AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kareena Kapoor net worth: ಕರೀನಾ ಕಪೂರ್ ಒಟ್ಟು ಆಸ್ತಿ ಮೌಲ್ಯ ಇಷ್ಟೊಂದಾ? ಕುತೂಹಲಕರ ಮಾಹಿತಿ ಇಲ್ಲಿದೆ

Kareena Kapoor Birthday: ಬಾಲಿವುಡ್​ನ ಬಹು ಬೇಡಿಕೆಯ ನಟಿಯರಲ್ಲೊಬ್ಬರಾಗಿರುವ ಕರೀನಾ ಕಪೂರ್ ಅವರ ಒಟ್ಟು ಆಸ್ತಿ ಮೌಲ್ಯ, ಆದಾಯ, ಕಾರುಗಳು ಮೊದಲಾದ ಕುತೂಹಲಕರ ಮಾಹಿತಿ ಇಲ್ಲಿದೆ.

Kareena Kapoor net worth: ಕರೀನಾ ಕಪೂರ್ ಒಟ್ಟು ಆಸ್ತಿ ಮೌಲ್ಯ ಇಷ್ಟೊಂದಾ? ಕುತೂಹಲಕರ ಮಾಹಿತಿ ಇಲ್ಲಿದೆ
ಕರೀನಾ ಕಪೂರ್ (ಸಂಗ್ರಹ ಚಿತ್ರ)
TV9 Web
| Updated By: shivaprasad.hs|

Updated on:Sep 21, 2021 | 12:37 PM

Share

ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಕಪೂರ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಸುಮಾರು 20 ವರ್ಷಗಳಿಂದಲೂ ಸಕ್ರಿಯರಾಗಿರುವ ಅವರು, ಈಗಲೂ ದೊಡ್ಡ ಚಿತ್ರಗಳಲ್ಲಿ ಅವಕಾಶವನ್ನು ಹೊಂದಿದ್ದಾರೆ. ಜೊತೆಗೆ ಅವರ ಸಂಭಾವನೆಯ ಕುರಿತಂತೆಯೂ ಬಾಲಿವುಡ್ ಅಂಗಳದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಖ್ಯಾತ ಕಪೂರ್ ಕುಟುಂಬದಿಂದ ಕುಡಿಯಾದ ಕರೀನಾ, ರಣಧೀರ್ ಕಪೂರ್ ಹಾಗೂ ಬಬಿತಾ ಅವರ ಪುತ್ರಿಯಾಗಿದ್ದಾರೆ. ಬಾಲಿವುಡ್​ನಲ್ಲಿ ತಮ್ಮದೇ ಆದ ಛಾಪನ್ನು ಕಪೂರ್ ಕುಟುಂಬವು ಹೊಂದಿದ್ದರೂ ಕೂಡ ಕರೀನಾ, ಅದರ ನೆರಳಿನಲ್ಲಿ ಗುರುತಿಸಿಕೊಳ್ಳದೇ ತಮ್ಮದೇ ಆದ ಸ್ವಂತ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ.

2000ದಲ್ಲಿ ತೆರೆಕಂಡ ‘ರೆಫ್ಯೂಜಿ’ ಚಿತ್ರದ ಮೂಲಕ ಕರೀನಾ ಬಾಲಿವುಡ್‌ ಪ್ರವೇಶಿಸಿದರು. ಆದರೆ 2001ರಲ್ಲಿ ಬಿಡುಗಡೆಯಾದ ‘ಕಭಿ ಖುಷಿ ಕಭೀ ಘಮ್’ ಚಿತ್ರವು ಅವರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವನ್ನು ನೀಡಿದ ಚಲನಚಿತ್ರ. ಇದರ ನಂತರ ಕರೀನಾ ಒಂದರ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದು ಮಾತ್ರವಲ್ಲದೇ, ಪ್ರತೀ ಚಿತ್ರಕ್ಕೂ ಅವರ ಗಳಿಕೆ ಏರುತ್ತಲೇ ಸಾಗಿದೆ. ಪ್ರರಸ್ತುತ ಕರೀನಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಕರೀನಾ ಒಟ್ಟು ಆದಾಯವೆಷ್ಟು? ‘Caknowledge’ನ ವರದಿಯ ಪ್ರಕಾರ, ಕರೀನಾ ಅವರ ನಿವ್ವಳ ಮೌಲ್ಯ ಸುಮಾರು 440 ಕೋಟಿ. ಜೊತೆಗೆ ಕರೀನಾ ಮಾಸಿಕ ಆದಾಯ ₹ 1 ಕೋಟಿಗಿಂತ ಹೆಚ್ಚು. ಅವರ ವಾರ್ಷಿಕ ಆದಾಯ ₹ 10-12 ಕೋಟಿ ಮೀರುತ್ತದೆ. ಕರೀನಾ ಚಲನಚಿತ್ರಗಳು, ಬ್ರಾಂಡ್​ಗಳಿಗೆ ರಾಯಭಾರಿ, ಸ್ಟೇಜ್ ಶೋಗಳು, ಪ್ರವಾಸಗಳು ಮತ್ತು ರೇಡಿಯೋ ಕಾರ್ಯಕ್ರಮಗಳ ಮೂಲಕ ಆದಾಯ ಗಳಿಸುತ್ತಾರೆ.

