ಕ್ಯಾನ್ಸರ್​ ಪೀಡಿತ ಅಭಿಮಾನಿಗೆ ಅತ್ಯಮೂಲ್ಯ ಕ್ಷಣಗಳನ್ನು ನೀಡಿದ ಪ್ರಭಾಸ್​; ನಟನ ದೊಡ್ಡತನಕ್ಕೆ ಮೆಚ್ಚುಗೆ​

ಕ್ಯಾನ್ಸರ್​ನಿಂದ ಬಳಲುತ್ತಿರುವ ಅಭಿಮಾನಿ ಜೊತೆ ಪ್ರಭಾಸ್​ ಒಂದಷ್ಟು ಸಮಯ ಕಳೆದಿದ್ದಾರೆ. ಈ ವಿಚಾರದಲ್ಲಿ ಅವರು ಪ್ರಚಾರ ಬಯಸುವುದಿಲ್ಲ. ಹಾಗಿದ್ದರೂ ಅಭಿಮಾನಿಗಳು ಕೆಲವು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡುತ್ತಿದ್ದಾರೆ.

ಕ್ಯಾನ್ಸರ್​ ಪೀಡಿತ ಅಭಿಮಾನಿಗೆ ಅತ್ಯಮೂಲ್ಯ ಕ್ಷಣಗಳನ್ನು ನೀಡಿದ ಪ್ರಭಾಸ್​; ನಟನ ದೊಡ್ಡತನಕ್ಕೆ ಮೆಚ್ಚುಗೆ​
ಪ್ರಭಾಸ್​

ಸದ್ಯ ಅತಿ ಹೆಚ್ಚು ಬ್ಯುಸಿ ಆಗಿರುವ ನಟರ ಪೈಕಿ ಪ್ರಭಾಸ್​ ಕೂಡ ಪ್ರಮುಖರು. ‘ರಾಧೆ ಶ್ಯಾಮ್​’, ‘ಆದಿಪುರುಷ್​’, ‘ಸಲಾರ್​’ ಮುಂತಾದ ಹೈವೋಲ್ಟೇಜ್​ ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಪ್ರತಿಯೊಂದು ನಿಮಿಷ ಕೂಡ ಅವರಿಗೆ ಅತ್ಯಮೂಲ್ಯವಾಗಿದೆ. ಹೀಗಿರುವಾಗ ಅವರು ತಮ್ಮ ವಿಶೇಷ ಅಭಿಮಾನಿಗಾಗಿ ಒಂದಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ. ಕ್ಯಾನ್ಸರ್​ ಪೀಡಿತ ಅಭಿಮಾನಿಯೊಬ್ಬರ ಜೊತೆ ವಿಡಿಯೋ ಕಾಲ್​ ಮಾಡಿ ಮಾತನಾಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಪ್ರಭಾಸ್​ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕ್ಯಾನ್ಸರ್​ನಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಅಭಿಮಾನಿಯೊಬ್ಬರು ಪ್ರಭಾಸ್​ ಜೊತೆ ಮಾತನಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದರು. ಅದನ್ನು ಪ್ರಭಾಸ್​ ನನಸಾಗಿಸಿದ್ದಾರೆ. ಆದಿಪುರುಷ್​ ಚಿತ್ರದ ಶೂಟಿಂಗ್​ ಬಿಡುವಿನಲ್ಲಿ ಒಂದಷ್ಟು ಸಮಯ ಮಾಡಿಕೊಂಡು ಅವರು ವಿಡಿಯೋ ಕಾಲ್​ ಮಾಡಿದ್ದಾರೆ. ಇದರಿಂದ ಆ ಅಭಿಮಾನಿಯ ಮನಸ್ಸಿಗೆ ಅದೆಷ್ಟೋ ಸಮಾಧಾನ ಸಿಕ್ಕಿರುತ್ತದೆ. ಪ್ರಭಾಸ್​ ಅವರ ಈ ಕೆಲಸಕ್ಕೆ ಆಸ್ಪತ್ರೆಯ ಸಿಬ್ಬಂದಿ ಧನ್ಯವಾದ ತಿಳಿಸಿದ್ದಾರೆ.

ಅನೇಕ ಸ್ಟಾರ್​ ನಟರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಟಾಲಿವುಡ್​ನಲ್ಲಿ ಮಹೇಶ್​ ಬಾಬು, ಜ್ಯೂ.ಎನ್​ಟಿಆರ್​, ಪವನ್​ ಕಲ್ಯಾಣ್​ ಮುಂತಾದವರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಪ್ರಭಾಸ್​ ಕೂಡ ಸಾಗುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಅವರು ಪ್ರಚಾರ ಬಯಸುವುದಿಲ್ಲ. ಹಾಗಿದ್ದರೂ ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡುತ್ತಿದ್ದಾರೆ.

ಫಿಟ್ನೆಸ್​ ಕಳೆದುಕೊಂಡ ಪ್ರಭಾಸ್​:

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಪ್ರಭಾಸ್​ಗೆ ರಾಮನ ಪಾತ್ರ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಭಾಸ್​ ಅವರ ದೇಹದ ತೂಕ ಏಕಾಏಕಿ ಹೆಚ್ಚಾಗಿದೆ. ಇಂಥ ಫ್ಯಾಟ್​ ಅವತಾರದಲ್ಲಿ ರಾಮನನ್ನು ನೋಡಲು ಜನರು ಇಷ್ಟಪಡುವುದಿಲ್ಲ ಎಂಬುದು ಖಚಿತ. ಹಾಗಾಗಿ ಪ್ರಭಾಸ್​ ತೂಕ ಕಡಿಮೆ ಮಾಡಿಕೊಳ್ಳಬೇಕಿರುವುದು ತುಂಬ ಅನಿವಾರ್ಯ ಆಗಿದೆ. ಅದಕ್ಕಾಗಿ ಈ ಚಿತ್ರದ ನಿರ್ದೇಶಕ ಓಂ ರಾವುತ್​ ಒಂದು ಪ್ಲ್ಯಾನ್​ ಮಾಡಿದ್ದಾರೆ.

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ. ಹೀಗೆ ಏಕಾಏಕಿ ದೇಹದ ತೂಕ ಹೆಚ್ಚಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಇಂಗ್ಲೆಂಡ್​ನಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಆದಷ್ಟು ಬೇಗ ಅವರನ್ನು ಮೊದಲಿನ ಗೆಟಪ್​ಗೆ ಮರಳಿಸಲು ನಿರ್ದೇಶಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಕುರಿತಂತೆ ಚಿತ್ರತಂಡದ ಯಾರೊಬ್ಬರೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ:

‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?

Click on your DTH Provider to Add TV9 Kannada