ಕೆಮೆರಾಗಳ ಮೇಲೂ ಆಕರ್ಷಕ ರಿಯಾಯಿತಿ ಸಿಗುತ್ತಿದೆ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ!

ಪ್ರತಿಷ್ಠಿತ ಕಂಪನಿಯ ಡಿ ಎಸ್ ಎಲ್ ಆರ್ ಕೆಮೆರಾಗಳೂ ಊಹೆಗೆ ನಿಲುಕದಷ್ಟು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಕೆನಾನ್, ನಿಕ್ಕಾನ್, ಮತ್ತು ಪ್ಯಾನೊಸಾನಿಕ್ ಬ್ರ್ಯಾಂಡಿನ ಮಿರರ್ ಬೇಸ್ ಕೆಮೆರಾಗಳ ಮೇಲೆ ಹೆಚ್ಚಿನ ರಿಯಾಯಿತಿ ಸಿಗುತ್ತಿದೆ.

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಇನ್ನೂ ಜಾರಿಯಲ್ಲಿದೆ, ಇಲೆಕ್ಟ್ರಾನಿಕ್ ಸೇರಿದಂತೆ ಹಲವಾರು ಉಪಕರಣಗಳನ್ನು ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶ, ಅದನ್ನು ವ್ಯರ್ಥ ಹೋಗಗೊಡದಿರಿ. ನಿಮಗೆ ಕೆಮೆರಾಗಳ ಬಗ್ಗೆ ಆಸಕ್ತಿಯಿದ್ದರೆ ಗ್ರೇಟ್ ಇಂಡಿಯನ್ ಫೆಸ್ಟಿವಲ್​​​​ನಲ್ಲಿ ಆಕರ್ಷಕ ಆಫರ್​ಗಳು ಸಿಗುತ್ತಿವೆ. ಅತ್ಯುತ್ತಮ ಗುಣಮಟ್ಟದ ಕೆಮೆರಾಗಳನ್ನು ಅಳವಡಿಸಿರುವ ಮೊಬೈಲ್ ಫೋನ್​ಗಳು ಹೇರಳವಾಗಿ ಲಭ್ಯವಿದ್ದರೂ ಕೆಮೆರಾಗಳ ಬೇಡಿಕೆ ಮೇಲೆ ಈ ಅಂಶ ಪರಿಣಾಮ ಬೀರಿಲ್ಲವಂತೆ.

ಪ್ರತಿಷ್ಠಿತ ಕಂಪನಿಯ ಡಿ ಎಸ್ ಎಲ್ ಆರ್ ಕೆಮೆರಾಗಳೂ ಊಹೆಗೆ ನಿಲುಕದಷ್ಟು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಕೆನಾನ್, ನಿಕ್ಕಾನ್, ಮತ್ತು ಪ್ಯಾನೊಸಾನಿಕ್ ಬ್ರ್ಯಾಂಡಿನ ಮಿರರ್ ಬೇಸ್ ಕೆಮೆರಾಗಳ ಮೇಲೆ ಹೆಚ್ಚಿನ ರಿಯಾಯಿತಿ ಸಿಗುತ್ತಿದೆ. 34,995 ರೂ. ಬೆಲೆಯ ಕೆನಾನ್ ಇಒಎಸ್ ಡಿ ಎಸ್ ಎಲ್ ಆರ್ ಕೆಮೆರಾ ಅಮೇಜಾನ್ ಫೆಸ್ಟಿವಲ್ ಸೇಲ್ ನಲ್ಲಿ ರೂ. 31,938 ಕ್ಕೆ ಸಿಗಲಿದೆ.

ಕೆನಾನ್ ಪವರ್ ಶಾಟ್ ಎಸ್ ಎಕ್ಸ್ 430 ಐಎಸ್ 20 ಎಮ್ ಪಿ ಕೆಮೆರಾದ ಎಮ್ ಆರ್ ಪಿ 18,985 ರೂ. ಆಗಿದ್ದರೆ ಸೇಲ್​ನಲ್ಲಿ  ರೂ. 16,999 ಕ್ಕೆ ಸಿಗಲಿದೆ.

ಹಾಗೆಯೇ, ನಿಕ್ಕಾನ್ ಡಿಜಿಟಲ್ 5600 ಕೆಮೆರಾ ಅಮೇಜಾನ್ ಸೇಲ್​ನಲ್ಲಿ 51,489 ರೂ. ಗಳಿಗೆ ಸಿಗಲಿದೆ. ಪ್ಯಾನೊಸಾನಿಕ್ ಲುಮಿಕ್ಸ್ ಜಿ7 4ಕೆ ಮಿರರ್ ಬೇಸ್ ಕೆಮೆರಾ ರೂ. 91,299 ಗಳಿಗೆ ಮಾರಾಟವಾಗುತ್ತಿದೆ. ವಿಡಿಯೋ ರಿಕಾರ್ಡಿಂಗ್ ಗೆ ಇದು ಅತ್ಯುತ್ತಮ ಕೆಮೆರಾ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು

Click on your DTH Provider to Add TV9 Kannada