‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ; ಇದು ವಿಷ್ಣುವರ್ಧನ್​ ನಟನೆಯ ಕ್ಲಾಸಿಕ್​ ಸಿನಿಮಾದ ಮುಂದಿನ ಭಾಗ

Bandhana 2: ‘ಬಂಧನ’ ನಿರ್ದೇಶಿಸಿದ್ದ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ.

‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ; ಇದು ವಿಷ್ಣುವರ್ಧನ್​ ನಟನೆಯ ಕ್ಲಾಸಿಕ್​ ಸಿನಿಮಾದ ಮುಂದಿನ ಭಾಗ
‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ
Follow us
TV9 Web
| Updated By: ಮದನ್​ ಕುಮಾರ್​

Updated on: Sep 19, 2021 | 12:22 PM

ನಟ ವಿಷ್ಣುವರ್ಧನ್​ ಅಭಿನಯದ ದಿ ಬೆಸ್ಟ್​ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಬಂಧನ’ ಚಿತ್ರ ಕೂಡ ಸ್ಥಾನ ಪಡೆದುಕೊಳ್ಳುತ್ತದೆ. ಇಂದಿಗೂ ಆ ಸಿನಿಮಾವನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅದರಲ್ಲಿನ ಪ್ರೇಮಕಥೆ ಮನಮುಟ್ಟುವಂತಿದೆ. ಕೌಟುಂಬಿಕ ಪ್ರೇಕ್ಷಕರನ್ನು ಭರಪೂರ ಸೆಳೆದುಕೊಂಡ ಆ ಚಿತ್ರದಲ್ಲಿ ವಿಷ್ಣುವರ್ಧನ್​ ಜೊತೆ ಸುಹಾಸಿನಿ, ಜೈ ಜಗದೀಶ್​ ಮೊದಲಾದವರು ನಟಿಸಿದ್ದರು. ಈಗ ಅದಕ್ಕೆ ಸೀಕ್ವೆಲ್​ ತಯಾರಿಸಲು ಸಿದ್ಧತೆ ನಡೆದಿದೆ. ಅಂದು ‘ಬಂಧನ’ ನಿರ್ದೇಶಿಸಿದ್ದ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ.

ಚಂದನವನದಲ್ಲಿ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಅವರು ‘ಬಂಧನ 2’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ವಿಷ್ಣುವರ್ಧನ್​ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿದೆ. ಅದರಲ್ಲಿ ವಿಷ್ಣುವರ್ಧನ್​ ಫೋಟೋ ಹೈಲೈಟ್​ ಆಗಿದೆ. ಹಾಗಾದರೆ ಈ ಪಾರ್ಟ್​ 2ಗೆ ಹೀರೋ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವುದು ಸಹಜ. ರಾಜೇಂದ್ರ ಸಿಂಗ್​ ಬಾಬು ಅವರ ಪುತ್ರ, ನಟ ಆದಿತ್ಯ ‘ಬಂಧನ 2’ ಚಿತ್ರಕ್ಕೆ ಹೀರೋ ಎಂದು ಸ್ವತಃ ನಿರ್ಮಾಪಕ ಅಣಜಿ ನಾಗರಾಜ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸೂಪರ್​ ಹಿಟ್​ ಸಿನಿಮಾಗಳಿಗೆ ಸೀಕ್ವೆಲ್​ ಮಾಡುವ ಬಹುತೇಕರು ಪ್ರತ್ಯೇಕ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ‘ಬಂಧನ 2’ ಚಿತ್ರತಂಡ ಹಾಗಲ್ಲ. ‘ಬಂಧನ’ ಚಿತ್ರದ ಮುಂದುವರಿದ ಕಥೆಯೇ ‘ಬಂಧನ 2’ ಚಿತ್ರದಲ್ಲಿ ಇರಲಿದೆ ಎಂದು ಅಣಜಿ ನಾಗರಾಜ್​ ಹೇಳಿದ್ದಾರೆ. ಅ.22ರಂದು ರಾಜೇಂದ್ರ ಸಿಂಗ್​ ಬಾಬು ಅವರ ಜನ್ಮದಿನ. ಅಂದು ಈ ಸಿನಿಮಾ ಸೆಟ್ಟೇರಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ.

ಬಂಧನ ಚಿತ್ರ 1984ರಲ್ಲಿ ತೆರೆಕಂಡಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ರಾಜೇಂದ್ರ ಸಿಂಗ್​ ಬಾಬು ಅವರು ಮಾಡಿದ್ದರು. ಎಂ. ರಂಗರಾವ್​ ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ‘ನೂರೊಂದು ನೆನಪು ಎದೆಯಾಳದಿಂದ..’, ‘ಪ್ರೇಮದ ಕಾದಂಬರಿ..’, ‘ಈ ಬಂಧನ..’, ‘ಬಣ್ಣ ನನ್ನ ಒಲವಿನ ಬಣ್ಣ..’ ಹಾಡುಗಳು ಈಗಲೂ ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ. ಅಂತಹ ಮ್ಯೂಸಿಕಲ್​ ಹಿಟ್​ ಚಿತ್ರಕ್ಕೆ ಸೀಕ್ವೆಲ್​ ಮಾಡುವುದು ನಿಜಕ್ಕೂ ಚಾಲೆಂಜಿಂಗ್​ ಕೆಲಸ.

ಇದನ್ನೂ ಓದಿ:

‘ವಿಷ್ಣುವರ್ಧನ್​ಗೆ ‘ಸಾಹಸ ಸಿಂಹ’ ಎಂಬ ಬಿರುದು ಸಿಕ್ಕಿದ್ದು ಬರೀ ಪಾತ್ರದ ಕಾರಣಕ್ಕಲ್ಲ’; ತೆರೆ ಹಿಂದಿನ ವಿಚಾರ ತೆರೆದಿಟ್ಟ ನಾಗತಿಹಳ್ಳಿ

‘ವಿಷ್ಣುವರ್ಧನ್​ ರಾತ್ರೋರಾತ್ರಿ ಸಾಹಸ ಸಿಂಹ ಆಗಲಿಲ್ಲ; ಅವರ ಬಗ್ಗೆ ಪುಸ್ತಕ ಬರಲಿದೆ’: ನಟ ಅನಿರುದ್ಧ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್