ಫ್ಯಾಶನ್​ ಮತ್ತು ಲೈಫ್​ಸ್ಟೈಲ್ ಮ್ಯಾಗಜೀನ್​​ ಒಂದಕ್ಕೆ ‘ಲುಕಾ ಛುಪ್ಪಿ’ ಬೆಡಗಿ ಕೀರ್ತಿ ಸನೋನ್ ಕೊಟ್ಟಿರುವ ಪೋಸುಗಳು ನಿದ್ರೆಗೆಡಿಸುತ್ತವೆ!

ಮಿಮಿ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿರುವ ಕೀರ್ತಿ ಖ್ಯಾತ ಫ್ಯಾಶನ್ ಡಿಸೈನರ್ ರಿತು ಕುಮಾರ್​ ವಿನ್ಯಾಸಗೊಳಿಸಿರುವ ಗೆಜೆಲ್ಲಾ ಲೆಹೆಂಗಾನಲ್ಲಿ ನೋಡುಗರ ಕಣ್ಮನ ಸೂರೆಗೊಳ್ಳುತ್ತಾರೆ.

ಸಿನಿಮಾ ನಟಿಯರು ಚಿತ್ರಗಳಲ್ಲಿ ಬಗೆಬಗೆಯ ಉಡುಪುಗಳಲ್ಲಿ ಮಿಂಚುತ್ತಾರೆ. ಹಾಗಯೇ ತಮ್ಮ ವಾಸ್ತವ ಬದುಕಿನಲ್ಲೂ ಅವರಿಗೆ ಭಿನ್ನಬಿನ್ನವಾದ ಬಟ್ಟೆ ತೊಟ್ಟು ಜನರಿಗೆ ಕಾಣಿಸಿಕೊಳ್ಳುವಾಸೆ. ಹಬ್ಬದ ಸೀಸನ್ ಅವರಿಗೆ ಅಂಥ ಅವಕಾಶವನ್ನು ಕಲ್ಪಿಸುತ್ತದೆ. ಬಾಲಿವುಡ್ ನಟಿಯರು ನವರಾತ್ರಿ ಉತ್ಸವನಲ್ಲಿ ಬಣ್ಣ ಬಣ್ಣದ ಡ್ರೆಸ್​​, ಡಿಸೈನರ್​ ಲೆಹೆಂಗಾ ಮತ್ತು ಸೀರೆಗಳನ್ನು ಉಟ್ಟು ಭಾಗವಹಿಸಿದ ವಿಡಿಯೋಗಳನ್ನು ನಿಮಗೆ ತೋರಿಸಿದ್ದೇವೆ. ಕೀರ್ತಿ ಸನೋನ್​ ಗೊತ್ತಲ್ಲ? 31 ರ ಪ್ರಾಯದ ಬಾಲಿವುಡ್​ ನಟಿ ಹಬ್ಬದ ಸಂದರ್ಭದಲ್ಲಿ ಕೆಮೆರಾ ಕಣ್ಣಿಗೆ ಸಿಕ್ಕಿರಲಿಲ್ಲ, ಆದರೆ, ವೋಗ್​ ಇಂಡಿಯಾದ ಇತ್ತೀಚಿನ ಡಿಜಿಟಲ್​ ಆವೃತ್ತಿಯಲ್ಲಿ ಒಂದಲ್ಲ ಹತ್ತಾರು ಬಗೆಯ ಉಡುಪುಗಳಲ್ಲಿ ಅವರು ಲಕಲಕ ಹೊಳೆಯುತ್ತಿದ್ದಾರೆ. ಕೀರ್ತಿ ಸದ್ಯಕ್ಕೆ ಬಾಲವುಡ್​ ನ ಜನಪ್ರಿಯ ನಟಿಯರಲ್ಲಿ ಒಬ್ಬರು.

