ಅಭಿಮಾನಿಗೆ ಶಾರುಖ್​ ಚಿತ್ರದಿಂದ ಮೋಸ;​ 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್; ಇದು ಇಂಟರೆಸ್ಟಿಂಗ್​ ಕೇಸ್​

‘ಟ್ರೇಲರ್​​ನಲ್ಲಿ ಏನೋ ತೋರಿಸಿ, ಸಿನಿಮಾದಲ್ಲಿ ಮತ್ತಿನ್ನೇನೋ ತೋರಿಸಿದರೆ ಅದು ಜನರಿಗೆ ಮೋಸ ಮಾಡಿದಂತೆ ಆಗುತ್ತದೆ’ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.​ ಅಲ್ಲದೇ, ನೊಂದ ಅಭಿಮಾನಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ ನಿರ್ಮಾಪಕರಿಗೆ ಆದೇಶಿಸಿದೆ.

ಅಭಿಮಾನಿಗೆ ಶಾರುಖ್​ ಚಿತ್ರದಿಂದ ಮೋಸ;​ 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್; ಇದು ಇಂಟರೆಸ್ಟಿಂಗ್​ ಕೇಸ್​
‘ಫ್ಯಾನ್​’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 21, 2021 | 8:03 AM

ದೊಡ್ಡ ದೊಡ್ಡ ತಕರಾರುಗಳ ಕಾರಣಕ್ಕೆ ಸೆಲೆಬ್ರಿಟಿಗಳು ಕೋರ್ಟ್​ ಮೆಟ್ಟಿಲು ಹತ್ತಬೇಕಾಗುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಶಾರುಖ್​ ಖಾನ್​ ನಟನೆಯ ‘ಫ್ಯಾನ್​’ ಚಿತ್ರತಂಡ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಎದುರಿಸಬೇಕಾಯಿತು. ಅಲ್ಲದೇ ಈ ಸಿನಿಮಾ ನಿರ್ಮಾಣ ಮಾಡಿದ ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಗೆ ಕೋರ್ಟ್​ ಛೀಮಾರಿ ಹಾಕಿದೆ. ‘ಫ್ಯಾನ್​’ ಸಿನಿಮಾದಿಂದ ನಿರಾಸೆಗೊಂಡ ಅಭಿಮಾನಿಗೆ 15 ಸಾವಿರ ರೂ. ಪರಿಹಾರ ಕೊಡುವಂತೆ ಆದೇಶಿಸಿದೆ. ಅಷ್ಟಕ್ಕೂ ಈ ಸಿನಿಮಾ ಮಾಡಿದ ತಪ್ಪೇನು? ಅಭಿಮಾನಿಯನ್ನು ನಂಬಿಸಿ ಮೋಸ ಮಾಡಿದ್ದು!

ಶಾರುಖ್​ ಖಾನ್​ ನಟನೆಯ ಫ್ಯಾನ್​ ಸಿನಿಮಾ 2016ರಲ್ಲಿ ತೆರೆಕಂಡಿತ್ತು. ಆ ಚಿತ್ರದ ಪ್ರಮೋಷನ್​ಗಾಗಿ ‘ಜಬ್ರಾ ಫ್ಯಾನ್​..’ ಎಂಬ ಹಾಡನ್ನು ರಿಲೀಸ್​ ಮಾಡಲಾಗಿತ್ತು. ಅದನ್ನು ನೋಡಿದ ಅಫ್ರೀನ್​ ಫಾತಿಮಾ ಜೈದಿ ಎಂಬ ಅಭಿಮಾನಿಯು ತುಂಬ ಖುಷಿಪಟ್ಟಿದ್ದರು. ಹಾಗಾಗಿ ಸಿನಿಮಾ ನೋಡಲು ಕುಟುಂಬ ಸಮೇತ ಅವರು ಚಿತ್ರಮಂದಿರಕ್ಕೆ ತೆರಳಿದ್ದರು. ಆದರೆ ಸಿನಿಮಾದಲ್ಲಿ ಆ ಹಾಡು ಬರಲೇ ಇಲ್ಲ! ಅದರಿಂದ ನಿರಾಸೆಗೊಂಡ ಅವರು ‘ಫ್ಯಾನ್​’ ಚಿತ್ರತಂಡದ ವಿರುದ್ಧ ದೂರು ನೀಡಿದ್ದರು. ಆ ಸಂಬಂಧ ಸುಪ್ರೀಂ ಕೋರ್ಟ್​ ಈಗ ತೀರ್ಪು ನೀಡಿದೆ.

