ಜಗ್ಗೇಶ್​ ಸಿನಿಮಾಗಳನ್ನು ಮರೆಯೋಕೆ ಆಗಲ್ಲ ಎಂದ ದೊಡ್ಡಣ್ಣ

ಜಗ್ಗೇಶ್​ ಅವರು ಹಾಸ್ಯ ಪಾತ್ರ ಮಾಡೋಕೆ ಎತ್ತಿದ ಕೈ. ಅಂದಿನ ಕಾಲದಲ್ಲಿ ಅವರು ಮಾಡಿದ ಸಾಕಷ್ಟು ಹಾಸ್ಯಪಾತ್ರಗಳು ಇಂದಿಗೂ ಮನೆ ಮಾತಾಗಿದೆ.

ದೊಡ್ಡಣ​ ಅವರು ಸಾಕಷ್ಟು ನಟರ ಜತೆ ನಟಿಸಿದ ಅನುಭವ ಹೊಂದಿದ್ದಾರೆ. ಸ್ಯಾಂಡಲ್​ವುಡ್​ನ ಅನೇಕ ಕಲಾವಿದರಿಗೆ ಅವರು ಇಂದಿಗೂ ಮಾದರಿ. ಈಗ ದೊಡ್ಡಣ​ ಅವರು ತಮ್ಮ ನಟನೆ ಅನುಭವವನ್ನು ಟಿವಿ9 ಕನ್ನಡದ ಜತೆಗೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಜಗ್ಗೇಶ್​ ಬಗ್ಗೆ ಮಾತನಾಡಿದ್ದಾರೆ.

ಜಗ್ಗೇಶ್​ ಅವರು ಹಾಸ್ಯ ಪಾತ್ರ ಮಾಡೋಕೆ ಎತ್ತಿದ ಕೈ. ಅಂದಿನ ಕಾಲದಲ್ಲಿ ಅವರು ಮಾಡಿದ ಸಾಕಷ್ಟು ಹಾಸ್ಯಪಾತ್ರಗಳು ಇಂದಿಗೂ ಮನೆ ಮಾತಾಗಿದೆ. ಈಗ ದೊಡ್ಡಣ್ಣ ಅವರು ಜಗ್ಗೇಶ್​ ಅವರನ್ನು ಹಾಡಿ ಹೊಗಳಿದ್ದಾರೆ. ಕಾಮಿಡಿಗೆ ಅವರೇ ಬೆಸ್ಟ್​ ಎಂದಿದ್ದಾರೆ. ಅಲ್ಲದೆ, ಜಗ್ಗೇಶ್​ ಸಿನಿಮಾಗಳನ್ನು ಎಂದಿಗೂ ಮರೆಯೋಕೆ ಆಗಲ್ಲ ಎಂದಿದ್ದಾರೆ.

ಇನ್ನು, ಮದುವೆ ವಿಚಾರದ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ಲವ್​ ಮಾಡಿ ಮದುವೆ ಆದವನಲ್ಲ. ಮದುವೆ ಆದ ಮೇಲೆ ಲವ್​ ಮಾಡಿದೆ. ಮದುವೆ ಆಗುವ ಹುಡುಗಿಯನ್ನು ನಾನು ನೋಡಿರಲಿಲ್ಲ. ತಾಳಿ ಕಟ್ಟುವಾಗಲೇ ಮುಖ ನೋಡಿದ್ದು! ಹೆಣ್ಣು ನೋಡುವಾಗ ಹುಡುಗಿ ಚೆನ್ನಾಗಿಲ್ಲ ಅಂತ ಹೇಳಲು ಬಾಯಿ ತೆಗೆದಿದ್ದೆ. ಆಗ ಅಣ್ಣ ರಪ್​ ಅಂತ ಹೊಡೆದಿದ್ದ. ಇಂಥ ಒಳ್ಳೆಯ ಹುಡುಗಿ ಸಿಕ್ಕಿದ್ದು ನಿನ್ನ ಪುಣ್ಯ ಅಂತ ಹೇಳಿದ್ದ’ ಎಂದು ಆ ದಿನಗಳನ್ನು ದೊಡ್ಡಣ್ಣ ನೆಪಿಸಿಕೊಂಡಿದ್ದರು.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ಶೂಟಿಂಗ್​ನಲ್ಲಿ ಮಕ್ಕಳಿಗಾಗಿ ಹಾಲಿನ ಟ್ಯಾಂಕರ್​ ತರಿಸಿದ್ದರು ರವಿಚಂದ್ರನ್​: ದೊಡ್ಡಣ್ಣ

Click on your DTH Provider to Add TV9 Kannada