ಶಾರುಖ್ ಖಾನ್ ಹಂಚಿಕೊಂಡ ಗಣೇಶ ಚತುರ್ಥಿಯ ಕುರಿತ ಪೋಸ್ಟ್​ಗೆ ಕಿಡಿ ಕಾರಿದ ಕೆಲ ನೆಟ್ಟಿಗರು; ಕಾರಣವೇನು?

TV9 Digital Desk

| Edited By: shivaprasad.hs

Updated on: Sep 21, 2021 | 11:27 AM

Shah Rukh Khan: ಬಾಲಿವುಡ್ ನಟ ಶಾರುಖ್ ಖಾನ್ ಗಣೇಶನ ಚತುರ್ಥಿಯ ಸಂದರ್ಭದಲ್ಲಿ ಹಂಚಿಕೊಂಡ ಟ್ವೀಟ್​ಗೆ ದ್ವೇಷ ಪೂರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾರುಖ್ ಖಾನ್ ಹಂಚಿಕೊಂಡ ಗಣೇಶ ಚತುರ್ಥಿಯ ಕುರಿತ ಪೋಸ್ಟ್​ಗೆ ಕಿಡಿ ಕಾರಿದ ಕೆಲ ನೆಟ್ಟಿಗರು; ಕಾರಣವೇನು?
ಶಾರುಖ್ ಖಾನ್ ಮತ್ತು ಅವರು ಹಂಚಿಕೊಂಡ ಗಣೇಶನ ವಿಗ್ರಹದ ಚಿತ್ರ

Follow us on

ಸೆಪ್ಟೆಂಬರ್ 19ರ ಭಾನುವಾರ ಮುಂಬೈನಲ್ಲಿ ಗಣಪತಿ ಹಬ್ಬದ ಕೊನೆಯ ದಿನ. ಆದ್ದರಿಂದಲೇ ಹಲವು ಬಾಲಿವುಡ್ ತಾರೆಯರು ಗಣಪತಿಯ ಮೂರ್ತಿಯ ಚಿತ್ರಗಳನ್ನು ಹಾಕಿ ಶುಭ ಕೋರಿದ್ದರು. ಇದೇ ಮಾದರಿಯಲ್ಲಿ ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಕೂಡ ಟ್ವಿಟರ್​ನಲ್ಲಿ ಶುಭ ಕೋರಿದ್ದರು. ಆದರೆ ಅದು ಅವರ ಹಲವು ಅಭಿಮಾನಿಗಳಿಗೆ ಸರಿ ಕಂಡಿಲ್ಲ. ಆದ್ದರಿಂದಲೇ ಶಾರುಖ್​ರನ್ನು ಕಾಲೆಳೆಯಲು, ನಿಂದಿಸಲು ಪ್ರಾರಂಭಿಸಿದ್ದಾರೆ.

ಶಾರುಖ್ ಹಂಚಿಕೊಂಡ ಟ್ವೀಟ್ ಇದು:

ಈ ಹಿಂದೆ ಶಾರುಖ್ 2005ರಲ್ಲಿ ಅವರ ಕುರಿತು ತಯಾರಾಗಿದ್ದ ‘ಇನ್ನರ್ ಆಂಡ್ ಔಟರ್ ವರ್ಲ್ಡ್ ಆಫ್ ಶಾರುಖ್’ ಡಾಕ್ಯುಮೆಂಟರಿಯಲ್ಲಿ ಅವರ ಮನೆಯಲ್ಲಿ ಆಚರಿಸಲಾಗುವ ಹಿಂದೂ ಮತ್ತು ಇಸ್ಲಾಂ ಧರ್ಮದ ಆಚರಣೆಗಳ ಕುರಿತು ತಿಳಿಸಿದ್ದರು. ತಮ್ಮ ಮಕ್ಕಳು ಗಾಯತ್ರಿ ಮಂತ್ರ ಮತ್ತು ನಮಾಜ್​ನಲ್ಲಿ ಒಂದೇ ಶ್ರದ್ಧೆಯಿಂದ ಭಾಗವಹಿಸುತ್ತಾರೆ. ತಮ್ಮದು ಜಾತ್ಯಾತೀತ ಕುಟುಂಬ ಅಂದಿದ್ದರು. ಆದರೆ ಅವರ ಕೆಲವು ಅಭಿಮಾನಿಗಳು ಇದನ್ನು ಇಷ್ಟೇ ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧರಾಗಿಲ್ಲ. ಆದ್ದರಿಂದಲೇ ಶಾರುಖ್ ವಿರುದ್ಧ ದ್ವೇಷ ಪೂರಿತ ಟ್ವೀಟ್ ಮಾಡುತ್ತಿದ್ದಾರೆ.

