SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

ಸೈಮಾ ಸಮಾರಂಭದಲ್ಲಿ ರಕ್ಷಿತ್​ ಶೆಟ್ಟಿ ‘ಅತ್ಯುತ್ತಮ ನಟ’ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಯಜಮಾನ’ ಹಾಗೂ ‘ಡಿಯರ್​ ಕಾಮ್ರೇಡ್​​’ ಸಿನಿಮಾಗಳ ನಟನೆಗಾಗಿ ರಶ್ಮಿಕಾ ಮಂದಣ್ಣ ಅವರಿಗೆ ‘ಅತ್ಯುತ್ತಮ ನಟಿ’ (ಕ್ರಿಟಿಕ್ಸ್​) ಪ್ರಶಸ್ತಿ ಸಿಕ್ಕಿದೆ.

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ
ರಶ್ಮಿಕಾ-ರಕ್ಷಿತ್ ಶೆಟ್ಟಿ

ಒಂದು ಕಾಲದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮಧ್ಯೆ ಮನಸ್ತಾಪ ಮೂಡಿತ್ತು. ಬಳಿಕ ಅದಕ್ಕೆ ಸ್ವತಃ ರಕ್ಷಿತ್​ ಶೆಟ್ಟಿ ಫುಲ್​ ಸ್ಟಾಪ್​ ಇಟ್ಟಿದ್ದರು. ಈಗ ಒಂದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ರಕ್ಷಿತ್​ ಕಾಣಿಸಿಕೊಂಡಿದ್ದಾರೆ. ಅದ್ದೂರಿಯಾಗಿ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮಕ್ಕೆ ಶನಿವಾರ (ಸೆ.18) ರಾತ್ರಿ ಅವರಿಬ್ಬರು ಹಾಜರಾಗಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡು ಸಂಭ್ರಮಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಕರಲ್​ಫುಲ್​ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆದಿದೆ. ರಕ್ಷಿತ್​ ಶೆಟ್ಟಿ ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದುಕೊಂಡಿದ್ದರೆ, ರಶ್ಮಿಕಾ ಮಂದಣ್ಣ ಪಾಲಿಗೆ ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಪ್ರಶಸ್ತಿ ಒಲಿದುಬಂದಿದೆ. 2019ನೇ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ನಟಿಸಿದ ‘ಯಜಮಾನ’ ಹಾಗೂ ತೆಲುಗಿನಲ್ಲಿ ನಟಿಸಿದ ‘ಡಿಯರ್​ ಕಾಮ್ರೇಡ್​​’ ಸಿನಿಮಾಗಳ ನಟನೆಗಾಗಿ ಅವರು ಸೈಮಾ ಅವಾರ್ಡ್ಸ್​ಗೆ ನಾಮಿನೇಟ್​ ಆಗಿದ್ದರು. ಈ ಎರಡೂ ಸಿನಿಮಾಗಳಿಂದಲೂ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ (ಕ್ರಿಟಿಕ್ಸ್​) ಸಿಕ್ಕಿದೆ. ಈ ಸಂಭ್ರಮದಿಂದ ರಶ್ಮಿಕಾ ಅಭಿಮಾನಿಗಳು ಹಿರಿಹಿರಿ ಹಿಗ್ಗಿದ್ದಾರೆ. ಕೆಂಪು ಗೌನ್​ ಧರಿಸಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ ಸಖತ್​ ಮಿಂಚಿದ್ದಾರೆ.

ಇನ್ನು, ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಹುಭಾಷೆಯಲ್ಲಿ ಬಿಡುಗಡೆ ಆಗಿತ್ತು. ಭಾರಿ ಬಜೆಟ್​ನಲ್ಲಿ ಮೂಡಿಬಂದ ಆ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ಆದರೆ ಪ್ರಶಸ್ತಿ ಪಡೆಯುವಲ್ಲಿ ರಕ್ಷಿತ್​ ಶೆಟ್ಟಿ ಹಿಂದೆ ಬಿದ್ದಿಲ್ಲ. ಸೈಮಾ ಸಮಾರಂಭದಲ್ಲಿ ಅವರು ಅತ್ಯುತ್ತಮ ನಟ (ಕ್ರಿಟಿಕ್ಸ್​) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರ ಫೋಟೋ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಇದಲ್ಲದೇ ಕನ್ನಡ ಚಿತ್ರರಂಗದ ಅನೇಕ ತಂತ್ರಜ್ಞರು ಮತ್ತು ಕಲಾವಿದರು ಸೈಮಾ ಪ್ರಶಸ್ತಿ ಪಡೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಆಯುಷ್ಮಾನ್​ ಭವ ಚಿತ್ರದ ನಟನೆಗಾಗಿ ರಚಿತಾ ರಾಮ್​ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಅಮರ್​’ ಚಿತ್ರದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಷೇಕ್​ ಅಂಬರೀಷ್​ ಅವರಿಗೆ ‘ಅತ್ಯುತ್ತಮ ಹೊಸ ನಟ’ ಪ್ರಶಸ್ತಿ ನೀಡಲಾಗಿದೆ. ‘ಕನ್ನಡ್​ ಗೊತ್ತಿಲ್ಲ’ ಚಿತ್ರಕ್ಕಾಗಿ ಮಯೂರ ರಾಘವೇಂದ್ರ ಅವರಿಗೆ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿ ಸಿಕ್ಕಿದೆ. ‘ಮನೆ ಮಾರಾಟಕ್ಕಿದೆ’ ಚಿತ್ರದ ನಟನೆಗಾಗಿ ಕಾರುಣ್ಯ ರಾಮ್ ಅವರು ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

‘ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ’; ರಕ್ಷಿತ್ ಶೆಟ್ಟಿ ಮನವಿ

Read Full Article

Click on your DTH Provider to Add TV9 Kannada