ಸಾಮಾನ್ಯವಾಗಿ ಶ್ವಾನದ ತುಂಟಾಟದ ದೃಶ್ಯಗಳು ಹೆಚ್ಚು ಮನಗೆಲ್ಲುವುದಂತೂ ಸತ್ಯ. ಮನುಷ್ಯರು ಎಷ್ಟು ಪ್ರೀತಿ ತೋರಿಸುತ್ತಾರೋ ಅದಕ್ಕಿಂತ ಹೆಚ್ಚಿನ ಪ್ರೀತಿ ಕಾಳಜಿಯನ್ನು ಮನೆಯಲ್ಲಿ ಸಾಕಿದ ಶ್ವಾನ ತೋರಿಸುತ್ತದೆ. ಯಾವಾಗಲೂ ಮನೆಯ ಕಾವಲಾಗಿ ಮನೆಯವರ ರಕ್ಷಣೆಗಾಗಿ ನಿಲ್ಲುತ್ತದೆ. ಮನೆಯವರ ಸಹಾಯಕ್ಕೆ ನಿಲ್ಲತ್ತಾ ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಪುಟ್ಟ ಬಾಲಕ ಮತ್ತು ಶ್ವಾನದ ನಡುವಿನ ಸ್ನೇಹದ ದೃಶ್ಯ ಇದೀಗ ನೆಟ್ಟಿಗರ ಮನ ಗೆದ್ದಿದೆ.
ಪುಟ್ಟ ಬಾಲಕನಿಗೆ ಹೋಮ್ವರ್ಕ್ ಮಾಡಲು ಶ್ವಾನ ಸಹಾಯ ಮಾಡುತ್ತಿದೆ. ಇಬ್ಬರೂ ಸ್ನೇಹಿತರು ಖುಷಿಯಿಂದ ಕಂಪ್ಯೂಟರ್ ಮುಂದೆ ಕುಳಿತಿರುವುದನ್ನು ನೋಡಬಹುದು. ಇವರಿಬ್ಬರ ಸ್ನೇಹದ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ವಾನ ಮತ್ತು ಬಾಲಕನ ಸ್ನೇಹ ತುಂಬಾ ಸುಂದರವಾಗಿದೆ ಎಂದು ಓರ್ವರು ಹೇಳಿದ್ದಾರೆ. ಅತ್ಯುತ್ತಮ ಹೋಮ್ವರ್ಕ್ ಫ್ರೆಂಡ್ ಎಂದು ಮತ್ತೋರ್ವರು ತಿಳಿಸಿದ್ದಾರೆ. ಮನಗೆದ್ದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
View this post on Instagram
ವಿಡಿಯೋವನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ತುಂಬಾ ಮುದ್ದಾಗಿದೆ ಎಂಬ ಪ್ರತಿಕ್ರಿಯೆ ಕೇಳಿ ಬಂದಿದೆ. ಇವರಿಬ್ಬರ ಹೋಮ್ವರ್ಕ್ ವ್ಯವಹಾರ ಅವರಿಗೇ ಗೊತ್ತು ಎಂದು ಓರ್ವರು ಹೇಳಿದ್ದಾರೆ. ವಿಡಿಯೋ ಹಂಚಿಕೊಂಡಾಗಿನಿಂದ 29,000 ಕ್ಕೂ ಲೈಕ್ಸ್ಗಳು ಲಭ್ಯವಾಗಿವೆ. ವಿಡಿಯೋಗೆ ಪ್ರತಿಕ್ರಿಸುವಾಗ ಕೆಲವರು ಉಲ್ಲಾಸದ ಎಮೋಜಿ ಕಳುಹಿಸುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
Viral Video: ವಧು ವರರನ್ನು ಒಟ್ಟಿಗೆ ಮೇಲಕ್ಕೆತ್ತಿ ಕೆಳಗೆ ಬೀಳಿಸಿದ ಸ್ನೇಹಿತ; ವಿಡಿಯೋ ಇದೀಗ ಫುಲ್ ವೈರಲ್
Viral Video: ರೆಡ್ ರೋಸ್ ಕೊಟ್ಟು ಹೆಂಡತಿಯ ಮನ ಗೆದ್ದ ಗಂಡ; ರಿಯಾಕ್ಷನ್ ಹೇಗಿತ್ತು ನೋಡಿ