ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?

Amitabh Bachchan: ಕೆಬಿಸಿ 13ರ ಇತ್ತೀಚಿನ ಪ್ರೋಮೋದಲ್ಲಿ ಅಮಿತಾಭ್​ರೊಂದಿಗೆ ಸ್ಪರ್ಧಿಯೊಬ್ಬರು ಫ್ಲರ್ಟ್ ಮಾಡಿರುವುದು ಸಖತ್ ಸುದ್ದಿಯಾಗಿದೆ. ಜೊತೆಗೆ ಇದಕ್ಕೆ ಅಮಿತಾಭ್ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ.

ಸ್ಪರ್ಧಿ ತನ್ನೊಂದಿಗೆ ಫ್ಲರ್ಟ್ ಮಾಡಿದಾಗ ಕೆಬಿಸಿ ನಿರ್ಮಾಪಕರಿಗೆ ಶೋ ನಿಲ್ಲಿಸಲು ಹೇಳಿದ ಅಮಿತಾಭ್!; ಕಾರಣವೇನು?
ಸ್ಪರ್ಧಿ ನಮ್ರತಾ ಷಾ ಹಾಗೂ ಅಮಿತಾಭ್ ಬಚ್ಚನ್
Follow us
TV9 Web
| Updated By: shivaprasad.hs

Updated on:Sep 21, 2021 | 2:06 PM

KBC 13: ಕೌನ್ ಬನೇಗಾ ಕರೋಡ್​ಪತಿ 13ರ ಕಾರ್ಯಕ್ರಮದಲ್ಲಿ ಅಮಿತಾಭ್ ತಮ್ಮ ಲವಲವಿಕೆ ನಿರೂಪಣೆಯಿಂದ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಚಾನಲ್ ಹಂಚಿಕೊಂಡ ಪ್ರೋಮೋ ವೀಕ್ಷಕರ ಆಸಕ್ತಿ ಕೆರಳಿಸಿದ್ದು, ಅಮಿತಾಭ್ ನಡೆಗೆ ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಅಮಿತಾಭ್ ಮಾಡಿದ್ದೇನು ಅಂತೀರಾ. ಇಲ್ಲಿದೆ ಉತ್ತರ. ಚಾನಲ್ ಹಂಚಿಕೊಂಡಿರುವ ಇತ್ತೀಚಿನ ಪ್ರೋಮೋದಲ್ಲಿ ಹಾಟ್​ಸೀಟ್​ನಲ್ಲಿ ಕುಳಿತ ಸ್ಪರ್ಧಿ, ಕಥಕ್ ನೃತ್ಯಪಟುವಾದ ನಮ್ರತಾ ಷಾ ಅವರು ಅಮಿತಾಭ್​ರೊಂದಿಗೆ ಫ್ಲರ್ಟ್ ಮಾಡಿದ್ದಾರೆ. ಅದಕ್ಕೆ ಅಮಿತಾಭ್ ಉತ್ತರಿಸಿರುವ ಪ್ರೋಮೋ ಈಗ ವೈರಲ್ ಆಗುತ್ತಿದೆ.

ನಮ್ರತಾ ಅವರು ಧರಿಸಿದ್ದ ನೆಕ್ಲೇಸನ್ನು ಅಮಿತಾಭ್ ಪ್ರಶಂಸಿಸಿದಾಗ, ಅವರು ನಿಮ್ಮನ್ನು ‘ಅಮಿತ್ ಜಿ’ ಎನ್ನಲೇ ಎಂದು ಕೇಳುತ್ತಾರೆ. ಆಗ ಅಮಿತಾಭ್, ಕೇವಲ ‘ಅಮಿತ್’ ಎಂದು ಕರೆಯಿರಿ ಸಾಕು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಜೊತೆಗೆ ಕೆಬಿಸಿಯ ಪ್ರೊಡ್ಯೂಸರ್​ಗೆ ‘ನಿರ್ಮಾಪಕರೇ ಕೂಡಲೇ ಈ ಶೋವನ್ನು ನಿಲ್ಲಿಸಿ, ನಾನು ನಮ್ರತಾ ಅವರೊಂದಿಗೆ ಹೊರ ಹೋಗಿ ಒಂದು ಕಪ್ ಟೀ ಕುಡಿಯಬೇಕು’ ಎಂದಿದ್ದಾರೆ. ಅಮಿತಾಭ್ ಮಾತಿಗೆ ಸೆಟ್ಟಿನಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.

