ಭಾರತ್ ಬಂದ್: ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂಟಿ ರೈತ ಮಹಿಳೆಯ ಜೋರು ಪ್ರತಿಭಟನೆ!

ಆಕೆಯನ್ನು ಎಬ್ಬಿಸಿ ಬೇರೆ ಕಡೆ ಕಳಿಸುವ ಪ್ರಯತ್ನ ಪೊಲೀಸರು ಮಾಡುತ್ತಿರುವರಾದರೂ, ಆಕೆ ಕೊಂಚ ಸ್ಥೂಲದೇಹಿ ಆಗಿರುವುದರಿಂದ ಆಕೆಯ ಅರ್ಧದಷ್ಟೂ ತೂಕವಿರದ ಒಬ್ಬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೆ ಆಕೆಯನ್ನು ಎತ್ತುವುದು ಸಾಧ್ಯವಾಗುತ್ತಿಲ್ಲ

ಇಲ್ಲಿರುವ ಮಹಿಳೆಯನ್ನು ನೋಡಿ. ರಸ್ತೆ ನಡುವೆ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಮೇಲೆ ಮೇಲೆ ಹಸಿರು ಶಲ್ಯ ಇರುವುದರಿಂದ ಈಕೆ ಒಂದು ರೈತ ಸಂಘಟನೆಯ ಪ್ರತಿನಿಧಿಯಾಗಿರುತ್ತಾರೆ ಎನ್ನುವುದು ನಿಸ್ಸಂಶಯ. ಈಕೆ ಪ್ರತಿಭಟನೆ ನಡೆಸುತ್ತಿರುವ ಕಾರಣ ಎಲ್ಲರಿಗೂ ಗೊತ್ತಿದೆ. ರೈತಪರ ಸಂಘಟನೆಗಳು ಸೋಮವಾರ ಭಾರತ ಬಂದ್ ಗೆ ಕರೆ ನೀಡಿ ದೇಶದೆಲ್ಲೆಡೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರು. ಪ್ರತಿಭಟನೆಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ಕಂಡುಬಂದರೆ, ಬೇರೆ ಕೆಲವೆಡೆ ಅದು ನೀರಸವಾಗಿತ್ತು. ಕೆಂದ್ರ ಸರ್ಕಾರ ರೂಪಿಸಿದ ಮೂರು ಕೃಷಿ ವಿಧೇಯಕಗಳಿಗೆ ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿ ಇವತ್ತಿಗೆ (ಸೆಪ್ಟೆಂಬರ್ 27) ಒಂದು ವರ್ಷ ಗತಿಸಿದ ಹಿನ್ನಲೆಯಲ್ಲಿ ರೈತರು ಬಂದ್ಗೆ ಕರೆ ನೀಡಿದ್ದರು.

ಓಕೆ, ಈ ಮಹಿಳೆಯ ವಿಷಯಕ್ಕೆ ಬರೋಣ. ಈಕೆ ಏಕಾಂಗಿಯಾಗಿ ನಡು ರಸ್ತೆಯಲ್ಲಿ ಕೂತು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಘಟನೆ ಬೆಳಗಾವಿ ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದಿದ್ದು. ಆಕೆಯನ್ನು ಎಬ್ಬಿಸಿ ಬೇರೆ ಕಡೆ ಕಳಿಸುವ ಪ್ರಯತ್ನ ಪೊಲೀಸರು ಮಾಡುತ್ತಿರುವರಾದರೂ, ಆಕೆ ಕೊಂಚ ಸ್ಥೂಲದೇಹಿ ಆಗಿರುವುದರಿಂದ ಆಕೆಯ ಅರ್ಧದಷ್ಟೂ ತೂಕವಿರದ ಒಬ್ಬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೆ ಆಕೆಯನ್ನು ಎತ್ತುವುದು ಸಾಧ್ಯವಾಗುತ್ತಿಲ್ಲ. ಮಹಿಳಾ ಪ್ರತಿಭಟನಾಕರ್ತರನ್ನು ಪುರುಷ ಪೊಲೀಸರು ಮುಟ್ಟುವ ಹಾಗಿಲ್ಲ.

ಪ್ರತಿಭಟನೆ ನಿರತ ಮಹಿಳೆ ಗಟ್ಟಿಯಾದ ಧ್ವನಿಯಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೊನೆಗೆ ಪೊಲೀಸ್ ವ್ಯಾನ್ನಲ್ಲಿ ಆಕೆಯನ್ನು ಕರೆದುಕೊಂಡು ಹೋಗಲಾಗುತ್ತದೆ. ಆಗಲೂ ಈಕೆ ಹಟ ಮಾಡಿದ್ದಲ್ಲದೆ, ಜೋರಾಗಿ ಘೋಷಣೆಗಳನ್ನು ಕೂಗುತ್ತಾರೆ.

ಇದನ್ನೂ ಓದಿ:  Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

Click on your DTH Provider to Add TV9 Kannada