KBC 13: ಕನ್ನಡದಲ್ಲಿ ಮಿಂಚಿದ್ದ ಖ್ಯಾತ ನಟ ಕೆಬಿಸಿಯ ಈ ವಾರದ ಅತಿಥಿ; ಆ ತಾರೆ ಯಾರು? ಇಲ್ಲಿದೆ ಮಾಹಿತಿ

TV9 Digital Desk

| Edited By: shivaprasad.hs

Updated on: Sep 23, 2021 | 12:50 PM

Amitabh Bachchan: ಸ್ಯಾಂಡಲ್​ವುಡ್​​ನಲ್ಲಿ ಮಿಂಚಿದ್ದ ಬಾಲಿವುಡ್​ನ ಖ್ಯಾತ ನಟ ಕೆಬಿಸಿಯ ಈ ವಾರದ ಸೆಲೆಬ್ರಿಟಿ ಶೋಗೆ ಅತಿಥಿಯಾಗಿದ್ದಾರೆ.

KBC 13: ಕನ್ನಡದಲ್ಲಿ ಮಿಂಚಿದ್ದ ಖ್ಯಾತ ನಟ ಕೆಬಿಸಿಯ ಈ ವಾರದ ಅತಿಥಿ; ಆ ತಾರೆ ಯಾರು? ಇಲ್ಲಿದೆ ಮಾಹಿತಿ
ಅಮಿತಾಭ್ ಬಚ್ಚನ್

Follow us on

ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಹೆಸರಿನಲ್ಲಿ ಸೆಲೆಬ್ರಿಟಿಗಳು ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಾರಿಟಿಯ ಉದ್ದೇಶದಿಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದ ಹಣವನ್ನು ನಿರ್ದಿಷ್ಟ ಉದ್ದೇಶಗಳಿಗೆ ದಾನ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮೊದಲ ವಾರ ಖ್ಯಾತ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ನಂತರ ಬಾಲಿವುಡ್​ನ ಖ್ಯಾತ ನಿರ್ದೇಶಕಿ ಫರಾ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಕಳೆದ ವಾರ ಟೊಕಿಯೊ ಒಲಂಪಿಕ್ಸ್​​ನಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದುಕೊಟ್ಟಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಹಾಕಿ ಆಟಗಾರ ಪಿ.ಶ್ರೀಜೇಶ್ ಭಾಗವಹಿಸಿದ್ದರು. ಪ್ರತೀ ವಾರದ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದಿದ್ದು ವೀಕ್ಷಕರಿಗೆ ಇಷ್ಟವಾಗಿದ್ದವು.

ಆದ್ದರಿಂದಲೇ ಈ ವಾರ ಯಾವ ತಾರೆಯರು ಹಾಟ್​ ಸೀಟ್​ನಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬುದು ವೀಕ್ಷಕರಿಗೆ ಕುತೂಹಲವಿತ್ತು. ಇದೀಗ ಅದಕ್ಕೆ ಉತ್ತರ ಲಭ್ಯವಾಗಿದೆ. ಸ್ಯಾಂಡಲ್​ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಹಿರಿಯ ನಟ ಜಾಕಿ ಶ್ರಾಫ್ ಕೆಬಿಸಿ 13ರ ಈ ವಾರದ ಅತಿಥಿಗಳಾಗಿದ್ದಾರೆ. ಚಾನಲ್ ಈ ಕುರಿತು ಪ್ರೋಮೋ ಬಿಡುಗಡೆ ಮಾಡಿದ್ದು, ವೀಕ್ಷಕರ ಮನ ಸೆಳೆದಿದೆ.

Suniel Shetty and Jackie Shroff in KBC 13 with Amitabh

ತಮ್ಮ ಫಿಟ್​ನೆಸ್ ಕೌಶಲಗಳನ್ನು ಪ್ರದರ್ಶನ ಮಾಡುತ್ತಿರುವ ಜಾಕಿ ಶ್ರಾಫ್, ಸುನೀಲ್ ಶೆಟ್ಟಿ

ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನೀಲ್ ಶೆಟ್ಟಿ, ಫಿಟ್​ನೆಸ್ ಪ್ರಿಯರು. 60 ವರ್ಷವಾದರೂ ಕೂಡ ಯುವಕರೂ ನಾಚುವಂತೆ ತಮ್ಮ ದೇಹವನ್ನು ಕಾಪಿಟ್ಟುಕೊಂಡಿರುವ ಅವರು, ತಮ್ಮ ಖಡಕ್ ಪಾತ್ರಗಳಿಂದ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಜಾಕಿ ಶ್ರಾಫ್ ಕೂಡ ಫಿಟ್​ನೆಸ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಚಾನಲ್ ಬಿಡುಗಡೆ ಮಾಡಿರುವ ನೂತನ ಪ್ರೋಮೋದಲ್ಲಿ ಈರ್ವರೂ ನಟರು ಅಮಿತಾಭ್​ಗೆ ತಮ್ಮ ತೋಳುಗಳನ್ನು ತೋರಿಸಿ ಶಕ್ತಿ ಪ್ರದರ್ಶನ ಮಾಡಿದ್ದು, ಆ ಸಂದರ್ಭದ ದೃಶ್ಯಗಳು ಸಖತ್ ಮಜವಾಗಿ ಮೂಡಿಬಂದಿದೆ. ಇದೇ ಸಂದರ್ಭದಲ್ಲಿ ಸುನೀಲ್ ಶೆಟ್ಟಿ ತಾವು ವಾರಕ್ಕೆ ಆರು ದಿನ ಜಿಮ್​ಗೆ ತೆರಳುತ್ತೇನೆ ಎಂದು ತಮ್ಮ ಫಿಟ್​ನೆಸ್ ರಹಸ್ಯವನ್ನು ಬಿಟ್ಟುಕೊಟ್ಟಿದ್ದಾರೆ.

ಪ್ರತಿ ಶುಕ್ರವಾರ ಕೆಬಿಸಿಯಲ್ಲಿ ವಿಶೇಷ ಅತಿಥಿಗಳು ಭಾಗವಹಿಸುವ ಕಾರ್ಯಕ್ರಮ ಪ್ರಸಾರವಾಗುತ್ತದೆ. ಸೋನಿ ವಾಹಿನಿಯಲ್ಲಿ ರಾತ್ರಿ ಒಂಬತ್ತು ಗಂಟೆಗೆ ಈ ಸಂಚಿಕೆ ಪ್ರಸಾರವಾಗಲಿದ್ದು, ತಾರೆಯರು ತಾವು ಗೆದ್ದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಾರೆ.

ಇದನ್ನೂ ಓದಿ:

ಮದುವೆ ಕಾರ್ಡ್​ ಪ್ರಿಂಟ್​ ಆದ್ಮೇಲೆ ಪ್ರೇಯಸಿ ಕೈಯಲ್ಲಿ ಸಿಕ್ಕಿಬಿದ್ದಿದ್ದ ಸಲ್ಮಾನ್ ಖಾನ್​​; ಮುರಿದು ಬಿದ್ದಿತ್ತು ಶಾದಿ

Sai Pallavi: ‘ಅಂತಹ ಚಿತ್ರಗಳಲ್ಲಿ ನಟಿಸೋಕೆ ನನಗೆ ಭಯ’; ಮುಕ್ತವಾಗಿ ಹೇಳಿಕೊಂಡ ಸಾಯಿ ಪಲ್ಲವಿ

(Suniel Shetty and Jackie Shroff are next guests for KBC 13 special episode hosted by Amitabh Bachchan)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada