‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ

ಸುಧೀರ್ ಬಾಬು ಸದ್ಯ ‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪ್ರಮೋಷನ್​ಗೆ ಬೇಕಾದ ಎಲ್ಲಾ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ. ಮಾಧ್ಯಮಗಳನ್ನು ಕೂಡ ಚಿತ್ರತಂಡ ಎದುರುಗೊಳ್ಳುತ್ತಿದೆ.

‘ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ’; ಟಾಲಿವುಡ್​ ನಟನ ವಿಚಿತ್ರ ಆರೋಪ
ಪ್ರಭಾಸ್​ ಜತೆ ಇದ್ದರೆ ಫಿಟ್​ನೆಸ್​ ಕಳೆದುಕೊಳ್ತೀರಿ; ಟಾಲಿವುಡ್​ ನಟನ ವಿಚಿತ್ರ ಆರೋಪ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 23, 2021 | 9:31 AM

ಸೆಲೆಬ್ರಿಟಿಗಳು ಫಿಟ್​ನೆಸ್​ಗೆ ಮೊದಲ ಆದ್ಯತೆ ನೀಡುತ್ತಾರೆ. ಏನೇ ಆದರೂ ಅವರು ಫಿಟ್​ನೆಸ್​ ಕಳೆದುಕೊಳ್ಳೋಕೆ ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಶೂಟಿಂಗ್​ ಮಧ್ಯೆಯೂ ಜಿಮ್​ನಲ್ಲಿ ಬೆವರು ಹರಿಸುವ ಕೆಲಸವನ್ನು ಅವರು ನಿಲ್ಲಿಸುವುದಿಲ್ಲ. ಅದರಲ್ಲೂ ಎರಡು ಸ್ಟಾರ್​​ಗಳು ಜಿಮ್​ನಲ್ಲಿ ಒಟ್ಟಿಗೆ ಸೇರಿದರೆ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟು ಕೊಂಚ ಹೆಚ್ಚೇ ವರ್ಕೌಟ್​ ನಡೆಯುತ್ತದೆ. ಆದರೆ, ಪ್ರಭಾಸ್​ ಜತೆ ಸೇರಿದರೆ ಫಿಟ್​ನೆಸ್​ ಹಾಳಾಗುತ್ತದೆ ಎನ್ನುವ ಆರೋಪವನ್ನು ಟಾಲಿವುಡ್ ನಟ ಸುಧೀರ್​ ಬಾಬು ಮಾಡಿದ್ದಾರೆ.

ಸುಧೀರ್ ಬಾಬು ಸದ್ಯ ‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಪ್ರಮೋಷನ್​ಗೆ ಬೇಕಾದ ಎಲ್ಲಾ ಕೆಲಸಗಳನ್ನು ಚಿತ್ರತಂಡ ಮಾಡುತ್ತಿದೆ. ಮಾಧ್ಯಮಗಳನ್ನು ಕೂಡ ಚಿತ್ರತಂಡ ಎದುರುಗೊಳ್ಳುತ್ತಿದೆ. ಈ ವೇಳೆ ಪ್ರಭಾಸ್​ ಜತೆಗೆ ಕಳೆದ ಸಮಯದ ಬಗ್ಗೆ ಹೇಳಿಕೊಂಡಿದ್ದಾರೆ ಸುಧೀರ್​.

‘ಅನೇಕರು ನನ್ನ ಫಿಸಿಕಲ್​ ಫಿಟ್​ನೆಸ್​ ಬಗ್ಗೆ ಮಾತನಾಡುತ್ತಾರೆ. ಫಿಟ್​ ಆಗಿರೋಕೆ ನನಗೂ ಕೂಡ ಇಷ್ಟ. ಆದರೆ, ಇತ್ತೀಚೆಗೆ ನಾನು ಪ್ರಭಾಸ್​ ಮನೆಗೆ ಭೇಟಿ ನೀಡಿದ್ದೆ. ಅವರು ತುಂಬಾನೇ ರುಚಿಕರ ಆಹಾರವನ್ನು ನೀಡಿದರು. ಪ್ರಭಾಸ್​ ಜತೆ ಒಂದು ವಾರ ಕಳೆದರೆ ನಾವು ನಮ್ಮ ಡಯಟ್​ ತೊರೆಯೋದು ಪಕ್ಕಾ. ಇದರಿಂದ ಫಿಟ್​ನೆಸ್​ ಹಾಳಾಗೋದು ಗ್ಯಾರಂಟಿ’ ಎಂದು ನಕ್ಕಿದ್ದಾರೆ ಸುಧೀರ್​ ಬಾಬು.

‘ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡೋದು ಪ್ರಭಾಸ್​ ಗುಣ. ಅವರ ಸಿಂಪ್ಲಿಸಿಟಿಯಿಂದ ಎಲ್ಲರ ಗಮನ ಸೆಳೆಯುತ್ತಾರೆ’ ಎಂದಿದ್ದಾರೆ ಸುಧೀರ್​. ಈ ಮೂಲಕ ಪ್ರಭಾಸ್​ ಸ್ಟಾರ್​ ನಟನಾದರೂ ಎಲ್ಲರ ಜತೆ ಸಾಮಾನ್ಯರಂತೆ ಇರುತ್ತಾರೆ ಎಂಬುದನ್ನು ಸುಧೀರ್​ ಬಾಯ್ತುಂಬ ಹೊಗಳಿದ್ದಾರೆ.

‘ಶ್ರೀದೇವಿ ಸೋಡಾ ಸೆಂಟರ್’​ ಸಿನಿಮಾ ಆಗಸ್ಟ್ 27ರಂದು ರಿಲೀಸ್​ ಆಗುತ್ತಿದೆ. ಕೊವಿಡ್​ ಕಾರಣದಿಂದ ಕೆಲ ರಾಜ್ಯಗಳ ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಮಧ್ಯೆಯೂ ಸಿನಿಮಾ ರಿಲೀಸ್​ ಮಾಡುವ ಸಾಹಸಕ್ಕೆ ನಿರ್ಮಾಪಕರು ಮುಂದಾಗುತ್ತಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ಬೆಲ್​ ಬಾಟಮ್​ ಸಿನಿಮಾ ಇತ್ತೀಚೆಗೆ ತೆರೆಗೆ ಬಂದಿತ್ತು. ಕೊವಿಡ್​ ಕಾರಣದಿಂದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಹೊಡೆತ ಬಿದ್ದಿತ್ತು.

ಇದನ್ನೂ ಓದಿ: ಸಮಸ್ಯೆಯನ್ನು ಮೆಟ್ಟಿ ನಿಂತ ಪ್ರತಿಭೆ; ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಲ್ಲರ ಮನಗೆದ್ದ ಸೂರ್ಯಕಾಂತ್

​ಯಶ್​ ಎಂಟ್ರಿಗೆ ಜಾಗ ಬಿಟ್ಟುಕೊಟ್ಟ ಪ್ರಭಾಸ್​; ‘ಕೆಜಿಎಫ್​ 2’ ಚಿತ್ರಕ್ಕಾಗಿ ‘ಸಲಾರ್​’ ರಿಲೀಸ್​ ದಿನಾಂಕ ಬದಲು?

Published On - 8:31 am, Mon, 23 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