ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೆಶಾ; ಆರ್ಯ ಕುಟುಂಬದಲ್ಲಿ ಸಂಭ್ರಮ

Sayyeshaa Saigal: ಯುವರತ್ನ ಸಿನಿಮಾ ನಟಿ ಸಾಯೆಶಾ ಸೈಗಲ್​ಗೆ ಈಗಿನ್ನೂ 23ರ ಪ್ರಾಯ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡು, ಕೇವಲ 21ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೆಶಾ; ಆರ್ಯ ಕುಟುಂಬದಲ್ಲಿ ಸಂಭ್ರಮ
ಆರ್ಯ, ಸಾಯೆಶಾ ಸೈಗಲ್​

ಬಹುಭಾಷಾ ನಟಿ ಸಾಯೆಶಾ ಸೈಗಲ್​ (Sayyeshaa Saigal) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಂತಸ ಆಗಿದೆ. ಅಚ್ಚರಿ ಎಂದರೆ ತಮಗೆ ಮಗು ಆಗಿರುವ ವಿಷಯವನ್ನು ಅವರಾಗಲಿ, ಅವರ ಪತಿ ಆರ್ಯ (Arya) ಆಗಲಿ ಹಂಚಿಕೊಂಡಿಲ್ಲ. ಬದಲಿಗೆ ಕಾಲಿವುಡ್​ ನಟ, ಆರ್ಯ ಅವರ ಸ್ನೇಹಿತ ವಿಶಾಲ್​ ಅವರು ಈ ಸುದ್ದಿ ಬ್ರೇಕ್​ ಮಾಡಿದ್ದಾರೆ. ಸಾಯೆಶಾ ತಾಯಿ ಆಗಿದ್ದಾರೆ ಎಂದು ಟ್ವೀಟ್ ಮಾಡಿರುವ ವಿಶಾಲ್​, ಸಂತಸಪಟ್ಟಿದ್ದಾರೆ.​ 2019ರಲ್ಲಿ ಆರ್ಯ ಜೊತೆ ಸಾಯೆಶಾ ಮದುವೆ ನಡೆಯಿತು. ಇಬ್ಬರೂ ಕೂಡ ಅವರವರ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಾಯೆಶಾ ಗರ್ಭಿಣಿ ಆಗಿರುವ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಈಗ ಹೆಣ್ಣು ಮಗು (Baby Girl) ಜನಿಸಿರುವ ಸುದ್ದಿ ಹೊರಬಿದ್ದಿದೆ. ಆರ್ಯ ಮತ್ತು ಸಾಯೆಶಾ ದಂಪತಿಗೆ ಸೆಲೆಬ್ರಿಟಿಗಳು, ಸ್ನೇಹಿತರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

‘ನಾನು ಅಂಕಲ್​ ಆಗಿದ್ದೇನೆ ಎಂಬ ಈ ಖುಷಿ ಹಂಚಿಕೊಳ್ಳಲು ಬಹಳ ಖುಷಿ ಆಗುತ್ತಿದೆ. ನನ್ನ ಸಹೋದರ ಜಮ್ಮಿ ಮತ್ತು ಸಾಯೆಶಾ ಅವರಿಗೆ ಹೆಣ್ಣು ಮಗು ಜನಿಸಿದೆ. ಚಿತ್ರೀಕರಣದ ನಡುವೆ ಈ ಭಾವುಕ ಕ್ಷಣವನ್ನು ನಿಯಂತ್ರಿಸಲು ಆಗುತ್ತಿಲ್ಲ. ಅವರಿಗೆ ಸದಾ ಒಳ್ಳೆಯದಾಗಲಿ. ತಾಯಿ-ಮಗಳಿಗೆ ದೇವರ ಕೃಪೆ ಇರಲಿ. ಅಪ್ಪನಾಗಿ ಹೊಸ ಜವಾಬ್ದಾರಿ ನಿಭಾಯಿಸುತ್ತಿರುವ ಆರ್ಯಾಗೆ ಆಲ್​ ದಿ ಬೆಸ್ಟ್​’ ಎಂದು ವಿಶಾಲ್​ ಟ್ವೀಟ್​ ಮಾಡಿದ್ದಾರೆ.

2015ರಲ್ಲಿ ತೆಲುಗಿನ ‘ಅಖಿಲ್’ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ನೀಡಿದ ಸಾಯೆಶಾ ಅವರು ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಜೊತೆ ‘ಯುವರತ್ನ’ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಅವರು ಸ್ಯಾಂಡಲ್​ವುಡ್​ಗೂ ಕಾಲಿಟ್ಟರು. ಈ ಸುಂದರಿಗೆ ಈಗಿನ್ನೂ 23ರ ಪ್ರಾಯ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡು, ಕೇವಲ 21ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅಂದಹಾಗೆ, ಅವರ ಪತಿ ಆರ್ಯ ವಯಸ್ಸು 40.

ಆರ್ಯ ನಟಿಸಿರುವ ‘ಸರ್ಪಟ್ಟ ಪರಂಬರೈ’ ಚಿತ್ರ ಓಟಿಟಿಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದಕ್ಕೂ ಕೂಡ ಅವರಿಗೆ ಎಲ್ಲರಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ. ಸಿನಿಮಾದ ಯಶಸ್ಸು ಮತ್ತು ಮಗುವಿನ ಜನನದಿಂದಾಗಿ ಆರ್ಯಗೆ ಈಗ ಡಬಲ್​ ಸಂಭ್ರಮ.

ಇದನ್ನೂ ಓದಿ:

23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ

Girl Baby ಹೆಣ್ಣು ಮಗು ಹುಟ್ಟಿದ್ದಕ್ಕೆ ಕುಟುಂಬದವರಿಂದ ತಾಯಿಗೆ ಅದ್ಧೂರಿ ಸ್ವಾಗತ.. ನೆರೆಹೊರೆಯವರಿಗೆಲ್ಲ ಸಿಹಿ ಹಂಚಿ ಸಂಭ್ರಮ

Click on your DTH Provider to Add TV9 Kannada