KBC 13: ಕೆಬಿಸಿ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ‘ಐ ಲವ್ ಯೂ ಟೂ’ ಎಂದ ಜೆನಿಲಿಯಾ; ಏನಿದು ಸಮಾಚಾರ?
Amitabh Bachchan: ಹಲವು ಅಚ್ಚರಿಗಳಿಗೆ ಸಾಕ್ಷಿಯಾಗುವ ಕೆಬಿಸಿ ವೇದಿಕೆ ಇತ್ತೀಚೆಗೆ ಬಹು ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.
KBC 13: ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ 13ನೇ ಸೀಸನ್ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಭಾಗವಹಿಸಿ ಸರಿಯಾದ ಉತ್ತರ ನೀಡಿ ಹಲವು ಲಕ್ಷಗಳ ಒಡೆಯರಾಗುತ್ತಿದ್ದಾರೆ. ನಿನ್ನೆಯ (ಸೆಪ್ಟೆಂಬರ್ 20) ಕಾರ್ಯಕ್ರಮದಲ್ಲಿ ಛತ್ತೀಸಗಡ ಮೂಲದ ಪಂಕಜ್ ಕುಮಾರ್ ಸಿಂಗ್ ಹಾಟ್ಸೀಟ್ನಲ್ಲಿ ಕುಳಿತಿದ್ದರು. ಉತ್ತಮವಾಗಿ ಆಡುತ್ತಿದ್ದ ಅವರಿಗೆ ₹ 25 ಲಕ್ಷದ ಪ್ರಶ್ನೆಗೆ ಉತ್ತರ ಹೊಳೆಯಲಿಲ್ಲ. ಆ ಪ್ರಶ್ನೆ ಇಲ್ಲಿದೆ.
ಪಂಕಜ್ ಸಿಂಗ್ ಅವರು ₹ 12.5 ಲಕ್ಷ ಮೊತ್ತದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರು. ಅವರಿಗೆ ನಂತರ ₹ 25 ಲಕ್ಷಕ್ಕೆ ಕೇಳಲಾದ ಪ್ರಶ್ನೆ ಇದು. 18ನೇ ಶತಮಾನದಲ್ಲಿ ಈಗಿನ ಯಾವ ಜಿಲ್ಲೆಯಲ್ಲಿ ಶುಜಾ-ಉದ್-ದೌಲಾ ‘ಛೋಟಾ ಕಲ್ಕತ್ತಾ ಕೋಟೆ’ಯನ್ನು ನಿರ್ಮಿಸಿದರು? ಅವರಿಗೆ ನೀಡಲಾಗಿದ್ದ ಆಯ್ಕೆಗಳು- ಅಮೇಠಿ, ಅಯೋಧ್ಯ, ಮುರ್ಷಿದಾಬಾದ್ ಮತ್ತು ವಾರಣಾಸಿ. ಆದರೆ ಈ ಪ್ರಶ್ನೆಗೆ ಪಂಕಜ್ ಅವರಿಗೆ ಉತ್ತರ ತಿಳಿಯಲಿಲ್ಲ. ನಿಮಗೆ ಈ ಪ್ರಶ್ನೆಗೆ ಉತ್ತರ ತಿಳಿದಿದೆಯೇ? ಮೇಲಿನ ಪ್ರಶ್ನೆಗೆ ಸರಿಯಾದ ಉತ್ತರ ಅಯೋಧ್ಯ. ಆದರೆ ಪಂಕಜ್ ಅವರಿಗೆ ಉತ್ತರ ತಿಳಿಯದ ಕಾರಣ, ಸ್ಪರ್ಧೆಯನ್ನು ಕ್ವಿಟ್ ಮಾಡಿದರು. ಇದರೊಂದಿಗೆ ಅವರು ₹ 12.5 ಲಕ್ಷದೊಂದಿಗೆ ಸ್ಪರ್ಧೆ ಮುಗಿಸಿದರು.
