‘ನಿಮ್ಮ ದೇಹ ಗಂಡಸರ ರೀತಿ ಇದೆ’; ತಾಪ್ಸಿ ಪನ್ನು ಬಾಡಿ ಬಗ್ಗೆ ನೆಟ್ಟಿಗರ ಕಮೆಂಟ್; ಖುಷಿಯಾದ ನಟಿ
ನಟಿ ತಾಪ್ಸಿ ಪನ್ನು ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆ ಪೈಕಿ ಒಂದು ಫೋಟೋ ನೋಡಿದ ನೆಟ್ಟಿಗರು ಕಟುವಾಗಿ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಅಷ್ಟೇ ಖಡಕ್ ಆಗಿ ತಾಪ್ಸಿ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲ ನಟಿಯರು ಬಳುಕುವ ಬಳ್ಳಿಯಂತೆ ಇರಲು ಇಷ್ಟಪಡುತ್ತಾರೆ. ಅಭಿಮಾನಿಗಳು ಕೂಡ ತಮ್ಮಿಷ್ಟದ ನಟಿಯರನ್ನು ಅದೇ ರೀತಿ ನೋಡಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಪಾತ್ರಕ್ಕೆ ತಕ್ಕಂತೆ ದೇಹದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಟಿ ತಾಪ್ಸಿ ಪನ್ನು ಕೂಡ ಈಗ ಅದೇ ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೆ ನೆಟ್ಟಿಗರಿಂದ ಬಂದ ಕಮೆಂಟ್ಗಳು ತುಂಬ ಖಾರವಾಗಿದ್ದವು. ಹಾಗಿದ್ದರೂ ಕೂಡ ಅವುಗಳನ್ನು ತಾಪ್ಸಿ ಪನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದಾರೆ. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವರು ಟೀಕಿಸಿದರೆ, ಮತ್ತೆ ಕೆಲವರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಪಿಂಕ್, ತಪ್ಪಡ್, ಹಸೀನ್ ದಿಲ್ರುಬಾ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿರುವ ತಾಪ್ಸಿ ಪನ್ನು ಅವರು ‘ರಶ್ಮಿ ರಾಕೆಟ್’ ಸಿನಿಮಾದಲ್ಲಿ ಅಥ್ಲೀಟ್ ಪಾತ್ರ ಮಾಡಿದ್ದಾರೆ. ಆ ಸಿನಿಮಾ ಅ.15ರಂದು ಜೀ5 ಓಟಿಟಿ ಪ್ಲಾಟ್ಫಾರ್ಮ್ ಮೂಲಕ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ತಾಪ್ಸಿ ಪನ್ನು ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಅದರ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅವುಗಳಿಗೆ ಬಂದ ಕಮೆಂಟ್ ಕೊಂಚ ಕಟುವಾಗಿದೆ.
‘ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅದನ್ನು ತಾಪ್ಸಿ ತುಂಬ ಪಾಸಿಟಿವ್ ಆಗಿ ಸ್ವೀಕರಿಸಿರುವುದು ವಿಶೇಷ. ‘ನೀವು ಕಮೆಂಟ್ ಮಾಡಿದ ಈ ಸಾಲನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಮತ್ತು ಸೆ.23ರವರೆಗೂ ಕಾಯಿರಿ. ಮುಂಚಿತವಾಗಿ ನಿಮಗೆ ಧನ್ಯವಾದಗಳು. ಇಂಥ ಮಾತುಗಳನ್ನು ಕೇಳಲು ನಾನು ತುಂಬ ಶ್ರಮಪಟ್ಟಿದ್ದೇನೆ’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಸೆ.23ಕ್ಕೆ ಚಿತ್ರದ ಟ್ರೇಲರ್ ಬರಲಿದೆ ಎಂಬುದಕ್ಕೆ ಅವರು ಸುಳಿವು ನೀಡಿದ್ದಾರೆ. ಈ ಚಿತ್ರಕ್ಕೆ ಆಕರ್ಷ್ ಖುರಾನಾ ನಿರ್ದೇಶನ ಮಾಡಿದ್ದಾರೆ.
All I will say is…. Just remember this line and wait for 23rd September 🙂 And advance mein THANK YOU I really worked hard for this compliment ?? https://t.co/O5O8zMRzP0
— taapsee pannu (@taapsee) September 20, 2021
ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುತ್ತ ತಾಪ್ಸಿ ಪನ್ನು ಮುನ್ನುಗ್ಗುತ್ತಿದ್ದಾರೆ. ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ಅನೇಕ ವಿಚಾರಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುತ್ತಾರೆ. ಆ ಕಾರಣದಿಂದ ಅವರನ್ನು ಕೆಲವರು ಟ್ರೋಲ್ ಮಾಡುವುದರ ಜೊತೆಗೆ ದ್ವೇಷಿಸಿಸುತ್ತಾರೆ ಕೂಡ. ಆದರೆ ಅವುಗಳ ಬಗ್ಗೆ ತಾಪ್ಸಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಅವರು ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಗಮನ ಹರಿಸುತ್ತಾರೆ. ಅದರ ಫಲವಾಗಿ ತಾಪ್ಸಿಗೆ ಹೆಚ್ಚು ಹೆಚ್ಚು ಸಿನಿಮಾ ಆಫರ್ಗಳು ಹರಿದುಬರುತ್ತಿವೆ.
ಇದನ್ನೂ ಓದಿ:
ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆಗಳ ಐಟಿ ದಾಳಿ ವೇಳೆ ₹ 350 ಕೋಟಿ ತೆರಿಗೆ ವಂಚನೆ ಪತ್ತೆ