ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?

ಈ ಪ್ರಶ್ನೆಗೆ ಕರೀನಾ ಕಪೂರ್ ಖಾನ್​ ಏನು ಉತ್ತರ ನೀಡಬಹುದು ಎಂದು ಎಲ್ಲರೂ ಅಚ್ಚರಿಯಿಂದ ನಿರೀಕ್ಷಿಸಿದರು. ಆದರೆ ಕರೀನಾ ಪ್ರತಿಕ್ರಿಯೆ ಇನ್ನಷ್ಟು ಶಾಕಿಂಗ್​ ಆಗಿತ್ತು.

ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?
ಕರೀನಾ ಕಪೂರ್​ ಖಾನ್​
TV9kannada Web Team

| Edited By: Madan Kumar

Jun 17, 2021 | 9:46 AM

ನಟಿ ಕರೀನಾ ಕಪೂರ್ ಖಾನ್​ ಈಗಲೂ ಬಾಲಿವುಡ್​ನಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ. ಆಮೀರ್​ ಖಾನ್​ ಜೊತೆ ಅವರು ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ಮೊದಲಿನಿಂದಲೂ ಅನೇಕ ಸಿನಿಮಾಗಳಲ್ಲಿ ಕರೀನಾ ಕಪೂರ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಅಗತ್ಯವಿದ್ದರೆ ಅವರು ಬಿಕಿನಿ ಧರಿಸಿ ಕೂಡ ಕ್ಯಾಮರಾ ಎದುರಿಸಿದ್ದಾರೆ. ಆದರೆ ಒಮ್ಮೆ ಅವರಿಗೆ ಪತ್ರಕರ್ತನೊಬ್ಬನಿಂದ ಅಚ್ಚರಿಯ ಪ್ರಶ್ನೆ ಎದುರಾಗಿತ್ತು. ‘ನೀವು ನಗ್ನವಾಗಿ ನಟಿಸುತ್ತೀರಾ’ ಎಂದು ಕೇಳಿದ್ದಕ್ಕೆ ಕರೀನಾ ತಬ್ಬಿಬ್ಬಾಗಿದ್ದರು.

ಅದು 2009ರ ಸಮಯ. ಅಕ್ಷಯ್​ ಕುಮಾರ್​ ನಾಯಕತ್ವದ ‘ಕಂಬಕ್ತ್​ ಇಶ್ಕ್​’ ಸಿನಿಮಾದಲ್ಲಿ ಕರೀನಾ ಕಪೂರ್​ ನಾಯಕಿಯಾಗಿ ಅಭಿನಯಿಸಿದ್ದರು. ಆ ಚಿತ್ರದ ಪಾತ್ರಕ್ಕಾಗಿ ಅವರು ಬಿಕಿನಿ ಧರಿಸಿ ನಟಿಸಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಪ್ರಚಾರದ ಸಲುವಾಗಿ ದೆಹಲಿಗೆ ತೆರಳಿದ್ದರು. ಸುದ್ದಿಗೋಷ್ಠಿಯಲ್ಲಿ ಬಿಕಿನಿ ಲುಕ್​ ಬಗ್ಗೆಯೂ ಮಾತನಾಡಿದರು. ಆಗಲೇ ಒಬ್ಬ ರಿಪೋರ್ಟರ್​ ಕಡೆಯಿಂದ ಅನಿರೀಕ್ಷಿತ ಪ್ರಶ್ನೆ ತೂರಿಬಂತು. ‘ಪಾತ್ರಕ್ಕಾಗಿ ನೀವು ಬೆತ್ತಲಾಗಿ ನಟಿಸುತ್ತೀರಾ’ ಎಂದು ಆತ ಕೇಳಿದ!

