ಮಗು ಜನಿಸಿದ ನಂತರ ಹೇಗಿದ್ದಾರೆ ‘ಯುವರತ್ನ’ ನಟಿ ಸಾಯೆಶಾ? ಇಲ್ಲಿದೆ ಲೇಟೆಸ್ಟ್​ ಫೋಟೋ

ನಿರ್ದೇಶಕ ಅಟ್ಲೀ ಮಂಗಳವಾರ (ಸೆಪ್ಟೆಂಬರ್ 21) 35ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಸೆಲೆಬ್ರಿಟಿಗಳಿಗೆ ಆಹ್ವಾನ ಇತ್ತು. ಅದೇ ರೀತಿ ಆರ್ಯ ಹಾಗೂ ಸಾಯೆಶಾ ಕೂಡ ಈ ಸೆಲಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ.

ಮಗು ಜನಿಸಿದ ನಂತರ ಹೇಗಿದ್ದಾರೆ ‘ಯುವರತ್ನ’ ನಟಿ ಸಾಯೆಶಾ? ಇಲ್ಲಿದೆ ಲೇಟೆಸ್ಟ್​ ಫೋಟೋ
ಮಗು ಜನಿಸಿದ ನಂತರ ಹೇಗಿದ್ದಾರೆ ‘ಯುವರತ್ನ’ ನಟಿ ಸಾಯೆಶಾ? ಇಲ್ಲಿದೆ ಲೇಟೆಸ್ಟ್​ ಫೋಟೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 22, 2021 | 8:08 PM

ನಟಿ ಸಾಯೆಶಾ ಹಾಗೂ ಆರ್ಯ ದಂಪತಿ ಇತ್ತೀಚೆಗೆ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದರು. ಹೆಣ್ಣು ಮಗುವಿಗೆ ತಂದೆ ಆಗಿರುವ ಬಗ್ಗೆ ಆರ್ಯ ಘೋಷಣೆ ಮಾಡಿಕೊಂಡಿದ್ದರು. ಗರ್ಭಿಣಿ ಆದ ನಂತರದಲ್ಲಿ ಸಾಯೆಶಾ ಅಭಿಮಾನಿಗಳ ಕಣ್ಣಿಗೆ ಬಿದ್ದಿಲ್ಲ. ಮಗು ಜನಿಸಿದ ನಂತರ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಸಖತ್​ ಖುಷಿ ಆಗಿದ್ದಾರೆ.

ಗರ್ಭಿಣಿ ಆದ ನಂತರ ದೇಹ ಸ್ವಲ್ಪ ಆಕಾರ ಕಳೆದುಕೊಳ್ಳುತ್ತದೆ. ಮಗು ಜನಿಸಿದ ನಂತರವಂತೂ ದೇಹ ಮೊದಲಿನ ಸ್ಥಿತಿಗೆ ಮರಳೋಕೆ ಸ್ವಲ್ಪ ಸಮಯಬೇಕು. ಅನೇಕ ಹೀರೋಯಿನ್​ಗಳು ಮಗು ಜನಿಸಿದ ಕೆಲ ಸಮಯದ ನಂತರ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಹೀಗಾಗಿ, ಸಾಯೆಶಾ ಹೇಗಾಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.

ನಿರ್ದೇಶಕ ಅಟ್ಲೀ ಮಂಗಳವಾರ (ಸೆಪ್ಟೆಂಬರ್ 21) 35ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಸೆಲೆಬ್ರಿಟಿಗಳಿಗೆ ಆಹ್ವಾನ ಇತ್ತು. ಅದೇ ರೀತಿ ಆರ್ಯ ಹಾಗೂ ಸಾಯೆಶಾ ಕೂಡ ಈ ಸೆಲಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಫೋಟೋ ಪೋಸ್ಟ್ ಮಾಡಿರುವ ಆರ್ಯ, ‘ಹುಟ್ಟುಹಬ್ಬದ ಶುಭಾಶಯಗಳು ಅಟ್ಲೀ. ನಿಮಗೆ ಶುಭವಾಗಲಿ. ನನ್ನ ಜೀವನದ ಅತ್ಯಂತ ಸ್ಮರಣೀಯ ರಾತ್ರಿಗೆ ತುಂಬಾ ಧನ್ಯವಾದಗಳು. ಲವ್ ಯು ಬೇಬಿ’ ಎಂದು ಬರೆದುಕೊಂಡಿದ್ದಾರೆ.

ಈ ಪಾರ್ಟಿಯ ಫೋಟೋಗಳು ವೈರಲ್​ ಆಗಿವೆ. ಸಾಯೆಶಾ ಪತಿಯ ಜತೆ ನಿಂತಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶೀಘ್ರವೇ ಅವರು ನಟನೆಗೆ ಮರಳಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.

ಸಾಯೆಶಾಗೆ ಮಗು ಜನಿಸಿದ ನಂತರದಲ್ಲಿ ಆರ್ಯ ವಿರುದ್ಧ ಆರೋಪವೊಂದು ಕೇಳಿ ಬಂದಿತ್ತು. ಜರ್ಮನಿಯಲ್ಲಿ ನೆಲೆಸಿರುವ ಶ್ರೀಲಂಕಾ ಮೂಲದ ತಮಿಳು ಮಹಿಳೆಗೆ ನಟ ಆರ್ಯ ಅವರು ಮೋಸ ಮಾಡಿದ್ದಾರೆ ಎನ್ನಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆ ಮೂಲಕ ನಟ ಆರ್ಯ ನಿಟ್ಟುಸಿರು ಬಿಟ್ಟಿದ್ದರು.

ಇದನ್ನೂ ಓದಿ: ಸದ್ದಿಲ್ಲದೆ ಆರಂಭವಾಯ್ತು ಅಟ್ಲೀ-ಶಾರುಖ್​ ಸಿನಿಮಾ ಶೂಟಿಂಗ್; ಲೀಕ್​ ಆಯ್ತು ಸೆಟ್​ ಫೋಟೋ

ಶಾರುಖ್​ ಖಾನ್​-ಅಟ್ಲೀ ಸಿನಿಮಾಗೆ ಜನಪ್ರಿಯ ವೆಬ್​ ಸೀರಿಸ್ ‘ಮನಿ ಹೈಸ್ಟ್’​ ಕಥೆ?