ಮದುವೆ ಕಾರ್ಡ್​ ಪ್ರಿಂಟ್​ ಆದ್ಮೇಲೆ ಪ್ರೇಯಸಿ ಕೈಯಲ್ಲಿ ಸಿಕ್ಕಿಬಿದ್ದಿದ್ದ ಸಲ್ಮಾನ್ ಖಾನ್​​; ಮುರಿದು ಬಿದ್ದಿತ್ತು ಶಾದಿ

ಸಲ್ಮಾನ್​ ಖಾನ್​ ಮತ್ತು ಸಂಗೀತಾ ಬಿಜಲಾನಿ ಹಲವು ವರ್ಷಗಳ ಕಾಲ ಡೇಟಿಂಗ್​ ಮಾಡುತ್ತಿದ್ದರು. ಮದುವೆಯ ಆಹ್ವಾನ ಪತ್ರಿಕೆಗಳು ಕೂಡ ಪ್ರಿಂಟ್​ ಆಗಿದ್ದವು! ಆದರೆ ಕೊನೇ ಕ್ಷಣದಲ್ಲಿ ಆ ಮದುವೆ ಕ್ಯಾನ್ಸಲ್​ ಆಯಿತು.

ಮದುವೆ ಕಾರ್ಡ್​ ಪ್ರಿಂಟ್​ ಆದ್ಮೇಲೆ ಪ್ರೇಯಸಿ ಕೈಯಲ್ಲಿ ಸಿಕ್ಕಿಬಿದ್ದಿದ್ದ ಸಲ್ಮಾನ್ ಖಾನ್​​; ಮುರಿದು ಬಿದ್ದಿತ್ತು ಶಾದಿ
ಸಲ್ಮಾನ್ ಖಾನ್​, ಸಂಗೀತಾ ಬಿಜಲಾನಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 23, 2021 | 12:17 PM

ಸಲ್ಮಾನ್​ ಖಾನ್​ ಅವರ ಸಿನಿಮಾಗಳ ಬಗ್ಗೆ ಎಷ್ಟು ಚರ್ಚೆ ಆಗುತ್ತದೆಯೋ ಅದಕ್ಕಿಂತಲೂ ಹೆಚ್ಚು ಚರ್ಚೆ ಆಗುವುದು ಅವರ ಖಾಸಗಿ ಜೀವನದ ವಿಚಾರಗಳು. ಈವರೆಗೂ ಸಲ್ಮಾನ್​ ಖಾನ್​ ಮದುವೆ ಆಗಿಲ್ಲ. ತಮ್ಮನ್ನು ತಾವು ವರ್ಜಿನ್​​ ಎಂದು ಅವರು ಹೇಳಿಕೊಳ್ಳುತ್ತಾರೆ. ಕೆಲವರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ, ನಟಿ ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್​ ಖಾನ್​ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಎಲ್ಲವೂ ಸಿದ್ಧಗೊಂಡಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಮದುವೆ ಮುರಿದುಬಿತ್ತು! ಹಾಗಂತ ಇದು ಯಾವುದೂ ಗಾಸಿಪ್​ ಅಲ್ಲವೇ ಅಲ್ಲ. ಸ್ವತಃ ಸಲ್ಮಾನ್​ ಖಾನ್​ ಅವರು ಬಾಯಿಬಿಟ್ಟ ಸತ್ಯಗಳು.

ಸಲ್ಮಾನ್​ ಖಾನ್​ ಮತ್ತು ಸಂಗೀತಾ ಬಿಜಲಾನಿ ಹಲವು ವರ್ಷಗಳ ಕಾಲ ಡೇಟಿಂಗ್​ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರು ಇನ್ನೇನು ಮದುವೆ ಮಾಡಿಕೊಳ್ಳಬೇಕು ಎಂಬ ತೀರ್ಮಾನಕ್ಕೂ ಬಂದಿದ್ದರು. ಅಷ್ಟೇ ಅಲ್ಲ, ಅವರ ಮದುವೆಯ ಆಹ್ವಾನ ಪತ್ರಿಕೆಗಳು ಕೂಡ ಪ್ರಿಂಟ್​ ಆಗಿದ್ದವು! ಆದರೆ ಕೊನೇ ಕ್ಷಣದಲ್ಲಿ ಆ ಮದುವೆ ಕ್ಯಾನ್ಸಲ್​ ಆಯಿತು. ಈ ವಿಚಾರದ ಬಗ್ಗೆ ಬಹಳ ವರ್ಷಗಳ ಹಿಂದೆಯೇ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಸಲ್ಮಾನ್​ ಖಾನ್​ ಹೇಳಿಕೊಂಡಿದ್ದರು.