ಕರೀನಾರ ಒಂದು ಚಿತ್ರದ ಸಂಭಾವನೆ ಎಷ್ಟು? ವರದಿಗಳ ಪ್ರಕಾರ, ಕರೀನಾ ಕಪೂರ್ ಒಂದು ಚಿತ್ರಕ್ಕೆ ₹ 7 ಕೋಟಿ ಪಡೆಯುತ್ತಿದ್ದರು. ಅವರ ಹಿಂದಿನ ಚಿತ್ರ ‘ವೀರೆ ಡಿ ವೆಡ್ಡಿಂಗ್’ ನಂತರ ಕರೀನಾ ಒಂದು ಚಿತ್ರಕ್ಕೆ 10 ಕೋಟಿ ಶುಲ್ಕ ಪಡೆಯುತ್ತಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ಸೀತಾ ಪಾತ್ರಕ್ಕೆ ₹ 12 ಕೋಟಿ ಬೇಡಿಕೆ ಇಟ್ಟಿದ್ದರು ಎಂಬ ಸುದ್ದಿ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Kareena Kapoor

ಕರೀನಾ ಕಪೂರ್ (ಸಂಗ್ರಹ ಚಿತ್ರ)

ಕರೀನಾ ಎಷ್ಟು ಮನೆಗಳನ್ನು ಹೊಂದಿದ್ದಾರೆ? ಮೂಲಗಳ ಪ್ರಕಾರ, ಕರೀನಾ 4 ಬಿಎಚ್‌ಕೆ ಅಪಾರ್ಟ್​​ಮೆಂಟ್ ಹೊಂದಿದ್ದು, ಅಲ್ಲಿ ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಈ ಅಪಾರ್ಟ್ಮೆಂಟ್ ಬೆಲೆ ಸುಮಾರು ₹ 48 ಕೋಟಿ. ಜೊತೆಗೆ ಕರೀನಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ₹ 33 ಕೋಟಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.

ಕಾರುಗಳೆಷ್ಟಿವೆ? ಕರೀನಾ ಅನೇಕ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ಅವರು ₹ 1.40 ಕೋಟಿ ಬೆಲೆಯ ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ₹ 97 ಲಕ್ಷದ ಆಡಿ ಕ್ಯೂ 7, ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿ ಮತ್ತು ಲೆಕ್ಸಸ್ ಎಲ್ಎಕ್ಸ್ 470ಗಳನ್ನು ಹೊಂದಿದ್ದಾರೆ.

ಕರೀನಾ ಕಾಣಿಸಿಕೊಳ್ಳುವ ಒಂದು ಜಾಹಿರಾತಿಗೆ ಅವರು ಪಡೆಯುವ ಸಂಭಾವನೆ ಎಷ್ಟು?

ವರದಿಗಳ ಪ್ರಕಾರ, ದೊಡ್ಡ ಬ್ರಾಂಡ್​ಗಳ ಜಾಹಿರಾತಿನಲ್ಲಿ ಕರೀನಾ ಕಾಣಿಸಿಕೊಳ್ಳುತ್ತಾರೆ. ಒಂದು ಬ್ರಾಂಡ್​ನಲ್ಲಿ ಕಾಣಿಸಿಕೊಳ್ಳಲು ಅವರು ಸುಮಾರು ₹ 6 ಕೋಟಿ ಪಡೆಯುತ್ತಾರೆ.

ಕರೀನಾ ಕಪೂರ್ ಮುಂದಿನ ಚಿತ್ರ ಯಾವುದು? ಕರೀನಾ ಕೊನೆಯದಾಗಿ ಕಾಣಿಸಿಕೊಂಡಿದ್ದು, 2020 ರಲ್ಲಿ ತೆರೆಕಂಡ ‘ಅಂಗ್ರೇಜಿ ಮೀಡಿಯಂ’ನಲ್ಲಿ. ಆ ಚಿತ್ರದಲ್ಲಿ ಇರ್ಫಾನ್ ಖಾನ್ ಮತ್ತು ರಾಧಿಕಾ ಮದನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಕರೀನಾ ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ಸುಧಾಕರ್​ ಜೊತೆ ನಿರ್ಮಾಪಕರ ಮಾತುಕತೆ: ಕೋಟಿಗೊಬ್ಬ 3, ಭಜರಂಗಿ 2, ಸಲಗ ಸಿನಿಮಾಗಳ ಭವಿಷ್ಯವೇನು?

Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!

(Kareena Kapoor net worth and full details is here)

Published On - 12:29 pm, Tue, 21 September 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!