ದೀಪಾವಳಿ ಹಬ್ಬ ಸಂದರ್ಭದಲ್ಲಿ ಸಾಲು ಸಾಲು ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ

ದೀಪಾವಳಿ ಹಬ್ಬ ಸಂದರ್ಭದಲ್ಲಿ ಸಾಲು ಸಾಲು ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2021 | 7:03 PM

ದೀಪಾವಳಿ ಹಬ್ಬದ ಸಂದರ್ಭದಲ್ಲೂ ಹಲವಾರು ದ್ವಿಚಕ್ರ ವಾಹನ ಕಂಪನಿಗಳು ಹೊಸ ಮಾಡೆಲ್​ಗಳನ್ನು ಲಾಂಚ್ ಮಾಡುತ್ತಿವೆ. ಬಜಾಜ್ ಸಂಸ್ಥೆಯು ಹೊಸ 250 ಸಿಸಿ ಪಲ್ಸರ್ ಬೈಕ್ ಲಾಂಚ್ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ದೀಪಗಳ ಹಬ್ಬ ದೀಪಾವಳಿ ಹತ್ತಿರದಲ್ಲಿದೆ. ದಸರಾ ಹಬ್ಬ ಮುಗಿದಾಕ್ಷಣ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗುತ್ತದೆ. ನಮ್ಮ ದೇಶದಲ್ಲಿ ಹಬ್ಬಗಳ ಸಂದರ್ಭದಲ್ಲಿ ಬಟ್ಟೆಗಳ ಜೊತೆಗೆ ಹೊಸ ವಸ್ತುಗಳನ್ನೂ ಖರೀದಿಸುವ ಪರಿಪಾಠ ಬೆಳೆದುಬಿಟ್ಟಿದೆ. ನಮ್ಮ ಪ್ರವೃತ್ತಿ, ಮೋಟಾರು ವಾಹನಗಳನ್ನು ತಯಾರಿಸುವ ಇಲೆಕ್ಟ್ರಾನಿಕ್ಸ್ ಉಪಕರಣ, ಮೊಬೈಲ್ ಫೋನ್​ಗಳನ್ನು  ತಯಾರಿಸುವ ಕಂಪನಿಗಳಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗೇ, ಹಬ್ಬಗಳ ಸೀಸನಲ್ಲಿ ಅವರು ಹೊಸ ಪ್ರಾಡಕ್ಟ್​ಗಳನ್ನು ಲಾಂಚ್ ಮಾಡುತ್ತಾರೆ ಇಲ್ಲವೇ ತಮ್ಮ ಪ್ರಾಡಕ್ಟ್ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಪ್ರಕಟಿಸುತ್ತಾರೆ.

ದ್ವಿಚಕ್ರ ವಾಹನಗಳ ಹೊಸ ಮಾಡೆಲ್​ಗಳು, ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ವಿಷಯವನ್ನು ನಾವು ನಿಮ್ಮ ಗಮನಕ್ಕೆ ತರುತ್ತಲೇ ಇದ್ದೇವೆ. ದೀಪಾವಳಿ ಹಬ್ಬದ ಸಂದರ್ಭದಲ್ಲೂ ಹಲವಾರು ದ್ವಿಚಕ್ರ ವಾಹನ ಕಂಪನಿಗಳು ಹೊಸ ಮಾಡೆಲ್​ಗಳನ್ನು ಲಾಂಚ್ ಮಾಡುತ್ತಿವೆ. ಬಜಾಜ್ ಸಂಸ್ಥೆಯು ಹೊಸ 250 ಸಿಸಿ ಪಲ್ಸರ್ ಬೈಕ್ ಲಾಂಚ್ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕೆಲವೇ ದಿನಗಳ ಹಿಂದೆ ನಾವು ಟಿವಿಎಸ್ ಜೂಪಿಟರ್ 125 ಸಿಸಿ ಸ್ಕೂಟರ್ ಕುರಿತು ಚರ್ಚೆ ಮಾಡಿದ್ದೆವು. ಅದು ದಿವಾಳಿ ಹಬ್ಬದಂದು ಲಾಂಚ್ ಆಗುತ್ತಿದೆ. ಯುವ ಜನಾಂಗದ ಕ್ರೇಜ್ ಅನಿಸಿರುವ ಕೆಟಿಎಮ್ ಅರ್ ಸಿ 390 ಬೈಕನ್ನು ನಿರೀಕ್ಷಿಸುತ್ತಿದ್ದವರಿಗೂ ಶುಭ ಸಮಾಚಾರವಿದೆ. ಈ ಬೈಕು ನಿಮಗೆ ಬಲಿಪಾಢ್ಯಮಿ ದಿನದಂದಯ ಸಿಗಲಿದೆ. ಇನ್ನೂ ಬುಕಿಂಗ್ ಮಾಡಿಲ್ಲವಾದರೆ, ಈಗಲೇ ಹೊರಡಿ.

ಹಿರೋ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೀಪಾವಳಿಗೆ ಲಾಂಚ್ ಮಾಡುತ್ತಿದ್ದರೆ, ಬಿ ಎಮ್ ಡಬ್ಲ್ಯೂ ತನ್ನ 400 ಜಿಟಿ ಸ್ಕೂಟರ್ ಮಾರ್ಕೆಟ್ ಗೆ ಬಿಡುಗಡೆ ಮಾಡುತ್ತಿದೆ. ಹಾಗೆಯೇ ಹೊಂಡಾ ಸಂಸ್ಥೆ ಸಹ ತನ್ನ ಹೊಸ ಮಾಡೆಲ್​ಗಳ ನ್ನು ಲಾಂಚ್ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ:   Viral Video: ಹೋಮ್​ವರ್ಕ್​ ಮಾಡಲು ಬಾಲಕನಿಗೆ ಸಹಾಯ ಮಾಡುತ್ತಿರುವ ಶ್ವಾನ; ಸ್ನೇಹಿತರಿಬ್ಬರ ಕ್ಯೂಟ್ ವಿಡಿಯೋ ವೈರಲ್