪಿಕ್ ಮಾಡ್ತೀರಾ ಎಂದು ಪ್ರಶ್ನಿಸಿದ ಫ್ಯಾನ್ಸ್

Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!

ಅಳುಮುಖ ಹೊತ್ತುಕೊಂಡು ಮನೆಗೆ ಬಂದ ರಾಜ್​ ಕುಂದ್ರಾ: ಶಿಲ್ಪಾ ಶೆಟ್ಟಿ ಪತಿಗೆ ಸದ್ಯಕ್ಕೆ ರಿಲೀಫ್​

(Prabhas starring Radhe Shyam production house UV creations clarify on rumour of  Pooja Hegde’s annoying behavior on sets)

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