‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು

ಕಲರ್ಸ್​ ಕನ್ನಡ ವಾಹಿನಿ ರಾಜಾ-ರಾಣಿ ಹೆಸರಿನ ಹೊಸ ಶೋ ಆರಂಭಿಸಿದೆ. ಈ ಶೋನಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡ ಧಾರಾವಾಹಿ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಆಗಮಿಸಿದ್ದಾರೆ.

‘ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ’; ಇಶಿತಾ ಬಗ್ಗೆ ಪತಿಯ ದೂರು
ಬೀದಿಯಲ್ಲಿ ಹೋಗುವ ನಾಯಿಗೂ, ನನಗೂ ಒಂದೇ ಹೆಸರಲ್ಲಿ ಕರೀತಾಳೆ; ಇಶಿತಾ ಬಗ್ಗೆ ಪತಿಯ ದೂರು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 20, 2021 | 7:56 PM

ಪ್ರೀತಿ ಹೆಚ್ಚಾದಾಗ ಪತಿಯನ್ನು ನಾನಾ ಹೆಸರಿನಿಂದ ಹೆಂಡತಿಯರು ಕೂಗುತ್ತಾರೆ. ಇನ್ನು ಕೋಪ ಹೆಚ್ಚಾದಾಗ ಹೆಂಡತಿಯರು ಏರು ಧ್ವನಿಯಲ್ಲಿ ಮಾತನಾಡಿ ಗಂಡಂದಿರನ್ನು ಬೈಯುತ್ತಾರೆ. ಇದು ಸಾಮಾನ್ಯರ ಮನೆಯಿಂದ ಹಿಡಿದು ಸೆಲೆಬ್ರಿಟಿಗಳ ಮನೆಯವರೆಗೂ ನಡೆದೇ ಇದೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡ ನಟಿ ಇಶಿತಾ ವರ್ಷಾ ಮನೆಯಲ್ಲೂ ಇದೇ ಕಥೆ. ಈ ಬಗ್ಗೆ ‘ರಾಜಾ-ರಾಣಿ’ ವೇದಿಕೆ ಮೇಲೆ ಇಶಿತಾ ಹೇಳಿಕೊಂಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿ ರಾಜಾ-ರಾಣಿ ಹೆಸರಿನ ಹೊಸ ಶೋ ಆರಂಭಿಸಿದೆ. ಈ ಶೋನಲ್ಲಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡ ಧಾರಾವಾಹಿ ಕಲಾವಿದರು, ರಿಯಾಲಿಟಿ ಶೋ ಸ್ಪರ್ಧಿಗಳು ಆಗಮಿಸಿದ್ದಾರೆ. ಪ್ರತಿ ವಾರ ನಾನಾ ರೀತಿಯ ಟಾಸ್ಕ್​ಗಳನ್ನು ಅವರಿಗೆ ನೀಡಲಾಗುತ್ತಿದೆ. ಇದರ ಜತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಒಂದಷ್ಟು ವಿಚಾರ ಕೇಳಲಾಗುತ್ತದೆ. ಅದೇ ರೀತಿ ಇಶಿತಾ ವರ್ಷ ಹಾಗೂ ಅವರ ಪತಿ ಮುರುಗ ವೈಯಕ್ತಿಕ ಜೀವನದ ಒಂದಷ್ಟು ವಿಚಾರ ಹೊರ ಬಿದ್ದಿದೆ.

‘ಇಶಿತಾ ವರ್ಷಾ ಕೋಪ ಬಂದಾಗ ಪತಿಯನ್ನು ಯಾವ ಶಬ್ದದಿಂದ ಬಯ್ಯುತ್ತಾರೆ’ ಎಂದು ಪ್ರಶ್ನಿಸಿದರು ನಿರೂಪಕಿ ಅನುಪಮಾ ಗೌಡ. ಇದಕ್ಕೆ ಇಶಿತಾ ‘ನಾನು ಯಾವುದೇ ಶಬ್ದದಿಂದಲೂ ಬಯ್ಯುವುದಿಲ್ಲ. ಮುರುಗ ಎಂದು ಏರು ಧ್ವನಿಯಲ್ಲಿ ಮಾತನಾಡುತ್ತೆನೆ. ಆಗ ಅವರಿಗೆ ಗೊತ್ತಾಗುತ್ತದೆ’ ಎಂದರು. ಹಾಗಾದರೆ, ಪ್ರೀತಿ ಹೆಚ್ಚಾದಾಗ ಯಾವ ಪದ ಬಳಕೆ ಮಾಡುತ್ತಾರೆ ಎಂದು ಕೇಳಲಾಯಿತು. ಈ ವೇಳೆ ಮುರುಗ ‘ಸೋನು’ ಎಂದು ಆಕೆ ಕರೆಯುತ್ತಾರೆ ಎಂದು ಉತ್ತರಿಸಿದರು.

ಮುಂದುವರಿದು, ‘ನನ್ನನ್ನೂ ಸೋನು ಅಂತಾಳೆ, ಅಲ್ಲಿ ರಸ್ತೆಯಲ್ಲಿ ಹೋಗುವ ನಾಯಿಯನ್ನೂ ಸೋನು ಎನ್ನುತ್ತಾಳೆ’ ಎಂದು ನಗುತ್ತಲೇ ಸೃಜನ್​ ಬಳಿ ದೂರು ಹೇಳಿಕೊಂಡರು ಮುರುಗ. ಈ ಮಾತನ್ನು ಕೇಳಿ ನಿರೂಪಕಿ ಅನುಪಮಾ ಗೌಡ, ಜಡ್ಜ್​ಗಳಾದ ಹಿರಿಯ ನಟಿ ತಾರಾ ಹಾಗೂ ಸೃಜನ್​ ಲೋಕೇಶ್​ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ‘ರಾಜಾ-ರಾಣಿ’ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಕಷ್ಟಕಾಲದಲ್ಲಿ ಮಾರಿದ್ದ ಪ್ರೀತಿಯ ಕಾರನ್ನು ಹುಡುಕಿ ಇಶಿತಾಗೆ ಗಿಫ್ಟ್​ ಮಾಡಿದ ಪತಿ ಮುರುಗ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