ಚಾನಲ್ ಹಂಚಿಕೊಂಡ ಪ್ರೋಮೋ ಇಲ್ಲಿದೆ:

ಇತ್ತೀಚೆಗೆ ಚಾನಲ್ ಮತ್ತೊಂದು ಪ್ರೋಮೋ ಹಂಚಿಕೊಂಡಿತ್ತು. ಅದರಲ್ಲಿ ಮೂವರು ಹೊಸ ಸ್ಪರ್ಧಿಗಳು ಭಾಗವಹಿಸುತ್ತಿರುವ ಕುರಿತು ಮಾಹಿತಿ ನೀಡಲಾಗಿತ್ತು. ಅದರಲ್ಲಿ ಕೂಡ ಅಮಿತಾಭ್ ಅವರೊಂದಿಗೆ ನಮ್ರತಾ ಮಾತನಾಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಅದರಲ್ಲಿ ನಮ್ರತಾ ನೃತ್ಯ ಮಾಡುತ್ತಾ ಹಲವಾರು ಸುತ್ತು ತಿರುಗಿದ್ದರು. ಆಗ ಅಮಿತಾಭ್, ಹಾಗೆ ತಿರುಗುವಾಗ ತಲೆ ಸುತ್ತುವುದಿಲ್ಲವೇ? ಎಂದು ಪ್ರಶ್ನಿಸಿದ್ದರು. ಆಗ ನಮ್ರತಾ, ‘ಇಲ್ಲ. ದೃಷ್ಟಿಯನ್ನು ಒಂದೇ ಕಡೆ ಕೇಂದ್ರೀಕರಿಸಿದಾಗ ಹಾಗಾಗುವುದಿಲ್ಲ’ ಎಂದು ಅಮಿತಾಭ್​ರನ್ನು ಉದ್ದೇಶಿಸಿ ಹೇಳುತ್ತಾ ಫ್ಲರ್ಟ್ ಮಾಡಿದ್ದರು. ಜೊತೆಗೆ ‘ನೀವು ಯುವಕನಂತೆ ಕಾಣುತ್ತೀರಿ’ ಎಂದು ಅಮಿತಾಭ್​ರಿಗೆ ಹೇಳಿದಾಗ, ಅಮಿತಾಭ್ ನಾಚಿದ್ದರು. ಆ ಪ್ರೋಮೋ ಇಲ್ಲಿದೆ.

ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಮತ್ತೋರ್ವ ಸ್ಪರ್ಧಿ, ಪಂಕಜ್ ₹ 12.5 ಲಕ್ಷ ಬಹುಮಾನ ಗಳಿಸಿದರು. ಮತ್ತೋರ್ವ ಸ್ಪರ್ಧಿಗೆ ₹ 1 ಕೋಟಿ ಮೊತ್ತದ ಪ್ರಶ್ನೆ ಕೇಳುತ್ತಿರುವುದನ್ನು ತೋರಿಸಲಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ.

ಕೆಬಿಸಿ 13ರಲ್ಲಿ ಪ್ರತೀ ಶುಕ್ರವಾರ ತಾರೆಯರು ಭಾಗಿಯಾಗುತ್ತಾರೆ. ಕಳೆದ ವಾರ ಒಲಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗಗೂ ಪಿ.ಶ್ರೀಜೇಶ್ ಬಾಗಿಯಾಗಿದ್ದರು. ಅವರು ಒಟ್ಟು ₹ 25 ಲಕ್ಷವನ್ನು ಗಳಿಸಿದ್ದು ಚಾರಿಟಿಗಾಗಿ ಹಣವನ್ನು ಬಳಸಲಿದ್ದಾರೆ. ಅದಕ್ಕೂ ಮೊದಲು ಶುಕ್ರವಾರದ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಫರಾ ಖಾನ್ ಭಾಗವಹಿಸಿದ್ದರು. ಮೊದಲ ಸಂಚಿಕೆಯಲ್ಲಿ ಖ್ಯಾತ ಕ್ರಿಕೆಟಿಗರಾದ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು.

ಇದನ್ನೂ ಓದಿ:

Kareena Kapoor Khan Birthday: ಹುಟ್ಟುಹಬ್ಬದ ದಿನ ಸೈಫ್​ ಜತೆ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ ಕರೀನಾ

KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?

(Amitabh told to KBC 13 producer to stop the show after a contestant flirts with him)

Published On - 2:04 pm, Tue, 21 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