ಸಿದ್ದರಾಮಯ್ಯ ತಲೆಯಲ್ಲಿ ಸಿಕ್ಕಿಕೊಂಡಿದ್ದ ಹೂವಿನ ಪಕಳೆಯನ್ನು ಮಹಿಳೆಯೊಬ್ಬರು ತೆಗೆದಿದ್ದು, ಕಾಂಗೈ ಧುರೀಣ ಕ್ರಾಪು ಸರಿಮಾಡಿಕೊಂಡಿದ್ದು!

ಸಿದ್ದರಾಮಯ್ಯನವರು ಬಾಗಲಕೋಟೆಯಲ್ಲಿ ಸಿದ್ದಶ್ರೀ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಯೋಜಕರು ಅವರಿಗೆ ಗಜಗಾತ್ರದ ಹಾರವೊಂದನ್ನು ಹಾಕಿ ಸನ್ಮಾನಿಸಿದ ನಂತರ ಅದನ್ನು ತೆಗೆಯುವಾಗ ಪ್ರಾಯಶಃ ಹೂವಿನ ಪಕಳೆಯೊಂದು ಸಿದ್ದರಾಮಯ್ಯನವರ ತಲೆಯಲ್ಲಿ ಸಿಕ್ಕಿಕೊಂಡಿತು.

ಸಿದ್ದರಾಮಯ್ಯ ತಲೆಯಲ್ಲಿ ಸಿಕ್ಕಿಕೊಂಡಿದ್ದ ಹೂವಿನ ಪಕಳೆಯನ್ನು ಮಹಿಳೆಯೊಬ್ಬರು ತೆಗೆದಿದ್ದು, ಕಾಂಗೈ ಧುರೀಣ ಕ್ರಾಪು ಸರಿಮಾಡಿಕೊಂಡಿದ್ದು!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 28, 2021 | 1:46 AM

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಹಿಳಾ ಅಭಿಮಾನಿಗಳು ಬಹಳ ಇದ್ದಾರೆ ಹಾಗೂ ಅದು ಅಗಾಗ ಪ್ರೂವ್ ಆಗ್ತಾನೆ ಇದೆ. ಮಂಗಳೂರಿನ ಮೇಯರ್ ಆಗಿದ್ದ ಮಹಿಳೆಯೊಬ್ಬರು ಮಾರ್ಷಲ್ ಆರ್ಟ್ಸ್ ನಲ್ಲೂ ತರಬೇತಿ ಪಡೆದಿದ್ದರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕರಾವಳಿ ನಗರಕ್ಕೆ ಭೇಟಿ ನೀಡಿದ್ದಾಗ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಆಕೆ ತಮಗಿದ್ದ ಪರಣಿತಿಯ ಒಂದು ನಮೂನೆಯನ್ನು ಪ್ರದರ್ಶಿಸಿದ್ದರು. ಆಕೆ ಪಂಚ್ ಥರ ನವಿರಾಗಿ ಸಿದ್ದರಾಮಯ್ಯನವರ ಹೊಟ್ಟೆಗೆ ಗುದ್ದಿದಂತೆ ಮಾಡಿದರೆ ಕಾಂಗ್ರೆಸ್ ನಾಯಕ ಸಹ ಆಕೆಯ ಹೊಟ್ಟೆ ಭಾಗಕ್ಕೆ ಮುಷ್ಠಿಯಿಂದ ಗುದ್ದಿದಂತೆ ಮಾಡಿದ್ದರು. ನಂತರ ಅವರಿಬ್ಬರು ಮತ್ತು ಅಲ್ಲಿ ನೆರೆದಿದ್ದವರೆಲ್ಲ ನಕ್ಕಿದ್ದರು. ಆ ದೃಶ್ಯದ ವಿಡಿಯೋ ವೈರಲ್ ಆಗಿತ್ತು.

