Kiara Advani: ‘ಕಿಯಾರಾ ಜೊತೆ ಬಲವಂತವಾಗಿ ಕಿಸ್​ ಮಾಡಬೇಕಾಯ್ತು’: ಎಲ್ಲವನ್ನೂ ಒಪ್ಪಿಕೊಂಡ ಶೇರ್​ಷಾ ಹೀರೋ ಸಿದ್ದಾರ್ಥ್​

Kiara Advani: ರಿಯಲ್​ ಲೈಫ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಸಾಕ್ಷಿ ನೀಡುವ ರೀತಿಯಲ್ಲೇ ಅವರಿಬ್ಬರು ನಡೆದುಕೊಳ್ಳುತ್ತಿದ್ದಾರೆ.

Kiara Advani: ‘ಕಿಯಾರಾ ಜೊತೆ ಬಲವಂತವಾಗಿ ಕಿಸ್​ ಮಾಡಬೇಕಾಯ್ತು’: ಎಲ್ಲವನ್ನೂ ಒಪ್ಪಿಕೊಂಡ ಶೇರ್​ಷಾ ಹೀರೋ ಸಿದ್ದಾರ್ಥ್​
ಕಿಯಾರಾ ಅಡ್ವಾಣಿ, ಸಿದ್ದಾರ್ಥ್ ಮಲ್ಹೋತ್ರಾ
Follow us
TV9 Web
| Updated By: Digi Tech Desk

Updated on:Sep 23, 2021 | 12:17 PM

ನಟ ಸಿದ್ದಾರ್ಥ್​ ಮಲ್ಹೋತ್ರಾ ಅವರು ಈಗ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಶೇರ್​ಷಾ’ ಸಿನಿಮಾ ಇತ್ತೀಚೆಗೆ ಅಮೇಜಾನ್​ ಪ್ರೈಂ ಮೂಲಕ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ. ಹುತಾತ್ಮ ಯೋಧ ವಿಕ್ರಮ್​ ಬಾತ್ರಾ ಅವರ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ವಿಕ್ರಮ್​ ಬಾತ್ರಾ ಅವರ ಪಾತ್ರಕ್ಕೆ ಸಿದ್ದಾರ್ಥ್​ ಬಣ್ಣ ಹಚ್ಚಿದ್ದು, ಅವರ ಪ್ರೇಯಸಿ ಪಾತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ಇಬ್ಬರ ನಡುವಿನ ಕಿಸ್​ ದೃಶ್ಯ ಕೂಡ ಪ್ರೇಕ್ಷಕರ ಕಣ್ಣು ಕುಕ್ಕಿದೆ. ಈ ಬಗ್ಗೆ ‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಪ್ರಶ್ನೆ ಎದುರಾಗಿದೆ. ಸಿನಿಮಾ ಪ್ರಚಾರದ ಸಲುವಾಗಿ ‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಭಾಗವಹಿಸಿದ್ದರು. ಆಗ ಅವರಿಬ್ಬರಿಗೂ ಕಪಿಲ್​ ಒಂದು ಪ್ರಶ್ನೆ ಕೇಳಿದರು. ‘ಈ ಸಿನಿಮಾದಲ್ಲಿ ಬರುವ ಕಿಸ್​ ದೃಶ್ಯ ಮೊದಲೇ ಸ್ಕ್ರಿಪ್ಟ್​ನಲ್ಲಿ ಇತ್ತಾ ಅಥವಾ ನೀವೇ ನಿಮ್ಮ ಕ್ರಿಯೇಟಿವಿ ತೋರಿಸಿ ಆ ದೃಶ್ಯವನ್ನು ಸೇರಿಸಿದ್ರಾ’ ಎಂದು ಅವರು ಕೇಳಿದರು. ಅದಕ್ಕೆ ಸಿದ್ದಾರ್ಥ್​ ನೀಡಿದ ಉತ್ತರ ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಿತ್ತು.

‘ವಿಕ್ರಮ್​ ಬಾತ್ರಾ ಅವರ ಜೀವನವನ್ನು ಶೇ.90ರಷ್ಟು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಕಿಸ್ಸಿಂಗ್​ ದೃಶ್ಯಗಳು ಕೂಡ ನಮ್ಮ ಪಾತ್ರದ ಭಾಗವಾಗಿದ್ದವು. ಆ ದೃಶ್ಯದಲ್ಲಿ ನಟಿಸುವಾಗ ತುಂಬ ಕಷ್ಟ ಆಯಿತು. ಬಲವಂತದಿಂದ ಅದನ್ನೆಲ್ಲ ಮಾಡಬೇಕಾಯಿತು’ ಎಂದು ಸಿದ್ದಾರ್ಥ್​ ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ರಿಯಲ್​ ಲೈಫ್​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಸಾಕ್ಷಿ ನೀಡುವ ರೀತಿಯಲ್ಲೇ ಅವರಿಬ್ಬರು ನಡೆದುಕೊಳ್ಳುತ್ತಿದ್ದಾರೆ. ಹೊಸ ವರ್ಷ ಆಚರಿಸಲು ಸಿದ್ದಾರ್ಥ್​ ಮತ್ತು ಕಿಯಾರಾ ಮಾಲ್ಡೀವ್ಸ್​ಗೆ ತೆರಳಿದ್ದರು. ಹಾಗಿದ್ದರೂ ಕೂಡ ಈ ಜೋಡಿ ತಮ್ಮ ಪ್ರೀತಿಯ ವಿಚಾರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈ ಹಿಂದೆ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಭಾಗವಹಿಸಿದ್ದಾಗಲೂ ಸಿದ್ದಾರ್ಥ್​ಗೆ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆಗಲೂ ಅವರು ಡೇಟಿಂಗ್​ ವದಂತಿಯನ್ನು ತಳ್ಳಿ ಹಾಕಿದ್ದರು. ಸದ್ಯ ಅವರು ‘ಮಿಷನ್​ ಮಜ್ನು’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್​ ಮುಗಿದಿದೆ.

ಇದನ್ನೂ ಓದಿ:

Kiara Advani: ಮಾದಕ ನೋಟದಲ್ಲಿ ಮಿಂಚುತ್ತಿರುವ ಕಿಯಾರಾ; ಪಡ್ಡೆಹುಡುಗರ ನಿದ್ದೆಗೆಡಿಸುವ ಚಿತ್ರಗಳು ಇಲ್ಲಿವೆ

ಸಿದ್ಧಾರ್ಥ್​ ಮಲ್ಹೋತ್ರಾ ಜತೆ ಲವ್ವಿಡವ್ವಿ? ಎಲ್ಲವನ್ನೂ ಹೇಳಿಕೊಂಡ ನಟಿ ಕಿಯಾರಾ

Published On - 8:37 am, Thu, 23 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