AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kareena Kapoor Khan Birthday: ಹುಟ್ಟುಹಬ್ಬದ ದಿನ ಸೈಫ್​ ಜತೆ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ ಕರೀನಾ

ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕರೀನಾ ಕಪೂರ್​ ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಕರಣ್​ ಜೋಹರ್​, ಮಲೈಕಾ ಅರೋರಾ, ರಾಕುಲ್​ ಪ್ರೀತ್​ ಸಿಂಗ್​, ವಿವೇಕ್​ ಒಬೆರಾಯ್​, ಕಂಗನಾ ರಣಾವತ್​ ಮುಂತಾದವರು ಕರೀನಾಗೆ ವಿಶ್​ ಮಾಡಿದ್ದಾರೆ.

Kareena Kapoor Khan Birthday: ಹುಟ್ಟುಹಬ್ಬದ ದಿನ ಸೈಫ್​ ಜತೆ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ ಕರೀನಾ
ಸೈಫ್ ಅಲಿ ಖಾನ್, ಕರೀನಾ ಕಪೂರ್
TV9 Web
| Edited By: |

Updated on: Sep 21, 2021 | 1:13 PM

Share

ಬಾಲಿವುಡ್​ ನಟಿ ಕರೀನಾ ಕಪೂರ್​ ಖಾನ್​ ಅವರು ಇಂದು (ಸೆ.21) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕುಟುಂಬದವರ ಜೊತೆ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ಕರೀನಾಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಬಾಲಿವುಡ್​ನಲ್ಲಿ ಇಂದಿಗೂ ಬೇಡಿಕೆ ಉಳಿಸಿಕೊಂಡಿರುವ ಅವರು ಸದ್ಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಆಮೀರ್​ ಖಾನ್​ ಜೊತೆ ತೆರೆಹಂಚಿಕೊಂಡಿದ್ದಾರೆ. ಬರ್ತ್​ಡೇ ಪ್ರಯುಕ್ತ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿರುವ ಅವರು ಸೈಫ್​ ಅಲಿ ಖಾನ್​ ಜೊತೆಗೆ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

ಸೆಲೆಬ್ರಿಟಿಗಳ ಫೇವರಿಟ್​ ತಾಣ ಮಾಲ್ಡೀವ್ಸ್​. ಅಲ್ಲಿನ ಕಡಲ ತೀರದಲ್ಲಿ ಎಂಜಾಯ್​ ಮಾಡೋದು ಎಂದರೆ ಅವರಿಗೆ ಸಖತ್​ ಇಷ್ಟ. ಸೈಫ್​ ಅಲಿ ಖಾನ್​ ಮತ್ತು ಮಕ್ಕಳ ಜೊತೆ ಮಾಲ್ಡೀವ್ಸ್​ಗೆ ಹೋಗಿರುವ ಕರೀನಾ ಕಪೂರ್​ ಅವರು ಅಲ್ಲಿಯೇ ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಕ್ಷಣದ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸೈಫ್​-ಕರೀನಾ ಆಪ್ತವಾಗಿರುವ ಈ ಫೋಟೋಗಳು ಅವರ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿವೆ.

ಕರಣ್​ ಜೋಹರ್​, ಮಲೈಕಾ ಅರೋರಾ, ರಾಕುಲ್​ ಪ್ರೀತ್​ ಸಿಂಗ್​, ವಿವೇಕ್​ ಒಬೆರಾಯ್​, ಕಂಗನಾ ರಣಾವತ್​ ಮುಂತಾದವರು ಕರೀನಾಗೆ ವಿಶ್​ ಮಾಡಿದ್ದಾರೆ. ‘ಎಲ್ಲರಿಗಿಂತ ಹೆಚ್ಚು ಸುಂದರವಾಗಿರುವ ಕರೀನಾಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಕಂಗನಾ ಶುಭಕೋರಿದ್ದಾರೆ. ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿರುವ ಕರೀನಾ-ಸೈಫ್​ ಜೊತೆ ಮಕ್ಕಳಾದ ತೈಮೂರ್​ ಅಲಿ ಖಾನ್​ ಮತ್ತು ಜಹಾಂಗೀರ್​ ಅಲಿ ಖಾನ್ ಖಾನ್​ ಕೂಡ ಸಾಥ್​ ನೀಡಿದ್ದಾರೆ.

ಒಂದಿಲ್ಲೊಂದು ಕಾರಣಕ್ಕೆ ಕರೀನಾ ಸುದ್ದಿ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿತ್ತು. ಈ ವೇಳೆ ಗಣೇಶನ ವಿಗ್ರಹಕ್ಕೆ ಸೈಫ್​ ಮತ್ತು ಮಕ್ಕಳು ಕೈ ಮುಗಿಯುತ್ತಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೋಗಳಿಗೆ ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದರು. ಮುಸ್ಲಿಂ ವ್ಯಕ್ತಿ ಆಗಿರುವ ಸೈಫ್​ ಹಿಂದೂ ದೇವರಿಗೆ ಕೈಮುಗಿದಿರುವುದು ಸರಿಯಲ್ಲ ಎಂದು ಒಂದು ವರ್ಗದ ನೆಟ್ಟಿಗರು ಕಿಡಿಕಾರಿದ್ದರು. ಇದಕ್ಕೆಲ್ಲ ಈ ದಂಪತಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಸದ್ಯ ‘ಆದಿಪುರುಷ್’, ‘ಬಂಟಿ ಔಟ್​ ಬಬ್ಲಿ 2’ ಮುಂತಾದ ಕೆಲಸಗಳಲ್ಲಿ ಸೈಫ್​ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಭೂತ್​ ಪೊಲೀಸ್​’ ಚಿತ್ರ ಇತ್ತೀಚೆಗೆ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಮೂಲಕ ಬಿಡುಗಡೆ ಆಗಿದೆ.

ಇದನ್ನೂ ಓದಿ:

ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?

Kareena Kapoor net worth: ಕರೀನಾ ಕಪೂರ್ ಒಟ್ಟು ಆಸ್ತಿ ಮೌಲ್ಯ ಇಷ್ಟೊಂದಾ? ಕುತೂಹಲಕರ ಮಾಹಿತಿ ಇಲ್ಲಿದೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?