ಮುರುಗನ್​ ಅಂದರೆ ದೇವರು, ಅವರು ನಮ್ಮ ಕೈಬಿಡಲ್ಲ; ಕೇಂದ್ರ ಸಚಿವರ ಬಗ್ಗೆ ಶಿವರಾಜ್​ಕುಮಾರ್​ ಮಾತು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಡಾ|ಎಲ್. ಮುರುಗನ್ ಭೇಟಿ ನೀಡಿದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಡಾ|ಎಲ್. ಮುರುಗನ್ ಭೇಟಿ ನೀಡಿದರು. ಈ ವೇಳೆ ಕರ್ನಾಟಕದಲ್ಲಿ ಅನಿಮಲ್ ವೆಲ್ಫೇರ್ ಬೋರ್ಡ್ ಸ್ಥಾಪನೆ, ಬೆಂಗಳೂರಿನಲ್ಲಿ ಹಿಂದಿ ಡಬ್ಬಿಂಗ್ ಚಿತ್ರಗಳ ಸೆನ್ಸಾರ್​​ಗೆ ಅವಕಾಶ, ದೂರದರ್ಶನದಲ್ಲಿ ಎಲ್ಲಾ ಚಿತ್ರಗಳನ್ನು ಪ್ರಸಾರ ಮಾಡುವ ಬಗ್ಗೆ ಹೆಚ್ಚುವರಿ ಮತ್ತೊಬ್ಬ ಸೆನ್ಸಾರ್ ಅಧಿಕಾರಿ ನೇಮಿಸುವ ಕುರಿತು ಚರ್ಚೆ ನಡೆದಿದೆ.

ಸಭೆಗೆ ನಟ ಶಿವರಾಜ್​ಕುಮಾರ್ ಭೇಟಿ ನೀಡಿದರು. ‘ಅನಿಮಲ್ ಬೋರ್ಡ್ ಸಮಸ್ಯೆ ಯಾವಾಗ್ಲು ಆಗ್ತಿದೆ. ಹಿಂದಿ ಸೆನ್ಸಾರ್ ಬೋರ್ಡ್ ಸಮಸ್ಯೆಯೂ ಹೆಚ್ಚಾಗಿದೆ. ಈಗ ಕೇಂದ್ರ ಸಚಿವರು ನಮ್ಮ ವಾಣಿಜ್ಯ ಮಂಡಳಿಗೆ ಬಂದಿದ್ದಾರೆ. ನಮ್ಮ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರು ಗಮನ ಹರಿಸಿ ಅದನ್ನು ಬಗೆ ಹರಿಸ್ತಾರೆ ಅನ್ನೋ ನಂಬಿಕೆ ಇದೆ. ಮುರಗುನ್​ ಅಂದರೆ ದೇವರು. ಆ ದೇವರು ಎಂದಿಗೂ ನಮ್ಮ ಕೈಬಿಡುವುದಿಲ್ಲ’ ಎಂದರು ಶಿವರಾಜ್​ಕುಮಾರ್​.

ಈ ಬಗ್ಗೆ ಪ್ರತಿಕ್ರಿಯಿಸಿದ ಮುರಗನ್​, ‘ನಾನು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಮಾತಮಾಡಿದ್ದೇನೆ. ನಮ್ಮ ಸರ್ಕಾರ ಚಿತ್ರರಂಗದ ಪರವಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ವೆಬ್ ಸೈಟ್ ನಲ್ಲಿ ಸಿನಿಮಾ ಶೂಟಿಂಗ್ ಬಗ್ಗೆ ಎಲ್ಲಾ ಮಾಹಿತಿ‌ ಇದೆ. ಹಿಂದಿ ಭಾಷೆ ಸೆನ್ಸಾರ್ ಕರ್ನಾಟಕದಲ್ಲೇ ಆಗಬೇಕು ಅಂತ ಮನವಿ‌‌ ಕೊಟ್ಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಹಾಯ ಆಗೋ ಹಾಗೆ ನೆನ್ಸಾರ್ ಆಗೋ ಬಗ್ಗೆ ಗಮನ ಹರಿಸುತ್ತೇವೆ. ಥಿಯೇಟರ್ ಟ್ಯಾಕ್ಸ್ ಕಟ್ಟೋದನ್ನ ಕೇಂದ್ರ ಸರ್ಕಾರ  ಮನ್ನ ಮಾಡಿದೆ. ರಾಜ್ಯ ಸರ್ಕಾರದಿಂದ 120 ಸಿನಿಮಾಗಳಿಗೆ 10 ಲಕ್ಷ ಸಬ್ಸಿಡಿ‌‌ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳ ಬ್ಯೂಸಿನೆಸ್ ಚೆನ್ನಾಗಿ ಆಗೋದಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಳುತ್ತೇವೆ. ಸಮ್ಮ ಸರ್ಕಾರ ಚಿತ್ರರಂಗದ ಜೊತೆಗಿರುತ್ತೆ’ ಎಂದರು.

ಇದನ್ನೂ ಓದಿ: ಸೇನಾಧಿಕಾರಿ ಲುಕ್​ನಲ್ಲಿ ಶಿವರಾಜ್​ಕುಮಾರ್​; ಹೊಸ ಲುಕ್​ ನೋಡಿ ಅಭಿಮಾನಿಗಳು ಫಿದಾ

Click on your DTH Provider to Add TV9 Kannada