ಈ ಪ್ರಶ್ನೆಗೆ ಕರೀನಾ ಏನು ಉತ್ತರ ನೀಡಬಹುದು ಎಂದು ಎಲ್ಲರೂ ಅಚ್ಚರಿಯಿಂದ ನಿರೀಕ್ಷಿಸಿದರು. ಆದರೆ ಕರೀನಾ ಪ್ರತಿಕ್ರಿಯೆ ಇನ್ನಷ್ಟು ಶಾಕಿಂಗ್​ ಆಗಿತ್ತು. ಆ ಪ್ರಶ್ನೆಯಿಂದ ಅವರಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಯಿತು. ಹಾಗಾಗಿ ಅವರು ಸುದ್ದಿಗೋಷ್ಠಿ ನಡೆಯುತ್ತಿದ್ದ ಸ್ಥಳದಿಂದ ಕೂಡಲೇ ಹೊರಟುಬಿಟ್ಟರು. ನಂತರ ಚಿತ್ರದ ನಿರ್ದೇಶಕ ಸಬ್ಬೀರ್​ ಖಾನ್​ ಅವರು ಕಾರ್ಯಕ್ರಮ ಮುಂದುವರಿಸಿ, ಸಿನಿಮಾ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಇತ್ತೀಚೆಗೆ ಮತ್ತೊಂದು ವಿಚಾರಕ್ಕೆ ಕರೀನಾ ಹೆಸರು ವಿವಾದದಲ್ಲಿ ಸಿಲುಕಿಕೊಂಡಿತ್ತು. ಸಿನಿಮಾವೊಂದರಲ್ಲಿ ಸೀತೆ ಪಾತ್ರ ಮಾಡಲು ಅವರು 12 ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜವೋ ಸುಳ್ಳೋ ಎಂಬುದು ಗೊತ್ತಾಗುವುದಕ್ಕೂ ಮುನ್ನವೇ ಒಂದು ವರ್ಗದ ನೆಟ್ಟಿಗರು ಕರೀನಾ ವಿರುದ್ಧ ಸಿಟ್ಟಾಗಿದ್ದರು.

ಮುಸ್ಲಿಂ ವ್ಯಕ್ತಿ (ಸೈಫ್​ ಅಲಿ ಖಾನ್) ಜೊತೆ ಮದುವೆ ಆಗಿರುವ ಕರೀನಾ ಅವರು ಸೀತೆ ಪಾತ್ರ ಮಾಡಿದರೆ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಹಲವರು ಟ್ವಿಟರ್​ನಲ್ಲಿ ವಾದ ಮಂಡಿಸಿದ್ದಾರೆ. ‘ಸೈಫ್​ ಅಲಿ ಖಾನ್​ ನಟನೆಯ ತಾಂಡವ್​ ವೆಬ್​ ಸರಣಿಯಲ್ಲಿ ಹಿಂದುಗಳಿಗೆ ಅವಮಾನ ಮಾಡುವಂತಹ ದೃಶ್ಯ ಇತ್ತು. ಈಗ ಕರೀನಾ ಕೈಯಿಂದಲೂ ಅದನ್ನೇ ಮಾಡಿಸುವುದು ಬೇಡ’ ಎಂದು ಕೆಲವರು ಕಿಡಿಕಾರಿದ್ದರು.

‘ಹಿಂದುತ್ವದ ಮೇಲೆ ನಂಬಿಕೆ ಇಲ್ಲದ ಯಾವುದೇ ನಟಿಯೂ ಸೀತೆಯ ಪಾತ್ರವನ್ನು ಮಾಡುವಂತಿಲ್ಲ. ಬಾಲಿವುಡ್​ನ ಫಿಲ್ಮ್​ ಮಾಫಿಯಾವು ಹಿಂದು ಧರ್ಮಕ್ಕೆ ವಿಷ ಹರಡುತ್ತದೆ. ಈ ರೀತಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಎಲ್ಲ ನಟ-ನಟಿಯರನ್ನು ನಾವು ಬಹಿಷ್ಕರಿಸಬೇಕು’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದರು. #BoycottKareenaKapoorKhan ಎಂದು ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಮಾಡಲಾಗಿತ್ತು.

ಇದನ್ನೂ ಓದಿ:

ಸೀತೆ ಪಾತ್ರಕ್ಕೆ 12 ಕೋಟಿ ಕೇಳಿದ್ರಾ ಕರೀನಾ ಕಪೂರ್​ ಖಾನ್​? ವಿಷ್ಯ ಬೇರೆಯೇ ಇದೆ ಅಂತಿವೆ ಮೂಲಗಳು

ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada