ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​

ಈವರೆಗೂ ಶಾರುಖ್​ ಖಾನ್​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆ ಪ್ಲ್ಯಾನ್​ ಮಾಡಿದೆ.

ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​
ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​


ಶಾರುಖ್​ ಖಾನ್​ ಇತ್ತೀಚೆಗೆ ನಟಿಸಿದ ಸಾಕಷ್ಟು ಸಿನಿಮಾಗಳು ಪ್ಲಾಪ್​ ಆಗಿವೆ. ಹೀಗಾಗಿ, ನಟನೆಯಿಂದ ಅವರು ಬ್ರೇಕ್​ ತೆಗೆದುಕೊಂಡಿದ್ದರು. 2018ರ ಈಚೆಗೆ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಆದರೆ, ಶಾರುಖ್​ ಖಾನ್​ ಬೇಡಿಕೆ ಮಾತ್ರ ಕೊಂಚವೂ ಕುಗ್ಗಿಲ್ಲ. ಅವರು ನಟಿಸುತ್ತಾರೆ ಎಂದರೆ 100 ಕೋಟಿ ಕೊಟ್ಟು ಕಿಂಗ್​ ಖಾನ್​ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಈಗಲೂ ರೆಡಿ ಇದ್ದಾರೆ. ಈ ಮಧ್ಯೆ ಶಾರುಖ್​ ಮನೆ ಎದುರು ಅಭಿಮಾನಿಗಳು ನೆರೆದಿದ್ದಾರೆ. ಆಗ ಶಾರುಖ್​ ಬಾಲ್ಕನಿಯಿಂದ ಮೊಬೈಲ್​ ಎಸೆದಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಹಾಗಾದರೆ, ಶಾರುಖ್​ ಮೊಬೈಲ್​ ಎಸೆದಿದ್ದೇಕೆ? ಇದಕ್ಕೆ ಉತ್ತರ ಡಿಸ್ನಿ + ಹಾಟ್​ಸ್ಟಾರ್​ ಜಾಹೀರಾತು. ಶಾರುಖ್ ಖಾನ್​ ಬಾಲ್ಕನಿಯಲ್ಲಿ ನಿಂತು ಅವರ ಪಿಎ (ಜಾಹೀರಾತಿನಲ್ಲಿ ರಾಜೇಶ್​ ಜೈಸ್ ಪಿಎ ಪಾತ್ರ ಮಾಡಿದ್ದಾರೆ​) ಜತೆ ಮಾತನಾಡುತ್ತಿರುವುದು ವಿಡಿಯೋದಲ್ಲಿದೆ. ಈ ವೇಳೆ ಡಿಸ್ನಿಯಿಂದ ಕರೆ ಬಂತೇ ಎಂದು ಶಾರುಖ್​ ಪಿಎಯನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಇಲ್ಲ ಎನ್ನುವ ಉತ್ತರ ಬರುತ್ತದೆ. ಸಿಟ್ಟಾಗುವ ಶಾರುಖ್​ ಮೊಬೈಲ್​ ಎಸೆಯುತ್ತಾರೆ. ಮತ್ತೊಂದು ಜಾಹೀರಾತಿನಲ್ಲಿ ‘ನಿಮ್ಮೊಬ್ಬರನ್ನು ಬಿಟ್ಟು ಉಳಿದೆಲ್ಲ ಸ್ಟಾರ್​ಗಳ ಸಿನಿಮಾ ಹಾಟ್​ಸ್ಟಾರ್​ನಲ್ಲಿದೆ’ ಎನ್ನುತ್ತಾರೆ ಶಾರುಖ್​ ಪಿಎ. ಈ ವಿಡಿಯೋ ಸಾಕಷ್ಟು ಕುತೂಹಲ ಮೂಡಿಸಿದೆ.

ಈವರೆಗೂ ಶಾರುಖ್​ ಖಾನ್​ ಓಟಿಟಿ ಪ್ರವೇಶಿಸಿಲ್ಲ. ಇತ್ತ ಅವರ ಸಿನಿಮಾಗಳು ಕೂಡ ಬಾಕ್ಸ್​ಆಫೀಸ್​ನಲ್ಲಿ ಗೆಲ್ಲುತ್ತಿಲ್ಲ. ಹಾಗಾಗಿ ಅವರನ್ನು ಓಟಿಟಿಗೆ ಕರೆದುಕೊಂಡು ಬರಲು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಸಂಸ್ಥೆ ಪ್ಲ್ಯಾನ್​ ಮಾಡಿದೆ. ಅದಕ್ಕೆ ಶಾರುಖ್​ ಕೂಡ ಒಪ್ಪಿದ್ದು, ಜಾಹೀರಾತುಗಳ ಮೂಲಕ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಇತ್ತೀಚೆಗೆ ಸಲ್ಮಾನ್​ ಖಾನ್​ ಕೂಡ ಕೈ ಜೋಡಿಸಿದ್ದರು. ಜಾಹೀರಾತನ್ನು ಶೇರ್​ ಮಾಡಿಕೊಂಡಿರುವ ಅವರು, ‘ಶಾರುಖ್​ ಖಾನ್​ಗೆ ಸ್ವಾಗತ ಮಾಡುವುದಿಲ್ಲವೇ?’ ಎಂದು ಒಂದೇ ಒಂದು ವಾಕ್ಯ ಕ್ಯಾಪ್ಷನ್​ ನೀಡಿದ್ದರು.

ಈ ಜಾಹೀರಾತುಗಳನ್ನು ನೋಡಿದ ಅಭಿಮಾನಿಗಳಿಗೂ ಸಾಕಾಗಿದೆ. ದಯವಿಟ್ಟು ಸಿನಿಮಾ ಘೋಷಣೆ ಮಾಡಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಶಾರುಖ್​ ಸದ್ಯ ‘ಪಠಾಣ್​’ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಶೂಟಿಂಗ್​ ಆರಂಭಗೊಂಡಿದೆ. ಆದರೆ, ಸಿನಿಮಾ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮಾಡಿದ 30 ಸೆಕೆಂಡ್​ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ 

ಶಾರುಖ್ ಖಾನ್ ಹಂಚಿಕೊಂಡ ಗಣೇಶ ಚತುರ್ಥಿಯ ಕುರಿತ ಪೋಸ್ಟ್​ಗೆ ಕಿಡಿ ಕಾರಿದ ಕೆಲ ನೆಟ್ಟಿಗರು; ಕಾರಣವೇನು?

Read Full Article

Click on your DTH Provider to Add TV9 Kannada