ಮೊಲಿವುಡ್​ನಲ್ಲಿ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರುವ ಮಡೊನ್ನಾ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಎದುರು ನಾಯಕಿ

ಮೊಲಿವುಡ್​ನಲ್ಲಿ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರುವ ಮಡೊನ್ನಾ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಎದುರು ನಾಯಕಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 27, 2021 | 9:13 PM

ಸಿನಿಮಾ ನಟಿಯಾಗುವ ಮೊದಲು ಮಡೊನ್ನಾ ಮಲಯಾಳಂ ಟಿವಿಯೊಂದರಲ್ಲಿ ಹೋಸ್ಟ್ ಆಗಿದ್ದರು. ಆಕೆಯ ಸೌಂದರ್ಯ ಮತ್ತು ಕಾರ್ಯಕ್ರಮ ನಡೆಸಿಕೊಡುವ ರೀತಿಯಿಂದ ಪ್ರಭಾವಿತರಾದ ಮಲಯಾಳಂ ಸಿನಿಮಾ ನಿರ್ಮಾಕರೊಬ್ಬರು ಫಿಲ್ಮ್ ಆಫರ್ ಮಾಡಿದಾಗ ಆಕೆ ಸಂತೋಷದಿಂದ ಒಪ್ಪಿಕೊಂಡರು.

ಬೊಗಸೆ ಕಂಗಳು, ತುಂಬುಗೆನ್ನೆ, ದಟ್ಟ ಕೂದಲು, ಕೊಂಚ ದಪ್ಪವೆನಿಸಿದರೂ ಮುಖಕ್ಕೆ ಒಪ್ಪುವಂಥ ಮೂಗು, ಸೊಬಗಿನ ಮೈಮಾಟ, ಸುಶ್ರಾವ್ಯ ಕಂಠ ಮತ್ತು ಅಷ್ಟೇ ಅದ್ಭುತ ನಟನಾ ಪ್ರತಿಭೆ. ಕನ್ನಡಿಗರು ಈ ಸುಂದರಿಯನ್ನು ಇಷ್ಟರಲ್ಲೇ ತೆರೆ ಮೇಲೆ ನೋಡಲಿದ್ದಾರೆ. ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳನ್ನು ನೋಡುವ ಹವ್ಯಾಸ ಇರುವವರಿಗೆ ಮಡೊನ್ನಾ ಸೆಬಾಸ್ಟಿಯನ್ ಚಿರಪರಿಚಿತರು. ಸುದೀಪ್ ನಾಯಕನಾಗಿರುವ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಮಡೊನ್ನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಇಷ್ಟರಲ್ಲೇ ಬಿಡುಗಡೆಯಾಗಲಿದೆಯಂತೆ.

28-ವರ್ಷ ವಯಸ್ಸಿನ ಮಡೊನ್ನಾ ನಟಿಯ ಜೊತೆ ಸುಶ್ರಾವ್ಯ ಕಂಠದ ಒಡತಿಯೂ ಹೌದು. 2015 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಇದುವರೆಗೆ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಮಲಯಾಳಂ ಮತ್ತು ತಮಿಳು ಭಾಷೆಯ ಚಿತ್ರಗಳು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮಡೊನ್ನಾಗೆ ಚಿಕ್ಕಂದಿನಿಂದಲೂ ಹಾಡುವ ಆಸಕ್ತಿಯಿತ್ತು. ಈಗ ಆಕೆ ಶಾಸ್ತ್ರೀಯ ಮತ್ತು ಪಾಶ್ಚಾತ್ಯ-ಎರಡು ಗಾಯನಗಳಲ್ಲೂ ಪರಿಣಿತಳು.

ಅಂದಹಾಗೆ, ಸಿನಿಮಾ ನಟಿಯಾಗುವ ಮೊದಲು ಮಡೊನ್ನಾ ಮಲಯಾಳಂ ಟಿವಿಯೊಂದರಲ್ಲಿ ಹೋಸ್ಟ್ ಆಗಿದ್ದರು. ಆಕೆಯ ಸೌಂದರ್ಯ ಮತ್ತು ಕಾರ್ಯಕ್ರಮ ನಡೆಸಿಕೊಡುವ ರೀತಿಯಿಂದ ಪ್ರಭಾವಿತರಾದ ಮಲಯಾಳಂ ಸಿನಿಮಾ ನಿರ್ಮಾಕರೊಬ್ಬರು ಫಿಲ್ಮ್ ಆಫರ್ ಮಾಡಿದಾಗ ಆಕೆ ಸಂತೋಷದಿಂದ ಒಪ್ಪಿಕೊಂಡರು.

ಸಾಂಪ್ರದಾಯಿಕ ಚೆಲುವಿನ ಮಡೊನ್ನಾ ಎಲ್ಲ ಬಗೆಯ ಉಡುಪುಗಳಲ್ಲಿ ಸುಂದರವಾಗಿ ಕಾಣುತ್ತಾರೆ. ಅಂದಹಾಗೆ, ನಿಮಗೊಂದು ವಿಷಯ ಹೇಳುವುದು ಮರೆತು ಹೋಯಿತು ಮಾರಾಯ್ರೇ.

ಏನು ಗೊತ್ತಾ? ಅಕೆ ಹುಟ್ಟಿ ಬೆಳೆದಿದ್ದು, ಪಿಯುವರೆಗೆ ಓದಿದ್ದು ಕೇರಳದ ಕಣ್ಣೂರಿನಲ್ಲಾದರೂ, ಪದವಿ ವ್ಯಾಸಂಗ ಮಾಡಿದ್ದು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ. ಆಕೆ ಕನ್ನಡ ಕಲಿತಿದ್ದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ:  Shocking Video: ಸುಂಟರಗಾಳಿ ರಭಸಕ್ಕೆ ಸಿಲುಕಿ ಪಲ್ಟಿ ಹೊಡೆದ ಟ್ರಕ್; ಶಾಕಿಂಗ್ ವಿಡಿಯೋ ಇಲ್ಲಿದೆ