ಮತ್ತೊಂದು ಸಂದರ್ಭದಲ್ಲಿ ಅವರದ್ದೇ ಪಕ್ಷ್ದದ ಕಾರ್ಯಕರ್ತೆಯೊಬ್ಬರು ವೇದಿಕೆಯ ಮೇಲೆ ಎಲ್ಲರೆದುರೇ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತಿಟ್ಟಿದ್ದರು. ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅದನ್ನು ನಿರೀಕ್ಷಿಸಿರಲಿಲ್ಲ. ಅವರು ರೋಮಾಂಚನಗೊಳ್ಳುವ ಬದಲು ಅವಾಕ್ಕಾದರು! ಆಕೆ ಮುತ್ತಿಕ್ಕಿದ್ದಾಗ ಹೇಗೆ ರಿಯಾಕ್ಟ್ ಮಾಡುವುದೆಂದು ಆಕೆಯ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ್ದರು. ಆ ಮಹಿಳೆಯು ಸಿದ್ದರಾಮಯ್ಯನವರು ತನ್ನ ತಂದೆಯಂತೆ ಎಂದು ಹೇಳಿ ವಿರೋಧ ಪಕ್ಷದ ನಾಯಕರು ಈ ಸನ್ನಿವೇಶಕ್ಕೆ ರೆಕ್ಕೆಪುಕ್ಕ ಕಟ್ಟುವ ಮೊದಲೇ ತೆರೆ ಎಳೆದು ಬಿಟ್ಟಿದ್ದರ. ಆ ವಿಡಿಯೋ ಸಹ ವೈರಲ್ ಆಗಿತ್ತು.

ವರ್ತಮಾನ ಸ್ಥಿತಿಗೆ ವಾಪಸ್ಸಾಗೋಣ. ಸೋಮವಾರದಂದು ಸಿದ್ದರಾಮಯ್ಯನವರು ಬಾಗಲಕೋಟೆಯಲ್ಲಿ ಸಿದ್ದಶ್ರೀ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆಯೋಜಕರು ಅವರಿಗೆ ಗಜಗಾತ್ರದ ಹಾರವೊಂದನ್ನು ಹಾಕಿ ಸನ್ಮಾನಿಸಿದ ನಂತರ ಅದನ್ನು ತೆಗೆಯುವಾಗ ಪ್ರಾಯಶಃ ಹೂವಿನ ಪಕಳೆಯೊಂದು ಸಿದ್ದರಾಮಯ್ಯನವರ ತಲೆಯಲ್ಲಿ ಸಿಕ್ಕಿಕೊಂಡಿತು. ಅವರಿಗೆ ಅದರ ಬಗ್ಗೆ ಗೊತ್ತಿರಲಿಲ್ಲ. ಹಾರ ತೆಗೆಯುವಾಗ ಅದು ಅವರ ತಲೆ ಸವರಿದ್ದರಿಂದ ಬಾದಾಮಿ ಶಾಸಕರು ತಮ್ಮ ತಲೆ ಕೈಯಿಂದ ಸರಿಮಾಡಿಕೊಳ್ಳತೊಡಗಿದರು.

ಅವರ ತಲೆಯಲ್ಲಿ ಹೂವಿನ ಪಕಳೆಯನ್ನು ಗಮನಿಸಿದ ಮಹಿಳೆಯೊಬ್ಬರು ತಾವೇ ಅದನ್ನು ತೆಗೆದುಬಿಟ್ಟರು. ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಕ್ರಾಪು ಸರಿಮಾಡಿಕೊಂಡು ಆಕೆಯೆಡೆ ಮುಗುಳ್ನಗೆ ಬೀರಿ ಧನ್ಯವಾದಗಳನ್ನು ಹೇಳಿದರು.

ಇದನ್ನೂ ಓದಿ:  Peanuts: ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಸಿಪ್ಪೆ ಗುಡ್ಡೆ ಹಾಕಿದ ರೇವಣ್ಣ, ಸಾತ್ ನೀಡಿದ ಶಾಸಕ ಶಿವಲಿಂಗೇಗೌಡ!

Follow us