ದಿನಗೂಲಿ ಮಾಡಿ ಬದುಕುವವರು ನಾವು, ಇನ್ನು ದೇವರು ನಡೆಸಿದಂತೆ ನಮ್ಮ ಬದುಕು ಎನ್ನುತ್ತಾರೆ ಕಮಲಾನಗರದ ನತದೃಷ್ಟ ಮಹಿಳೆಯರು!

ದಿನಗೂಲಿ ಮಾಡಿ ಬದುಕುವವರು ನಾವು, ಇನ್ನು ದೇವರು ನಡೆಸಿದಂತೆ ನಮ್ಮ ಬದುಕು ಎನ್ನುತ್ತಾರೆ ಕಮಲಾನಗರದ ನತದೃಷ್ಟ ಮಹಿಳೆಯರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2021 | 8:01 PM

ರಾಜ್ಯದ ರಾಜಧಾನಿ ಬೆಂಗಳೂರಿನ ಕಮಲಾನಗರದಲ್ಲಿ ಮೂರು ಅಂತಸ್ತಿನ ಮನೆಯ ಅಡಿಪಾಯ ಶಿಥಿಲಗೊಂಡು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅದನ್ನು ಬೃಹತ್ ಬೆಂಗಳೂರು ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣೆ ದಳ ಸಿಬ್ಬಂದಿ ಅದನ್ನು ಕೆಡವುವ ಸಿದ್ಧತೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಮನೆಗಳಲ್ಲಿ ವಾಸವಿದ್ದ ಜನ ಅತಂತ್ರರಾಗಿ ಬೀದಿಯಲ್ಲಿ ಅಸಹಾಯಕರಾಗಿ ನಿಂತು ಸಮಯ ಕಳೆಯುವ ಪರಿಸ್ಥಿತಿ ಎದುರಾಗಿದೆ. ಮುಂದಿನ ಬದುಕು ಹೇಗೆ ಅನ್ನೋದು ಅವರಿಗೆ ಗೊತ್ತಿಲ್ಲ. ಟಿವಿ9 ವರದಿಗಾರ ಅವರೊಂದಿಗೆ ಮಾತಾಡಿದಾಗ ಮನೆ ಕಳೆದುಕೊಂಡಿರುವ ಕುಟುಂಬಗಳ ಮಹಿಳೆಯರು ಅದನ್ನೇ ಹೇಳಿದರು. ತಾನು […]

ರಾಜ್ಯದ ರಾಜಧಾನಿ ಬೆಂಗಳೂರಿನ ಕಮಲಾನಗರದಲ್ಲಿ ಮೂರು ಅಂತಸ್ತಿನ ಮನೆಯ ಅಡಿಪಾಯ ಶಿಥಿಲಗೊಂಡು ಕಟ್ಟಡ ಕುಸಿಯುವ ಹಂತದಲ್ಲಿದ್ದು ಅದನ್ನು ಬೃಹತ್ ಬೆಂಗಳೂರು ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣೆ ದಳ ಸಿಬ್ಬಂದಿ ಅದನ್ನು ಕೆಡವುವ ಸಿದ್ಧತೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಮನೆಗಳಲ್ಲಿ ವಾಸವಿದ್ದ ಜನ ಅತಂತ್ರರಾಗಿ ಬೀದಿಯಲ್ಲಿ ಅಸಹಾಯಕರಾಗಿ ನಿಂತು ಸಮಯ ಕಳೆಯುವ ಪರಿಸ್ಥಿತಿ ಎದುರಾಗಿದೆ. ಮುಂದಿನ ಬದುಕು ಹೇಗೆ ಅನ್ನೋದು ಅವರಿಗೆ ಗೊತ್ತಿಲ್ಲ. ಟಿವಿ9 ವರದಿಗಾರ ಅವರೊಂದಿಗೆ ಮಾತಾಡಿದಾಗ ಮನೆ ಕಳೆದುಕೊಂಡಿರುವ ಕುಟುಂಬಗಳ ಮಹಿಳೆಯರು ಅದನ್ನೇ ಹೇಳಿದರು.

ತಾನು ಹುಟ್ಟಿ ಬೆಳೆದಿರೋದೇ ಈ ಮನೆಯಲ್ಲಿ ಎಂದು ಈ ಮಹಿಳೆ ಹೇಳುತ್ತಾರೆ. ಮುಂದಿನ ಬದುಕು ಹೇಗೆ ಅಂತ ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ಎಲ್ಲ ಭಾರ ದೇವರ ಮೇಲೆ ಹಾಕಿದ್ದೇವೆ, ಆತ ನಡೆಸಿದಂತೆ ನಮ್ಮ ಬದುಕು ಎಂದು ಅವರು ಹೇಳುತ್ತಾರೆ. ಬಹಳ ಮುಖ್ಯವಾದ ಕಾಗದ ಪತ್ರಗಳು ಮನೆಯಲ್ಲೇ ಉಳಿದು ಬಿಟ್ಟಿವೆ ಅವುಗಳನ್ನು ತಂದುಕೊಳ್ಳವುದಕ್ಕೂ ಬಿಡುತ್ತಿಲ್ಲ ಎಂದು ಅವರು ಹತಾಷ ಧ್ವನಿಯಲ್ಲಿ ಹೇಳುತ್ತಾರೆ.

ಈ ಮಹಿಳೆಯೇ ಹೇಳುವ ಹಾಗೆ ಅಲ್ಲಿನ ಮನೆಗಳಲ್ಲಿ ವಾಸವಾಗಿರುವ ಜನರೆಲ್ಲ ಕೂಲಿ-ನಾಲಿ ಮಾಡಿಕೊಂಡು ಬದುಕು ನಡೆಸುವರು. ದಿನಗೂಲಿ ನೌಕರ ಬದುಕು ಹೇಗೆ ಅಂತ ಎಲ್ಲರಿಗೂ ಗೊತ್ತು. ಕೆಲಸಕ್ಕೆ ಹೋದರೆ ಅವತ್ತಿನ ಊಟ ಇಲ್ಲದಿದ್ದರೆ ಅದಕ್ಕೂ ಸಂಚಕಾರ.

ಇನ್ನೊಬ್ಬ ಮಹಿಳೆಯೂ ಭವಿಷ್ಯದ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಾರೆ. ಅವರ ಡಾಕ್ಯುಮೆಂಟ್ಗಳು ಸಹ ಮನೆಯಲ್ಲೇ ಇವೆ. ಕೇವಲ ಆಧಾರ್ ಕಾರ್ಡ್ ಮಾತ್ರ ತಂದುಕೊಳ್ಳಲು ಅವರಿಗೆ ಸಾಧ್ಯವಾಗಿದೆಯಂತೆ. ಬೇರೆಲ್ಲ ಸಾಮಾನುಗಳು ಮನೆಯಲ್ಲಿ ಉಳಿದುಬಿಟ್ಟಿವೆ ಅವುಗಳನ್ನು ತಂದುಕೊಳ್ಳಲು ಬಿಡುತ್ತಿಲ್ಲ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:   ಬೆಂಗಳೂರಿನಲ್ಲಿ 3-ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸವಾಗಿದ್ದ ಕುಟುಂಬಗಳು ಬೀದಿಪಾಲು