AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?

Sayesha Saigal Birthday: ಮಗುವಿನ ಜನನದ ಖುಷಿ, ಪತ್ನಿಯ ಜನ್ಮದಿನದ ಸಂಭ್ರಮ ಏನೇ ಇದ್ದರೂ ಆರ್ಯಗೆ ಒಂದು ತಲೆ ನೋವು ತಪ್ಪಿಲ್ಲ. ಅವರ ಮೇಲೆ ಯುವತಿಯೊಬ್ಬರು ಗಂಭೀರ ಆರೋಪ ಹೊರಿಸಿದ್ದಾರೆ. ಆ ಸಂಬಂಧ ಆರ್ಯ ಅವರು ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ.

ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?
ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?
TV9 Web
| Edited By: |

Updated on: Aug 12, 2021 | 1:21 PM

Share

ಖ್ಯಾತ ನಟ ಆರ್ಯ ಮತ್ತು ‘ಯುವರತ್ನ’ ಸಿನಿಮಾ ನಟಿ ಸಾಯೆಶಾ ಸೈಗಲ್​ (Sayesha Saigal) ಅವರು ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿಗೆ ಹೆಣ್ಣು ಮಗು ಜನಿಸಿದೆ. ಆ ಖುಷಿಯಲ್ಲೇ ತೇಲುತ್ತಿರುವ ಸಾಯೆಶಾ ಅವರಿಗೆ ಇಂದು (ಆ.12) ಜನ್ಮದಿನದ ಸಂಭ್ರಮ. ಈ ದಿನವನ್ನು ಇನ್ನಷ್ಟು ರಂಗಾಗಿಸಲು ಆರ್ಯ (Arya) ಅವರು ವಿಶ್​ ಮಾಡಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು. ನನಗಾಗಿ ನೀನು ಹೊಂದಿರುವ ಪ್ರೀತಿ ದಿನದಿನವೂ ಹೆಚ್ಚಾಗಲಿ. ಜೀವನದಲ್ಲಿ ನಿನ್ನನ್ನು ಪಡೆದಿರುವುದಕ್ಕೆ ನಾನು ಅದೃಷ್ಟಶಾಲಿ’ ಎಂದು ಆರ್ಯ ಟ್ವೀಟ್​ ಮಾಡಿದ್ದಾರೆ.

ಮಗುವಿನ ಜನನದ ಖುಷಿ, ಪತ್ನಿಯ ಜನ್ಮದಿನದ ಸಂಭ್ರಮ ಏನೇ ಇದ್ದರೂ ಆರ್ಯಗೆ ಒಂದು ತಲೆ ನೋವು ತಪ್ಪಿಲ್ಲ. ಅವರ ಮೇಲೆ ಯುವತಿಯೊಬ್ಬರು ಗಂಭೀರ ಆರೋಪ ಹೊರಿಸಿದ್ದಾರೆ. 70 ಲಕ್ಷ ರೂ. ಹಣ ಪಡೆದುಕೊಂಡು, ಮದುವೆ ಆಗುವುದಾಗಿ ನಂಬಿಸಿ ಆರ್ಯ ಮೋಸ ಮಾಡಿದ್ದಾರೆ ಎಂದು ಶ್ರೀಲಂಕಾ ಮೂಲದ ಮಹಿಳೆ ಆರೋಪಿಸಿದ್ದಾರೆ. ಅವರೀಗ ಜರ್ಮನಿಯಲ್ಲಿ ನೆಲೆಸಿದ್ದು ಕೆಲ ದಿನಗಳ ಹಿಂದೆ ಆನ್​ಲೈನ್​ ಮೂಲಕ ದೂರು ನೀಡಿದ್ದರು.

ಯುವತಿ ನೀಡಿದ ದೂರಿನ ಅನ್ವಯ ಆರ್ಯ ಅವರನ್ನು ಚೆನ್ನೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಪರಿಮಿತವಾಗಿ ಪ್ರೀತಿಸುವ ಮುದ್ದಿನಂಥ ಪತ್ನಿ ಮನೆಯಲ್ಲಿ ಇರುವಾಗ ಆರ್ಯ ಯಾಕೆ ಪರಸ್ತ್ರೀ ಸಹವಾಸ ಮಾಡಿದರು ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಆ ಯುವತಿ ಮಾಡಿರುವ ಆರೋಪ ನಿಜವೋ ಸುಳ್ಳೋ ಎಂಬುದು ತನಿಖೆ ಮೂಲಕ ಗೊತ್ತಾಗಬೇಕಿದೆ. ಆ ಕುರಿತು ಆರ್ಯ ಆಗಲಿ ಅಥವಾ ಅವರ ಕುಟುಂಬದವರಾಗಲಿ ಯಾವುದೇ ಹೇಳಿಕೆಯನ್ನೂ ಸಾರ್ವಜನಿಕವಾಗಿ ನೀಡಿಲ್ಲ.

ಚೆನ್ನೈ ಪೊಲೀಸ್​ ಕಮಿಷನರ್​ ಕಚೇರಿಗೆ ಬಂದ ಆರ್ಯ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗಂಟೆಗಟ್ಟಲೆ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ‘ಇನ್ನೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಯುವತಿ ನೀಡಿದ ದೂರಿಗೆ ಸಂಬಂಧಪಟ್ಟಂತೆ ಆರ್ಯ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಯ ನಟಿಸಿದ ‘ಸರ್ಪಟ್ಟ ಪರಂಬರೈ’ ಸಿನಿಮಾ ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಆ ಖುಷಿಯ ನಡುವೆ ಅವರು ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆರ್ಯ ಮೇಲೆ ಅಂಥ ಗಂಭೀರ ಆರೋಪ ಹೊರಿಸಿರುವ ಯುವತಿ ಯಾರು? ಆರ್ಯ ನಿಜಕ್ಕೂ ಆಕೆಯಿಂದ ಹಣ ಪಡೆದು, ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರಾ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ.

ಇದನ್ನೂ ಓದಿ:

ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೆಶಾ; ಆರ್ಯ ಕುಟುಂಬದಲ್ಲಿ ಸಂಭ್ರಮ

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್