‘ಹಾಗೆ ಮದುವೆ ಕ್ಯಾನ್ಸಲ್​ ಆಗಿದ್ದಕ್ಕೆ ಕಾರಣ ಏನು? ನೀವು ಅವರ ಕೈಯಲ್ಲಿ ಸಿಕ್ಕಿ ಬಿದ್ರಾ’ ಎಂದು ಕರಣ್​ ಪ್ರಶ್ನಿಸಿದ್ದರು. ‘ಒಂಥರಾ ಹಾಗೆಯೇ. ನಾನು ಮೂರ್ಖ. ಸಿಕ್ಕಿ ಬಿದ್ದೆ’ ಎಂದು ಸಲ್ಮಾನ್​ ಉತ್ತರಿಸಿದ್ದರು. ಆದರೆ ಆ ಘಟನೆ ಯಾವುದು? ಯಾರು ಜೊತೆ ಇರುವಾಗ ತಾವು ಸಿಕ್ಕಿಬಿದ್ದಿದ್ದು ಎಂಬಿತ್ಯಾದಿ ವಿವರಗಳನ್ನು ಸಲ್ಲು ಹಂಚಿಕೊಳ್ಳಲಿಲ್ಲ.

ಆ ಬಳಿಕ ಅನೇಕ ನಟಿಯರ ಜೊತೆ ಸಲ್ಮಾನ್​ ಖಾನ್​ ಹೆಸರು ತಳುಕು ಹಾಕಿಕೊಂಡಿತು. ಐಶ್ವರ್ಯಾ ರೈ, ಯುಲಿಯಾ ವಂಟೂರ್​, ಕತ್ರಿನಾ ಕೈಫ್​ ಮುಂತಾದ ಬೆಡಗಿಯರ ಜೊತೆ ಸಲ್ಲು ಡೇಟಿಂಗ್​ ಮಾಡಿದ್ದರು. ಆದರೆ ಯಾರೂ ಕೂಡ ಬಾಳಸಂಗಾತಿ ಆಗಲೇ ಇಲ್ಲ. ‘ಎಲ್ಲರೂ ನನ್ನನ್ನು ಒಳ್ಳೆಯ ಬಾಯ್​ ಫ್ರೆಂಡ್​ ಎಂದು ಭಾವಿಸುತ್ತಾರೆ ನಿಜ. ಆದರೆ ಜೀವನ ಪರ್ಯಂತ ನನ್ನನ್ನು ಸಹಿಸಿಕೊಳ್ಳುವುದು ಕಷ್ಟ ಅಂತ ಅಂದುಕೊಳ್ಳುತ್ತಾರೆ’ ಎಂದು ಸಲ್ಲು ಹೇಳಿದ್ದರು. ಸದ್ಯಕ್ಕಂತೂ ಮದುವೆ ಆಗುವ ಬಗ್ಗೆ ಅವರು ಯಾವುದೇ ಆಸಕ್ತಿ ತೋರಿಸುತ್ತಿಲ್ಲ.

ಇದನ್ನೂ ಓದಿ:

ಸಲ್ಮಾನ್ ಖಾನ್​ನನ್ನು ವಿಮಾನ ನಿಲ್ದಾಣದಲ್ಲಿ ತಡೆದು ವೃತ್ತಿಪರತೆ ಮೆರೆದ ಅಧಿಕಾರಿಯನ್ನು ಪುರುಸ್ಕರಿಸಿದ ಸಿಐಎಸ್ಎಫ್

‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