‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು

Radhika Pandit: ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

‘ಜೀವನವನ್ನು ವಿಶೇಷವಾಗಿಸಿದ್ದೀಯಾ, ನಮ್ಮ ನಗುವಿಗೆ ನೀನೇ ಕಾರಣ’; ಮಗಳು ಆಯ್ರಾ ಬಗ್ಗೆ ರಾಧಿಕಾ-ಯಶ್ ವಿಶೇಷ ಮಾತು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 26, 2021 | 8:21 PM

ಇಂದು ಮಗಳ ದಿನಾಚರಣೆ. ಈ ವಿಶೇಷ ದಿನದಂದು ಎಲ್ಲ ತಂದೆ-ತಾಯಂದಿರು ತಮ್ಮ ತಮ್ಮ ಮಗಳಿಗೆ ವಿಶೇವಾಗಿ ಶುಭಾಶಯ ಕೋರುತ್ತಿದ್ದಾರೆ. ಅನೇಕ ಸ್ಟಾರ್​ ನಟರು ತಮ್ಮ ಮಗಳ ಫೋಟೋ ಪೋಸ್ಟ್​ ಮಾಡಿ ಶುಭಾಶಯ ಕೋರುತ್ತಿದ್ದಾರೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್​​ ಕೂಡ ಹೊರತಾಗಿಲ್ಲ. ಇಬ್ಬರೂ ಮಗಳು ಆಯ್ರಾಗೆ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಅಲ್ಲದೆ, ನಿನ್ನಿಂದ ಜೀವನ ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅನೇಕರು ಖುಷಿಯಾಗಿದ್ದಾರೆ. ಅಲ್ಲದೆ, ಯಶ್​ ಹಾಗೂ ಆಯ್ರಾ ಫೋಟೋ ನೋಡಿ ಬಾಯ್ತುಂಬ ಹೊಗಳಿದ್ದಾರೆ.

ಆಯ್ರಾ ಸೆಲೆಬ್ರಿಟಿ ಕಿಡ್​. ಈ ಕಾರಣಕ್ಕೆ ಅವಳ ಫೋಟೋಗಳನ್ನು ನೋಡೋಕೆ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಆಯ್ರಾ ಹಾಗೂ ಯಥರ್ವ್​ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಯಶ್​ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ, ಅವರು ಮಕ್ಕಳ ಫೋಟೋ ಪೋಸ್ಟ್​ ಮಾಡುವುದು ಅಪರೂಪ.

ಈಗ ಯಶ್​ ಅವರು ತಮ್ಮ ಮಗಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಈ ಮೂಲಕ ಮಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ. ಮಗಳ ಜತೆ ಕುಳಿತಿರುವ ಫೋಟೋವನ್ನು ಯಶ್​ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಯಶ್​ ಅವರನ್ನು ಆಯ್ರಾ ಮುದ್ದಾಗಿ ನೋಡುತ್ತಿದ್ದಾಳೆ. ಈ ಫೋಟೋ ಅನೇಕರಿಗೆ ಇಷ್ಟವಾಗಿದೆ.

‘ನಾನು ನಿನ್ನ ಮಾತನ್ನು ಯಾವಾಗಲೂ ಕೇಳುತ್ತಾ ಇರಬಹುದು. ನೀನು ನಮಗೆ ಸಿಕ್ಕಿದ್ದು ಅದೃಷ್ಟ. ಮಗಳ ದಿನಾಚರಣೆಯ ಶುಭಾಶಯ. ನೀನು ಜೀವನವನ್ನು ವಿಶೇಷವಾಗಿಸಿದ್ದೀಯಾ’ ಎಂದು ಯಶ್​ ಕ್ಯಾಪ್ಶನ್​ ಕೊಟ್ಟಿದ್ದಾರೆ.

View this post on Instagram

A post shared by Yash (@thenameisyash)

ರಾಧಿಕಾ ಪಂಡಿತ್​ ಕೂಡ ಮಗಳ ಜತೆಗಿನ ಫೋಟೋ ಹಾಕಿ, ‘ನಾವೆಲ್ಲರೂ ನಗುತ್ತಿರುವುದಕ್ಕೆ ನೀನು ಕಾರಣ. ಲವ್​ ಯು ಬೆಸ್ಟ್​ ಫ್ರೆಂಡ್​’ ಎಂದು ಬರೆದುಕೊಂಡಿದ್ದಾರೆ.

ಯಶ್​ ‘ಕೆಜಿಎಫ್ ಚಾಪ್ಟರ್​ 2’ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗಾಗಿ ಇನ್ನೂ ಹಲವು ತಿಂಗಳು ಕಾಯಬೇಕಿದೆ. ಸ್ಟಾರ್​ ತಾರಾ ವರ್ಗ ಇರುವುದರಿಂದ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಪ್ರಶಾಂತ್​ ನೀಲ್​ ತಮ್ಮ ನಿರ್ದೇಶನದ ಮೂಲಕ ಈಗಾಗಲೇ ಮನೆ ಮಾತಾಗಿದ್ದಾರೆ. ಈಗ ಅವರು ‘ಕೆಜಿಎಫ್​ ಚಾಪ್ಟರ್​ 2’ ಹೇಗೆ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ:  ‘ಅವರ ವಯಸ್ಸಿನಲ್ಲಿ ನಾನು ಹೀಗೆ ಇರಲು ಸಾಧ್ಯವೇ?’ ರಾಧಿಕಾ ಪಂಡಿತ್​ಗೆ ಹೀಗೊಂದು ಅನುಮಾನ

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

Published On - 7:46 pm, Sun, 26 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್