‘ಶಾರುಖ್​ ನಟನೆಯ ‘ಫ್ಯಾನ್’​ ಸಿನಿಮಾದಿಂದ ನನಗೆ ಮೋಸ ಆಗಿದೆ. ಬಹಳ ಆಸೆಯಿಂದ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಸಿನಿಮಾದಲ್ಲಿ ‘ಜಬ್ರಾ ಫ್ಯಾನ್​..’ ಸಾಂಗ್​ ಬರಲೇ ಇಲ್ಲ. ಇದರಿಂದ ನನ್ನ ಮಕ್ಕಳಿಗೆ ತುಂಬ ನಿರಾಸೆ ಆಯಿತು. ಅಂದು ರಾತ್ರಿ ಮಕ್ಕಳು ಊಟ ಮಾಡಲೇ ಇಲ್ಲ.  ಇದರಿಂದ ಅವರಿಗೆ ಆ್ಯಸಿಡಿಟಿ ಹೆಚ್ಚಾಗಿ, ಆಸ್ಪತ್ರೆಗೆ ಸೇರಿಸಬೇಕಾಯಿತು’ ಎಂದು ತಮ್ಮ ದೂರಿನಲ್ಲಿ ಅಫ್ರೀನ್​ ಫಾತಿಮಾ ಜೈದಿ ಉಲ್ಲೇಖಿಸಿದ್ದರು.

‘ಈ ರೀತಿ ಪ್ರಮೋಷನಲ್​ ಸಾಂಗ್​ ಮಾಡುವುದು ಸಹಜ ಸಂಗತಿ’ ಎಂದು ‘ಫ್ಯಾನ್​’ ಸಿನಿಮಾ ನಿರ್ಮಾಪಕರ ಪರ  ವಕೀಲರು ವಾದ ಮಾಡಿದರು. ಆದರೆ ಅದನ್ನು ಸುಪ್ರೀಂ ಕೋರ್ಟ್​ ನ್ಯಾಯಾಧೀಶರು ಒಪ್ಪಲಿಲ್ಲ. ‘ಟ್ರೇಲರ್​​ನಲ್ಲಿ ಏನೋ ತೋರಿಸಿ, ಸಿನಿಮಾದಲ್ಲಿ ಮತ್ತಿನ್ನೇನೋ ತೋರಿಸಿದರೆ ಅದು ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ಸಿನಿಮಾದಲ್ಲಿ ಆ ಸಾಂಗ್​ ಇಲ್ಲ ಎಂದಮೇಲೆ ಅದರನ್ನು ಪ್ರಚಾರಕ್ಕಾಗಿ ಯಾಕೆ ಬಳಸಿಕೊಳ್ಳಬೇಕು? ಇಂಥ ಸಂಗತಿಗಳು ನಿಲ್ಲಬೇಕು’ ಎಂದು ಹೇಳಿರುವ ಕೋರ್ಟ್​​, ಆ ಅಭಿಮಾನಿಗೆ 15 ಸಾವಿರ ರೂ. ಪರಿಹಾರ ನೀಡುವಂತೆ ‘ಫ್ಯಾನ್​’ ಚಿತ್ರದ ನಿರ್ಮಾಪಕರಿಗೆ ಆದೇಶಿಸಿದೆ.

ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿದ್ದ ‘ಫ್ಯಾನ್​’ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಹೀನಾಯವಾಗಿ ಸೋತಿತ್ತು. ಈಗ ಸುಪ್ರೀಂ ಕೋರ್ಟ್​​ನಿಂದ ದಂಡ ಹಾಕಿಸಿಕೊಂಡು ಮತ್ತೆ ನಷ್ಟ ಅನುಭವಿಸುವಂತಾಗಿದೆ. ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಗೆ 15 ಸಾವಿರ ರೂ. ದಂಡ ದೊಡ್ಡ ಮೊತ್ತವೇನಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ಮುಖಭಂಗ ಆಗಿರುವುದು ಆ ಸಂಸ್ಥೆಯ ಪ್ರತಿಷ್ಠೆಗೆ ಪೆಟ್ಟು ಬಿದ್ದಂತೆಯೇ ಸರಿ.

ಇದನ್ನೂ ಓದಿ:

‘ಶಾರುಖ್​ ಖಾನ್​ರದ್ದು ಅತಿ ಕೆಟ್ಟ ಮತ್ತು ಸಹಿಸಲಾಗದ ನಟನೆ’; ಪತ್ನಿ ಗೌರಿ ಹೀಗೆ ಹೇಳಿದ್ದು ಯಾಕೆ?

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