ಪಂಕಜ್ ಭಾಗವಹಿಸಿದ್ದ ಕಾರ್ಯಕ್ರಮವನ್ನು ‘ಆಶಾ- ಅಭಿಲಾಷಾ’ ಎಂಬ ಪರಿಕಲ್ಪನೆಯೊಂದಿಗೆ ನಡೆಸಲಾಗಿತ್ತು. ಕಾರಣ, 30 ವರ್ಷದ ಪಂಕಜ್ ಅಪರೂಪದ ಖಾಯಿಲೆಯಿಂದ(Juvenile Ankylosing Spondylitis) ಬಳಲುತ್ತಿದ್ದಾರೆ. ಇದರಿಂದಾಗಿ ಅವರಿಗೆ ಬೆನ್ನು, ಕೀಲುಗಳು, ಭುಜ, ತೊಡೆ ಮೊದಲಾದ ಭಾಗಗಳಲ್ಲಿ ವಿಪರೀತ ನೋವು ಕಂಡುಬರುತ್ತದೆಯಂತೆ. ಕಾರ್ಯಕ್ರಮದ ವಿಶೇಷ ಪರಿಕಲ್ಪನೆಯ ಪ್ರಕಾರ, ಪಂಕಜ್ಗೆ ತಮ್ಮ ಇಷ್ಟದ ನಟಿಯಾದ ಜೆನಿಲಿಯಾ ದೇಶ್ಮುಖ್ ಅವರನ್ನು ಮಾತನಾಡಿಸುವ ವಿಶೇಷ ಸಂದರ್ಭವನ್ನು ಕಲ್ಪಿಸಲಾಗಿತ್ತು. ಇದರಿಂದ ಪಂಕಜ್ ಸಖತ್ ಖುಷಿಯಾದರು.
ಜೆನಿಲಿಯಾ ಮಾತನಾಡಿರುವ ವಿಡಿಯೊ ಇಲ್ಲಿದೆ:
Aasha Abhilasha saptah mein poore hue contestant Pankaj Kumar Singh ke sapne! Dekhiye unki iss beautiful journey ko #KaunBanegaCrorepati mein, aaj raat 9 baje, sirf Sony par.#KBC13 #SawaalJoBhiHoJawaabAapHiHo @SrBachchan pic.twitter.com/U6ltN0SiJv
— sonytv (@SonyTV) September 20, 2021
ಪಂಕಜ್ ಅವರನ್ನು ಮಾತನಾಡಿಸುತ್ತಾ ಜೆನಿಲಿಯಾ, ‘ನಿಮ್ಮನ್ನು ಕಂಡು ಬಹಳ ಖುಷಿಯಾಯಿತು. ನನಗೂ ನೀವು ಇಷ್ಟವಾದಿರಿ(ಐ ಲವ್ ಯೂ ಟೂ)’ ಎಂದರು. ಸಂತಸದಲ್ಲಿ ತೇಲಾಡಿದ ಪಂಕಜ್, ಅಮಿತಾಭ್ ಅವರಲ್ಲಿ ಜೀವನದ ಆಸೆಗಳೆಲ್ಲವೂ ಒಮ್ಮೆಲೇ ನನಸಾಗುತ್ತಿದೆಯಲ್ಲಾ, ಎಂದು ನಕ್ಕರು.
ಇದನ್ನೂ ಓದಿ:
ಒಂದೇ ಒಂದು ಗುಡ್ ನ್ಯೂಸ್ಗಾಗಿ ಕಾಯುತ್ತಿದೆ ಚಿತ್ರರಂಗ; ಮತ್ತೆ ರಂಗೇರಲಿದೆ ಗಾಂಧಿನಗರ
‘ನಿಮ್ಮ ದೇಹ ಗಂಡಸರ ರೀತಿ ಇದೆ’; ತಾಪ್ಸಿ ಪನ್ನು ಬಾಡಿ ಬಗ್ಗೆ ನೆಟ್ಟಿಗರ ಕಮೆಂಟ್; ಖುಷಿಯಾದ ನಟಿ
(Genelia Deshmukh says I Love You too to a KBC 13 contestant Pankaj in front of Amitabh here is the reason)
Published On - 10:42 am, Tue, 21 September 21