AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಬೆಡಗಿಗೆ ‘ಸಲಾರ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಚಾನ್ಸ್​ ಕೊಟ್ಟಿದ್ದು ನಿಜವೇ? ಇಲ್ಲಿದೆ ಅಸಲಿಯತ್ತು

ಹಲವು ಕಾರಣಗಳಿಂದಾಗಿ ಸಲಾರ್​ ಸಿನಿಮಾ ಸುದ್ದಿ ಆಗುತ್ತಿದೆ. ಬಿಗ್​ ಬಾಸ್​ ಓಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಅವರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ ಎಂಬ ಬಗ್ಗೆ ಗಾಸಿಪ್​ ಹಬ್ಬಿತ್ತು. ಅದಕ್ಕೆ ದಿವ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ ಬಾಸ್​ ಬೆಡಗಿಗೆ ‘ಸಲಾರ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಚಾನ್ಸ್​ ಕೊಟ್ಟಿದ್ದು ನಿಜವೇ? ಇಲ್ಲಿದೆ ಅಸಲಿಯತ್ತು
ಬಿಗ್​ ಬಾಸ್​ ಬೆಡಗಿಗೆ ‘ಸಲಾರ್​’ ಚಿತ್ರದಲ್ಲಿ ಪ್ರಶಾಂತ್​ ನೀಲ್​ ಚಾನ್ಸ್​ ಕೊಟ್ಟಿದ್ದು ನಿಜವೇ?
TV9 Web
| Edited By: |

Updated on: Sep 28, 2021 | 9:45 AM

Share

ಪ್ರಶಾಂತ್​ ನೀಲ್ ಮತ್ತು ಪ್ರಭಾಸ್​ ಜೊತೆಯಾಗಿ ಮಾಡುತ್ತಿರುವ ‘ಸಲಾರ್​’ ಸಿನಿಮಾ ಬಗ್ಗೆ ಹತ್ತಾರು ಗಾಸಿಪ್​ಗಳು ಕೇಳಿಬರುತ್ತಲೇ ಇವೆ. ಈ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಖ್ಯಾತ ನಟಿ ಶ್ರುತಿ ಹಾಸನ್​ ಅಭಿನಯಿಸುತ್ತಿದ್ದಾರೆ. ಈ ನಡುವೆ ಬಿಗ್​ ಬಾಸ್​ ಓಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಕೂಡ ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಈಗ ಸ್ವತಃ ದಿವ್ಯಾ ಅಗರ್​ವಾಲ್​ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶಾಂತ್​ ನೀಲ್​ ಕಡೆಯಿಂದ ತಮಗೆ ಆ ರೀತಿಯ ಯಾವುದೇ ಆಫರ್​ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದ ಮೊದಲ ಸೀಸನ್​ಗೆ ಕರಣ್​ ಜೋಹರ್​ ನಿರೂಪಕರಾಗಿದ್ದರು. ಅವರ ಜೊತೆಗೆ ದಿವ್ಯಾ ಜಗಳ ಮಾಡಿಕೊಂಡಿದ್ದರು! ಆದರೂ ಕೂಡ ಅಂತಿಮವಾಗಿ ಅವರೇ ಗೆದ್ದಿದ್ದು ವಿಶೇಷವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ದಿವ್ಯಾ ಅಗರ್​​ವಾಲ್​ ಹೆಸರು ಬಹಳ ಜನಪ್ರಿಯವಾಗಿದೆ. ಅವರ ಹೆಸರು ಇಟ್ಟುಕೊಂಡು ಗಾಸಿಪ್​ ಹಬ್ಬಿಸಿದರೆ ಟಿಆರ್​ಪಿ ಪಡೆಯಬಹುದು ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅಚ್ಚರಿ ಎಂದರೆ ಆ ಸುಳ್ಳು ಸುದ್ದಿ ಕೇಳಿಯೂ ದಿವ್ಯಾ ಅಗರ್​ವಾಲ್​ ಖುಷಿ ಪಟ್ಟಿದ್ದಾರೆ!

ಗಾಸಿಪ್​ ಹಬ್ಬುವುದಕ್ಕೂ ಒಂದು ತೂಕ ಇರಬೇಕು. ಸುಖಾಸುಮ್ಮನೆ ಪ್ರಭಾಸ್​, ಪ್ರಶಾಂತ್​ ನೀಲ್​ ಸಿನಿಮಾ ಜೊತೆ ಯಾರದ್ದೋ ಹೆಸರನ್ನು ತಳುಕು ಹಾಕಲು ಸಾಧ್ಯವಿಲ್ಲ. ಆ ಮಟ್ಟಕ್ಕೆ ಜನಪ್ರಿಯತೆ ಇದ್ದವರು ಮಾತ್ರ ಇಂಥ ಹೈಪ್ರೊಫೈಲ್​ ವ್ಯಕ್ತಿಗಳ ಜೊತೆ ಗಾಸಿಪ್​ ಕಾಲಂನಲ್ಲಿ ಸುದ್ದಿ ಆಗುತ್ತಾರೆ. ಹಾಗಾಗಿ ‘ಪ್ರಭಾಸ್​ ಜೊತೆ ಸುದ್ದಿ ಆಗುವುದು ಕೂಡ ಖುಷಿಯ ವಿಚಾರ’ ಎಂದು ಮಾಧ್ಯಮವೊಂದಕ್ಕೆ ದಿವ್ಯಾ ಅಗರ್​ವಾಲ್​ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಪ್ರಭಾಸ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಲಾರ್​ ಮಾತ್ರವಲ್ಲದೇ ಆದಿಪುರುಷ್​, ರಾಧೆ ಶ್ಯಾಮ್​ ಸಿನಿಮಾಗಳು ಕೂಡ ಭಾರಿ ನೀರೀಕ್ಷೆ ಮೂಡಿಸಿವೆ. ಇತ್ತೀಚೆಗೆ ಅವರು ಫಿಟ್ನೆಸ್​ ಕಳೆದುಕೊಂಡಿರುವ ಬಗ್ಗೆ ಭಾರಿ ಸುದ್ದಿ ಆಗಿತ್ತು. ಈ ಸಂಬಂಧ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ವಿದೇಶಕ್ಕೆ ತೆರಳುತ್ತಾರೆ ಎಂಬ ಮಾತು ಸಹ ಕೇಳಿಬಂದಿತ್ತು. ಆದರೆ ಈ ಯಾವ ವಿಚಾರಗಳ ಬಗ್ಗೆ ಕೂಡ ಅವರು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಕ್ಯಾನ್ಸರ್​ ಪೀಡಿತ ಅಭಿಮಾನಿಗೆ ಅತ್ಯಮೂಲ್ಯ ಕ್ಷಣಗಳನ್ನು ನೀಡಿದ ಪ್ರಭಾಸ್​; ನಟನ ದೊಡ್ಡತನಕ್ಕೆ ಮೆಚ್ಚುಗೆ​

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲಿರುವ ನಿರ್ದೇಶಕ; ‘ಬಾಹುಬಲಿ’ ನಟನಿಗೆ ಅಂಥದ್ದೇನಾಗಿದೆ?

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA