‘ಯುವರತ್ನ’ ನಾಯಕಿ ಸಾಯೆಶಾ ಮಗಳಿಗೆ ಅರಿಯಾನಾ ಎಂದು ನಾಮಕರಣ; ಇದರ ಅರ್ಥವೇನು?
ಸಾಯೆಶಾ ಮತ್ತು ಆರ್ಯಾ ಜನಿಸಿ ಎರಡು ತಿಂಗಳಾಗಿದೆ. ಈಗ ಮಗುವಿಗೆ ಅರಿಯಾನಾ ಎಂದು ನಾಮಕರಣ ಮಾಡಲಾಗಿದೆ. ಹಾಗಾದರೆ, ಇದರ ಅರ್ಥವೇನು? ಅದಕ್ಕೂ ಉತ್ತರವಿದೆ.
ನಟಿ ಸಾಯೆಶಾ ಹಾಗೂ ಆರ್ಯ ದಂಪತಿ ಇತ್ತೀಚೆಗೆ ಮಗುವನ್ನು ಬರಮಾಡಿಕೊಂಡಿದ್ದರು. ಈಗ ಮಗುವಿಗೆ ಈ ದಂಪತಿ ಹೆಸರು ಇಟ್ಟಿದ್ದಾರೆ. ಈ ಬಗ್ಗೆ ಕುಟುಂಬದ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಹೆಸರು ಕೇಳಿದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ.
ಸಾಯೆಶಾ ಮತ್ತು ಆರ್ಯಾ ಮಗು ಜನಿಸಿ ಎರಡು ತಿಂಗಳಾಗಿದೆ. ಈಗ ಮಗುವಿಗೆ ಅರಿಯಾನಾ ಎಂದು ನಾಮಕರಣ ಮಾಡಲಾಗಿದೆ. ಹಾಗಾದರೆ, ಇದರ ಅರ್ಥವೇನು? ಅದಕ್ಕೂ ಉತ್ತರವಿದೆ. ಅರಿಯಾನಾ ಅಂದರೆ ಅತ್ಯಂತ ಪವಿತ್ರವಾದುದು ಎನ್ನುವು ಅರ್ಥವಿದೆ.
2019ರಲ್ಲಿ ಆರ್ಯ ಜೊತೆ ಸಾಯೆಶಾ ಮದುವೆ ನಡೆಯಿತು. ಇಬ್ಬರೂ ಕೂಡ ಅವರವರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಾಯೆಶಾ ಗರ್ಭಿಣಿ ಆಗಿರುವ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಹೆಣ್ಣು ಮಗು ಜನಿಸಿರುವ ಸುದ್ದಿಯನ್ನು ಕಾಲಿವುಡ್ ನಟ, ಆರ್ಯ ಅವರ ಸ್ನೇಹಿತ ವಿಶಾಲ್ ಬ್ರೇಕ್ ಮಾಡಿದ್ದರು.
‘ನಾನು ಅಂಕಲ್ ಆಗಿದ್ದೇನೆ ಎಂಬ ಈ ಖುಷಿ ಹಂಚಿಕೊಳ್ಳಲು ಬಹಳ ಖುಷಿ ಆಗುತ್ತಿದೆ. ನನ್ನ ಸಹೋದರ ಜಮ್ಮಿ ಮತ್ತು ಸಾಯೆಶಾ ಅವರಿಗೆ ಹೆಣ್ಣು ಮಗು ಜನಿಸಿದೆ. ಚಿತ್ರೀಕರಣದ ನಡುವೆ ಈ ಭಾವುಕ ಕ್ಷಣವನ್ನು ನಿಯಂತ್ರಿಸಲು ಆಗುತ್ತಿಲ್ಲ. ಅವರಿಗೆ ಸದಾ ಒಳ್ಳೆಯದಾಗಲಿ. ತಾಯಿ-ಮಗಳಿಗೆ ದೇವರ ಕೃಪೆ ಇರಲಿ. ಅಪ್ಪನಾಗಿ ಹೊಸ ಜವಾಬ್ದಾರಿ ನಿಭಾಯಿಸುತ್ತಿರುವ ಆರ್ಯಾಗೆ ಆಲ್ ದಿ ಬೆಸ್ಟ್’ ಎಂದು ವಿಶಾಲ್ ಟ್ವೀಟ್ ಮಾಡಿದ್ದರು.
ಸಾಯೆಶಾಗೆ ಮಗು ಜನಿಸಿದ ನಂತರದಲ್ಲಿ ಆರ್ಯ ವಿರುದ್ಧ ಆರೋಪವೊಂದು ಕೇಳಿ ಬಂದಿತ್ತು. ಜರ್ಮನಿಯಲ್ಲಿ ನೆಲೆಸಿರುವ ಶ್ರೀಲಂಕಾ ಮೂಲದ ತಮಿಳು ಮಹಿಳೆಗೆ ನಟ ಆರ್ಯ ಅವರು ಮೋಸ ಮಾಡಿದ್ದಾರೆ ಎನ್ನಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆ ಮೂಲಕ ನಟ ಆರ್ಯ ನಿಟ್ಟುಸಿರು ಬಿಟ್ಟಿದ್ದರು.
ಇದನ್ನೂ ಓದಿ: ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್ಡೇ ವಿಶ್ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?
ಮಗು ಜನಿಸಿದ ನಂತರ ಹೇಗಿದ್ದಾರೆ ‘ಯುವರತ್ನ’ ನಟಿ ಸಾಯೆಶಾ? ಇಲ್ಲಿದೆ ಲೇಟೆಸ್ಟ್ ಫೋಟೋ
Published On - 2:30 pm, Mon, 27 September 21