Shocking Video: ಸುಂಟರಗಾಳಿ ರಭಸಕ್ಕೆ ಸಿಲುಕಿ ಪಲ್ಟಿ ಹೊಡೆದ ಟ್ರಕ್; ಶಾಕಿಂಗ್ ವಿಡಿಯೋ ಇಲ್ಲಿದೆ
Tornado Video: ವಿಡಿಯೋದಲ್ಲಿ ಟ್ರಕ್ನ ಎದುರು ಬೆಳಕಿನ ರೂಪದಲ್ಲಿ ಕಾಣುತ್ತಿರುವ ಸುಂಟರಗಾಳಿ ಮುಂದಿದ್ದ ವಾಹನವನ್ನು ಸುತ್ತುವರೆದು ಟ್ರಕ್ನತ್ತ ಧಾವಿಸಿದೆ. ಭಾರೀ ಗಾಳಿಯಿಂದ ಮರಗಳು ತೂಗಾಡುತ್ತಿದ್ದು, ಮರದ ಎಲೆಗಳು ರಸ್ತೆಯ ತುಂಬ ಹಾಸಿ ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಪ್ರಬಲವಾದ ಸುಂಟರಗಾಳಿ (Tornado) ಬೀಸಿದ್ದು, ಸುಂಟರಗಾಳಿಯ ರಭಸಕ್ಕೆ ಸಿಲುಕಿ ಟ್ರಕ್ ಪಲ್ಟಿ ಹೊಡೆದಿರುವ ಶಾಕಿಂಗ್ ವಿಡಿಯೋ (Shocking Video) ಎಲ್ಲೆಡೆ ಹರಿದಾಡುತ್ತಿದೆ. ಸೆಪ್ಟೆಂಬರ್ 1ರಂದು ಈ ಘಟನೆ ನಡೆದಿದ್ದು, ಯೂಟ್ಯೂಬ್‌ನಲ್ಲಿ (YouTube) ಇದರ ವಿಡಿಯೋ ವೈರಲ್ ಆಗಿದೆ. ಟ್ರಕ್ನಲ್ಲಿದ್ದವರು ಸುಂಟರಗಾಳಿಯ ಅಟ್ಟಹಾಸವನ್ನು ವಿಡಿಯೋ ಮಾಡಿಕೊಳ್ಳುತ್ತಿರುವಾಗಲೇ ಟ್ರಕ್ನೆಡೆಗೆ ಬಂದ ಸುಂಟರಗಾಳಿ ಹೊಡೆತಕ್ಕೆ ಟ್ರಕ್ ಒಂದು ಕಡೆಗೆ ವಾಲಿ ಬಿದ್ದಿದೆ.
ಅಪ್ಪರ್ ಡಬ್ಲಿನ್ ಮತ್ತು ಹಾರ್ಶಮ್ ಪೆನ್ಸಿಲ್ವೇನಿಯಾ ಪ್ರದೇಶಕ್ಕೆ ಅಪ್ಪಳಿಸಿದ EF-2 ಸುಂಟರಗಾಳಿಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಎಬಿಸಿ ನ್ಯೂಸ್ ಪ್ರಕಾರ, ಗಂಟೆಗೆ 130 ಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಸುಂಟರಗಾಳಿಯ ಪರಿಣಾಮ ಸಾಕಷ್ಟು ಸಮಯದವರೆಗೂ ಮುಂದುವರೆದಿತ್ತು.
ವಿಡಿಯೋದಲ್ಲಿ ಟ್ರಕ್ನ ಎದುರು ಬೆಳಕಿನ ರೂಪದಲ್ಲಿ ಕಾಣುತ್ತಿರುವ ಸುಂಟರಗಾಳಿ ಮುಂದಿದ್ದ ವಾಹನವನ್ನು ಸುತ್ತುವರೆದು ಟ್ರಕ್ನತ್ತ ಧಾವಿಸಿದೆ. ಭಾರೀ ಗಾಳಿಯಿಂದ ಮರಗಳು ತೂಗಾಡುತ್ತಿದ್ದು, ಮರದ ಎಲೆಗಳು ರಸ್ತೆಯ ತುಂಬ ಹಾಸಿ ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಗಾಳಿಯು ವೇಗವನ್ನು ಪಡೆಯುತ್ತಿದ್ದಂತೆ, ಟ್ರಕ್ ತನ್ನ ಒಂದು ಬದಿಗೆ ಪಲ್ಟಿಯಾಗಿ ರಸ್ತೆಯಲ್ಲಿ ಬಿದ್ದಿದೆ. ಅದಾದ ಬಳಿಕ ವಿಡಿಯೋ ಸ್ಥಗಿತಗೊಂಡಿದೆ.
ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಕಾರ್ಲ್ ಬೆಯರ್ ಹಂಚಿಕೊಂಡಿದ್ದಾರೆ. ಟ್ರಕ್ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Shocking Video: ಫ್ಯಾಮಿಲಿ ಡಿನ್ನರ್ ವೇಳೆ ಮಗುವಿನ ಪಕ್ಕದಲ್ಲೇ ಮುರಿದು ಬಿತ್ತು ಸೀಲಿಂಗ್ ಫ್ಯಾನ್; ಶಾಕಿಂಗ್ ವಿಡಿಯೋ ಇಲ್ಲಿದೆ
Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!
(Powerful Tornado Flips Truck In Terrifying Video Pennsylvania Cyclone Shocking Video is here)
Published On - 3:36 pm, Sat, 25 September 21