ಮಿಮಿ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿರುವ ಕೀರ್ತಿ ಖ್ಯಾತ ಫ್ಯಾಶನ್ ಡಿಸೈನರ್ ರಿತು ಕುಮಾರ್​ ವಿನ್ಯಾಸಗೊಳಿಸಿರುವ ಗೆಜೆಲ್ಲಾ ಲೆಹೆಂಗಾನಲ್ಲಿ ನೋಡುಗರ ಕಣ್ಮನ ಸೂರೆಗೊಳ್ಳುತ್ತಾರೆ. ನಿಮಗೆ ಕಾಣುತ್ತಿರುವ ಹಾಗೆ ಲೆಹೆಂಗಾದ ಕುಸುರಿ ಕೆಲಸ ಅದ್ಭುತವಾಗಿದೆ. ಲೆಹೆಂಗಾವನ್ನು ಅವರು ಹಾಲ್ಟರ್ ನೆಕ್​ ಚೋಲಿಯೊಂದಿಗೆ ಧರಿಸಿದ್ದಾರೆ. ಅದಕ್ಕೂ ಎಂಬ್ರಾಯ್ಡರಿ ಮಾಡಲಾಗಿದೆ. ಅಂದಹಾಗೆ ಲೆಹೆಂಗಾ ಬೆಲೆ ರೂ. 5,04,866!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೀರ್ತಿ ಹೆಚ್ಚು ಮೇಕಪ್​ ಮಾಡಿಕೊಂಡಿಲ್ಲ. ಕೂದಲನ್ನು ಕರ್ಲೀ ಮಾಡಿಕೊಂಡು ಹಾಗೆಯೇ ಭುಜದ ಮೇಲೆ ಹರವಿಕೊಂಡಿದ್ದಾರೆ.

ಅವರ ಎರಡನೇ ಡ್ರೆಸ್​ ಸಹ ರಿತು ಕುಮಾರ ಡಿಸೈನ್ ಮಾಡಿದ್ದಾರೆ. ಇದು ಐವರಿ ಬಣ್ಣದ ರೇಷ್ಮೆ ಆರ್ಗಂಜಾ ಲೆಹೆಂಗಾ ಆಗಿದ್ದು ಅದನ್ನು ಸ್ಟ್ರ್ಯಾಪಿ ಚೋಲಿಯೊಂದಿಗೆ ತೊಟ್ಟಿದ್ದಾರೆ. ಈ ಡ್ರೆಸ್​​​​ನಲ್ಲಿ ಅವರು ಕೂದಲನ್ನು ಹಾರಾಡಲು ಬಿಟ್ಟಿದ್ದಾರೆ. ಉಡುಪಿಗೆ ಒಪ್ಪುವ ಬ್ರೇಸ್ಲೆಟ್​ ಮತ್ತು ಉಂಗುರಗಳನ್ನು ಧರಿಸಿದ್ದಾರೆ. ಈ ಲೆಹೆಂಗಾದ ಬೆಲೆ ರೂ. 5,81,088.

ಅವರ ಇನ್ನೊಂದು ಉಡುಪಿನ ಬಗ್ಗೆ ನಾವು ನಿಮಗೆ ತಿಳಿಸಲೇಬೇಕು. ಸಿಲ್ವರ್ ಬಣ್ಣದ ನಜ್ಲಿ ರವಿಕೆ ಮತ್ತು ಸ್ಕರ್ಟ್​​ಗೆ ಬಣ್ಣಬಣ್ಣದ ಮತ್ತು ಕುಸುರಿ ಕೆಲಸ ಮಾಡಿರುವ ಲೆಹೆಂಗಾವನ್ನು ಜೊತೆಯಾಗಿಸಿದ್ದಾರೆ. ಸದರಿ ಡ್ರೆಸ್​​​ ಮತ್ತು ತಮ್ಮ ಸೊಬಗನ್ನು ಹೆಚ್ಚಿಸಲು ಅವರು ಕಾರ್ಟಿಯರ್​​​ನ ಬ್ರೇಸ್ಲೆಟ್​​ ಮತ್ತು ರಿಂಗ್ ಧರಿಸಿದ್ದಾರೆ.

ಇದನ್ನೂ ಓದಿ:   Video: ಏಣಿ ಮೇಲೆ ನಡೆದು ಬಂದು ಕಾರು ಹತ್ತಿದ ವ್ಯಕ್ತಿ; ಕಾರಲ್ಲೇ ಏಣಿ ಇಟ್ಟು ಪ್ರಯಾಣ! ವಿಡಿಯೋ ನೋಡಿ

Click on your DTH Provider to Add TV9 Kannada