ಶಾರುಖ್ ಅವರನ್ನು ಟೀಕಿಸಿದ ಕೆಲವು ಟ್ವೀಟ್​ಗಳು ಇಲ್ಲಿವೆ: 

ಶಾರುಖ್ ಪರ ನಿಂತ  ಅಭಿಮಾನಿಗಳು:

ಹಲವು ಅಭಿಮಾನಿಗಳು ಶಾರುಖ್ ಖಾನ್ ಪರ ನಿಂತಿದ್ದು, ದ್ವೇಷಪೂರಿತ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಿದ್ದಾರೆ. ಶಾರುಖ್ ಖಾನ್ ಜಾತ್ಯಾತೀತರು ಎಂದು ವಿಡಿಯೊ, ಚಿತ್ರಗಳ ಮುಖಾಂತರ ಅಭಿಮಾನಿಗಳು ಸಾಬೀತು ಪಡಿಸುತ್ತಿದ್ದಾರೆ. ಅಂತಹ ಕೆಲವು ಟ್ವೀಟ್​ಗಳು ಇಲ್ಲಿವೆ.

ಇತ್ತೀಚೆಗಷ್ಟೇ ‘ಬಾಯ್ಕಅಟ್ ಶಾರುಖ್ ಖಾನ್’ ಟ್ವಿಟರ್​ನಲ್ಲಿ ಟ್ರೆಂಡ್ ಆಗಿತ್ತು:

ಯಾಕೋ, ಶಾರುಖ್ ಖಾನ್ ವಿರುದ್ಧ ನೆಟ್ಟಿಗರು ಸಮರ ಸಾರಿರುವಂತೆ ಅಭಿಮಾನಿಗಳಿಗೆ ಭಾಸವಾಗುತ್ತಿದೆ. ಕಾರಣ, ಇತ್ತೀಚೆಗಷ್ಟೇ ‘ಬಾಯ್ಕಾಟ್ ಶಾರುಖ್ ಖಾನ್’ ಎಂಬ ಹ್ಯಾಷ್ ಟ್ಯಾಗ್​ಅನ್ನು ಟ್ವಿಟರ್​ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಶಾರುಖ್ ಅವರ ಪಾಕ್ ಪರ ಹೇಳಿಕೆಗಳು, ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿದ್ದ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇದಕ್ಕೆ ಪ್ರತಿಯಾಗಿ ಅಭಿಮಾನಿಗಳು ‘ವಿ ಲವ್ ಶಾರುಖ್’, ‘ಶಾರುಖ್ ಪ್ರೈಡ್ ಆಫ್ ಇಂಡಿಯಾ’ ಮೊದಲಾದ ಹ್ಯಾಶ್ ಟ್ಯಾಗ್​ಗಳನ್ನು ಟ್ರೆಂಡ್ ಮಾಡಿ, ಶಾರುಖ್ ಪರ ವಹಿಸಿದ್ದರು.

ಇದನ್ನೂ ಓದಿ:

Shah Rukh Khan: ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?

(Shah Rukh Khan receives hate full replies for his Ganesh Chathurthi Tweet and fans supports him)

ತಾಜಾ ಸುದ್ದಿ

Related Stories

Click on your DTH Provider to Add TV9 Kannada