20 ವರ್ಷಗಳಷ್ಟು ಹಿಂದಿದ್ದ ಭೂಮಿಯ ಹೊಳಪು ಈಗಿಲ್ಲ, ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಪರಿಣಾಮ ಇದು!

ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಪ್ರಮಾಣದ ಶೇಕಡ 30ರಷ್ಟು ಪ್ರತಿಫಲನಗೊಳ್ಳುತ್ತದೆ. ಇದರಲ್ಲಿ ಶೇಕಡ 0.5 ರಷ್ಟು ಕಮ್ಮಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

20 ವರ್ಷಗಳಷ್ಟು ಹಿಂದಿದ್ದ ಭೂಮಿಯ ಹೊಳಪು ಈಗಿಲ್ಲ ಅದು ಕಳೆಗುಂದಿದೆ ಎಂದರೆ ನೀವು ನಂಬ್ತೀರಾ? ಅಧ್ಯಯನವೊಂದರ ಪ್ರಕಾರ, ಸಾಗರಗಳಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಭೂಮಿಯ ಹೊಳಪು ಕಡಿಮೆಯಾಗುತ್ತಾ ಸಾಗಿದ್ದು, ಎರಡು ದಶಕಗಳ ಹಿಂದೆ ಇದ್ದ ಹೊಳಪು ಈಗ ಭೂಮಿಯ ಪ್ರತಿ ಸ್ಕ್ವೇರ್ ಮೀಟರ್​ಗೆ ಅರ್ಧ ವ್ಯಾಟ್ ನಷ್ಟು ಕಡಿಮೆಯಾಗಿದೆ. ಜಿಯೋಫಿಸಿಕಲ್ ರೀಸರ್ಚ್ ಲೆಟರ್ಸ್ ಜರ್ನಲ್​ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಸಂಶೋಧಕರು ಚಂದ್ರನ ಮೇಲೆ ಪ್ರತಿಫಲನಗೊಳ್ಳುವ ಭೂಮಿಯ ಹೊಳಪನ್ನು ದಶಕಗಳವರಗೆ ಅಧ್ಯಯನ ನಡೆಸಿ ಈ ಅಂಶವನ್ನು ಪತ್ತೆ ಮಾಡಿದ್ದಾರೆ.

ಕಳೆದೆರಡು ದಶಕಗಳಲ್ಲಿ ಭೂಮಿಯಿಂದ ಪ್ರತಿಫಲನಗೊಳ್ಳುವ ಹೊಳಪಿನ ಪ್ರಮಾಣವೂ ಕುಂದಿರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 20 ವರ್ಷಗಳ ಭೂಮಿಯಿಂದ ಪ್ರತಿಫಲನಗೊಳ್ಳುತ್ತಿದ್ದ ಹೊಳಪಿನಲ್ಲಿ ಪ್ರತಿ ಸ್ಕ್ವೇರ್ ಮೀಟರ್​ಗೆ ಅರ್ಧ ವ್ಯಾಟಿನಷ್ಟು ಕಮ್ಮಿಯಾಗಿದೆ ಎಂದು ಹೇಳಿರುವ ಸಂಶೋಧಕರು, ಕಳೆದ ಮೂರು ವರ್ಷಗಳಲ್ಲಿ ಕುಂದುವ ಪ್ರಮಾಣ ಹೆಚ್ಚಾಗಿದೆಯೆಂದು ಹೇಳಿದ್ದಾರೆ.

ಭೂಮಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಪ್ರಮಾಣದ ಶೇಕಡ 30ರಷ್ಟು ಪ್ರತಿಫಲನಗೊಳ್ಳುತ್ತದೆ. ಇದರಲ್ಲಿ ಶೇಕಡ 0.5 ರಷ್ಟು ಕಮ್ಮಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಶೋಧಕರು ಸಂಗ್ರಹಿದ ಡಾಟಾವನ್ನು ಕಳೆದ ವರ್ಷಗಳಿಗೆ ಹೋಲಿಸಿದಾಗ, ಭೂಮಿಯ ಹೊಳಪು ಕಳೆಗುಂದುತ್ತಿರುವುದು ಸ್ಪಷ್ಟವಾಗಿದೆ. ಭೂಮಿಯನ್ನು ತಲುಪುವ ಸೂರ್ಯನ ಬೆಳಕಿನ ಮೇಲೆ ಎರಡು ಅಂಶಗಳು ಪ್ರಭಾವ ಬೀರುತ್ತಿವೆ. ಸೂರ್ಯನ ಪ್ರಖರತೆ ಮತ್ತು ಭೂಮಿಯು ಪ್ರತಿಫಲನಾ ಶಕ್ತಿ.

ಇದನ್ನೂ ಓದಿ:  ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್

Click on your DTH Provider to Add TV9 Kannada