AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Peanuts: ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಸಿಪ್ಪೆ ಗುಡ್ಡೆ ಹಾಕಿದ ರೇವಣ್ಣ, ಸಾತ್ ನೀಡಿದ ಶಾಸಕ ಶಿವಲಿಂಗೇಗೌಡ!

HD Revanna Protest: ಪ್ರತಿಭಟನೆ ವೇಳೆ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್​ ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಕೆ ಎಂ ಶಿವಲಿಂಗೇಗೌಡ ಕಡ್ಲೆಕಾಯಿ ಸವಿದು ಟೈಂ ಪಾಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

Peanuts: ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಸಿಪ್ಪೆ ಗುಡ್ಡೆ ಹಾಕಿದ ರೇವಣ್ಣ, ಸಾತ್ ನೀಡಿದ ಶಾಸಕ ಶಿವಲಿಂಗೇಗೌಡ!
ಪ್ರತಿಭಟನೆ ವೇಳೆ ತಿಂದು ತಿಂದು ಕಡ್ಲೆಕಾಯಿ ಹೊಟ್ಟು ಗುಡ್ಡೆ ಹಾಕಿದ ರೇವಣ್ಣ
TV9 Web
| Edited By: |

Updated on:Jun 23, 2021 | 3:45 PM

Share

ಹಾಸನ: ಪ್ರತಿಭಟನೆ ವೇಳೆ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್​ ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಶಾಸಕ ಕೆ ಎಂ ಶಿವಲಿಂಗೇಗೌಡ ಕಡ್ಲೆಕಾಯಿ ಸವಿದು ಟೈಂ ಪಾಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬಡವರ ಬಾದಾಮಿ ಮಾರುತ್ತ ಬಂದವರ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಮತ್ತು ಶಿವಲಿಂಗೇಗೌಡ ಕುರ್ಚಿ ಮೇಲೆ ಕೂತು ಕಡ್ಲೆಕಾಯಿ ತಿನ್ನುತ್ತ ಸಿಪ್ಪೆಯನ್ನು ರಾಶಿ ರಾಶಿ ಗುಡ್ಡೆ ಹಾಕಿದ್ದಾರೆ. ಕಡ್ಲೆಕಾಯಿ ತಿಂದು ನೀರು ಕುಡಿದು ಪ್ರತಿಭಟನೆಯ ಬ್ರೇಕ್ ಮಾಡಿದ್ದಾರೆ.

ಇಷ್ಟಕ್ಕೂ ರೇವಣ್ಣ ಪ್ರತಿಭಟನೆ ಮಾಡಿದ್ದೇಕೆ ಗೊತ್ತಾ?: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್ ಶಾಸಕರು ಇಂದು ಹಾಸನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ, ಕಡ್ಲೆಕಾಯಿ ಮಾರುತ್ತ ಬಂದವ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಕಡ್ಲೆಕಾಯಿ ತಿನ್ನಲು ಶುರು ಮಾಡಿದ್ರು. ಈ ವೇಳೆ ಅವರ ಬೆಂಬಲಿಗರು, ಹಿತೈಶಿಗಳು ಅವರಿಗೆ ಕಡ್ಲೆಕಾಯಿ ತಂದು ಕೊಟ್ಟರು. ಪ್ರತಿಭಟನೆ ಮಗಿಯುವ ವರೆಗೂ ರೆವಣ್ಣ ಕಡ್ಲೆಕಾಯಿ ತಿಂದು ಎಂಜಾಯ್ ಮಾಡಿದ್ದಾರೆ. ಜೊತೆಗೆ ತಮ್ಮ ಅಕ್ಕ ಪಕ್ಕದ ಶಾಸಕರಿಗೂ ಕಡ್ಲೆಕಾಯಿ ಹಂಚಿ ಖುಷಿ ಖುಷಿಯಾಗಿ ಪ್ರತಿಭಟನೆ ನಡೆಸಿದರು.

ರೇವಣ್ಣರಿಗೆ ಕೊರೊನಾ ಬರದಿರಲು ನಿಂಬೆ ಹಣ್ಣು ಸಹಾಯ ಮಾಡುತ್ತಂತೆ

ಹಾಸನ ಜಿಲ್ಲೆಯ ಅಧಿಪತಿ ರೇವಣ್ಣ ಅವರು ಈ ಹಿಂದೆ ಕೊರೊನಾ ಟೆಸ್ಟ್ ಮಾಡಿಸಿದಾಗ ಅವರು ವರದಿ ನೆಗೆಟಿವ್ ಬಂದಿತ್ತು. ಹಾಗಂತ ರೇವಣ್ಣ ಅವರೇ ಹೇಳಿದ್ದರು. ಜೊತೆಗೆ ತಮ್ಮ ಕಚೇರಿಯ ಸಿಬ್ಬಂದಿಯ ವರದಿಯೂ ನೆಗಟಿವ್‌ ಆಗಿದೆ. ಆದ್ರೂ ಸ್ವಲ್ಪ ರೆಸ್ಟ್‌ ಪಡೀಲಿ ಅಂತಾ ರಜೆ ಮೇಲೆ ಕಳಿಸಿದ್ದೇನೆ ಎಂದು ರೇವಣ್ಣ ತಿಳಿಸಿದ್ದರು.

ಹೌದು, ದೇವೆಗೌಡರ ಪುತ್ರ ಹೆಚ್‌ ಡಿ ರೇವಣ್ಣ ಅಂದ್ರೆ ಎರಡು ವಿಷ್ಯಗಳು ತಟ್ಟನೆ ನೆನಪಾಗುತ್ತವೆ. ಒಂದು ಅವರು ಹಾಸನವನ್ನ ರಿಪಬ್ಲಿಕ್‌ ಆಫ್‌ ರೇವಣ್ಣಾಸ್‌ ಹಾಸನ ಮಾಡಿಕೊಂಡಿರೋದು, ಮತ್ತೊಂದು ಯಾವಾಗಲೂ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡಿರೋದು. ಹೀಗಾಗಿ ರೇವಣ್ಣ ಅವರಿಗೆ ಕೊರೊನಾ ನೆಗಟಿವ್‌ ಬರೋಕ್ಕೆೇನಾದ್ರೂ ಲಿಂಬೆ ಹಣ್ಣಿನ ಜಾದು ಕಾರಣವಿರಬಹುದು ಅಂತಾ ಯಾರಾದ್ರೂ ಅಂದುಕೊಂಡ್ರು ಅಂದುಕೊಳ್ಳಬಹುದು.

ರೇವಣ್ಣಗೆ ಕೊರೊನಾ ಇಲ್ವಂತೆ.. ನಿಂಬೆ ಹಣ್ಣಿನ ಜಾದು ವರ್ಕೌಟ್‌ ಆಯ್ತಾ?

Published On - 1:30 pm, Wed, 23 June 21

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